ಶಿವಮೊಗ್ಗ ಸಿಟಿಯಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್‌ ಮರ, ವಾಹನ ಸಂಚಾರ ವ್ಯತ್ಯಯ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIMOGA, 29 JULY 2024 : ಗಾಂಧಿ ಪಾರ್ಕ್‌ನಲ್ಲಿದ್ದ ಬೃಹತ್‌ ಮರವೊಂದು (Tree) ಧರೆಗುರುಳಿದೆ. ಬಾಲರಾಜ್‌ ಅರಸ್‌ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿರುವುದರಿಂದ ವಾಹನ ಸಂಚಾರ ವ್ಯತ್ಯಯವಾಗಿದೆ.

ಗಾಂಧಿ ಪಾರ್ಕ್‌ನಲ್ಲಿದ್ದ ಬೃಹತ್‌ ಮರವೊಂದು ಸಂಜೆ ವೇಳೆಗೆ ಬುಡಮೇಲಾಗಿದೆ. ಭೋವಿ ಸಮುದಾಯ ಭವನದ ಮುಂಭಾಗ ಬಾಲರಾಜ ಅರಸ್‌ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ವಿದ್ಯುತ್‌ ತಂತಿಗಳು ತುಂಡಾಗಿವೆ. ವಾಹನಗಳಿಗು ಹಾನಿಯಾಗಿದೆ ಎನ್ನಲಾಗಿದೆ. ಅರಣ್ಯ ಇಲಾಖೆ, ಮಹಾನಗರ ಪಾಲಿಕೆ ಮತ್ತು ಮೆಸ್ಕಾಂ ಸಿಬ್ಬಂದಿ ಕೂಡಲೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ.

Tree-Falls-on-Balaraj-urs-road-in-Shimoga

ಮರ ಬಿದ್ದಿರುವುದರಿಂದ ಬಾಲರಾಜ ಅರಸ್‌ ರಸ್ತೆಯ ಒಂದು ಬದಿಯಲ್ಲಿ ವಾಹನ ಸಂಚಾರ ವ್ಯತ್ಯಯವಾಗಿದೆ. ಮಹಾವೀರ ವೃತ್ತದಿಂದ ಗೋಪಿ ಸರ್ಕಲ್‌ಗೆ ತೆರಳುವ ಮಾರ್ಗ ಸದ್ಯಕ್ಕೆ ಬಂದ್‌ ಮಾಡಲಾಗಿದೆ.

Balarajurs road Tree falls

ಇದನ್ನೂ ಓದಿ ⇓

ವಿಐಎಸ್‌ಎಲ್‌ ಕಾರ್ಮಿಕರಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಹೆಸರಿನಲ್ಲಿ ಪೂಜೆ, ಸಂಕಲ್ಪ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment