ಶಿವಮೊಗ್ಗದ 100 ಅಡಿ ರಸ್ತೆಯಲ್ಲಿ ಧರೆಗುರುಳಿದ ಮರ, ತಪ್ಪಿತು ಅನಾಹುತ, ಲಕ್ಷ್ಮೀ ಟಾಕೀಸ್‌ ಬಳಿ ಟ್ರಾಫಿಕ್‌ ಜಾಮ್‌

ಶಿವಮೊಗ್ಗ: 100 ಅಡಿ ರಸ್ತೆಗೆ ಅಡ್ಡಲಾಗಿ ಬೃಹತ್‌ ಮರವೊಂದು (Tree) ಧರೆಗುರುಳಿದೆ. ಅದೃಷ್ಟವಶಾತ್‌ ಅನಾಹುತ ತಪ್ಪಿದೆ.

ಲಕ್ಷ್ಮೀ ಟಾಕೀಸ್‌ ಸಮೀಪ ಫ್ರೀಡಂ ಪಾರ್ಕ್‌ನ ಕಾಂಪೌಂಡ್‌ ಪಕ್ಕದಲ್ಲಿಯೆ ಇದ್ದ ಮರ ಧರೆಗುರುಳಿದೆ. ಗಾಳಿ, ಮಳೆಯಿಂದಾಗಿ ಮರ ಉರುಳಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಟ್ರಾಫಿಕ್‌ ಸಿಗ್ನಲ್‌ ಬಿಟ್ಟ ಕೆಲವೇ ಕ್ಷಣದಲ್ಲಿ ಮರ ಉರುಳಿದೆ. ಹಾಗಾಗಿ ರಸ್ತೆಯಲ್ಲಿ ವಾಹನಗಳು ಇರಲಿಲ್ಲ. ದೊಡ್ಡ ಅನಾಹುತ ತಪ್ಪಿದಂತಾಗಿದೆ.

ಇದನ್ನೂ ಓದಿ » ಲಿಂಗನಮಕ್ಕಿ ಡ್ಯಾಂಗೆ ಹೆಚ್ಚಿದ ಒಳ ಹರಿವು, ತುಂಗಾ, ಭದ್ರಾಗೆ ಎಷ್ಟು ನೀರು ಹರಿದು ಬರ್ತಿದೆ? ಇಲ್ಲಿದೆ ಡಿಟೇಲ್ಸ್‌

ಮರ ತೆರವು ಕಾರ್ಯಚರಣೆ ನಡೆಯುತ್ತಿದೆ. ಇನ್ನು, ಮರ ಉರುಳಿರುವುದರಿಂದ ರಸ್ತೆಯ ಒಂದು ಬದಿಯಲ್ಲಿ ವಾಹನ ಸಂಚಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಮತ್ತೊಂದು ಬದಿಯಲ್ಲಿ ಎರಡು ದಿಕ್ಕಿನಲ್ಲಿ ವಾಹನಗಳು ಸಂಚರಿಸುತ್ತಿವೆ. ಹಾಗಾಗಿ ಲಕ್ಷ್ಮೀ ಟಾಕೀಸ್‌ ಸಮೀಪ ಸಂಚಾರ ದಟ್ಟಣೆ ಉಂಟಾಗಿದೆ.

Tree-falls-near-lakshmi-talkies-in-Shimoga-city

Tree falls on 100 feet road near lakshmi talkies in shivamogga city

Tree-falls-near-lakshmi-talkies-in-Shimoga-city

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

Leave a Comment