ಶಿವಮೊಗ್ಗದ ಈ ರಸ್ತೆಯಲ್ಲಿ ಜಾರಿ ಬಿದ್ದ ಸಾಲು ಸಾಲು ಬೈಕುಗಳು, ಆಗಿದ್ದೇನು?

 ಶಿವಮೊಗ್ಗ  LIVE 

ಶಿವಮೊಗ್ಗ: ನಗರದ ಕುವೆಂಪು ರಸ್ತೆಯಲ್ಲಿ ನಂಜಪ್ಪ ಆಸ್ಪತ್ರೆ ಎದುರಿಗಿರುವ ಮರದಿಂದ ದ್ರವ ರೂಪದ ಅಂಟು ರಸ್ತೆಗೆ ಬಿದ್ದು ದ್ವಿಚಕ್ರ ವಾಹನ ಸವಾರರು ಜಾರಿ (bikes to skid) ಬಿದ್ದಿದ್ದಾರೆ. ಕಳೆದ ರಾತ್ರಿ ಸುರಿದ ಮಳೆಯ ನಂತರ ಘಟನೆ ಸಂಭವಿಸಿದೆ.

ಮಳೆ ನಿಲ್ಲುತ್ತಿದ್ದಂತೆ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಐದಾರು ಬೈಕು ಜಾರಿ ಬಿದ್ದಿವೆ. ವಾಹನ ಸವಾರರು ಗಾಯಗೊಂಡಿದ್ದಾರೆ. ಅಕ್ಕಪಕ್ಕದ ಅಂಗಡಿಯವರು ಗಾಯಾಳುಗಳಿಗೆ ನೆರವಾಗಿದ್ದು, ಕೂಡಲೆ ಸಂಚಾರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

Sigandur-Janthre-2026-scaled.

ಸ್ಥಳಕ್ಕೆ ಟ್ರಾಫಿಕ್‌ ಪೊಲೀಸರು ದೌಡು

ಸ್ಥಳಕ್ಕೆ ದೌಡಾಯಿಸಿದ ಸಂಚಾರ ಠಾಣೆ ಪೊಲೀಸರು ರಸ್ತೆಯ ಎರಡು ಬದಿ ಬ್ಯಾರಿಕೇಡ್‌ ಅಳವಡಿಸಿ ವಾಹನಗಳು ನಿಧಾನವಾಗಿ ಚಲಿಸುವಂತೆ ಸೂಚಿಸಿದರು. ಇನ್ಸ್‌ಪೆಕ್ಟರ್‌ ದೇವರಾಜ್‌ ಅವರು ಮಹಾನಗರ ಪಾಲಿಕೆಗೆ ಮಾಹಿತಿ ನೀಡಿ, ವಾಟರ್‌ ಟ್ಯಾಂಕರ್‌ ತರಿಸಿ ನೀರಿ ಹಾಯಿಸಿ ಸ್ವಚ್ಛತೆ ಕಾರ್ಯಕ್ಕೆ ನಡೆಸಿದರು. ಇದರಿಂದ ಸುಗಮ ಸಂಚಾರಕ್ಕೆ ಅನುವಾಯಿತು.

Bikes-Skid-at-kuvempu-road-in-Shivamogga

ಸ್ಕಿಡ್‌ ಆಗಿ ಬಿದ್ದಿದ್ದು ಇದೇ ಮೊದಲಲ್ಲ

ಮರದಿಂದ ದ್ರವ ರೂಪದ ಅಂಟು ಬಿದ್ದು ವಾಹನ ಸವಾರರು ಜಾರಿ ಬೀಳುತ್ತಿರುವುದು ಇದೇ ಮೊದಲಲ್ಲ. 2021ರಲ್ಲಿ ಬೆಳ್ಳಂಬೆಳಗ್ಗೆ ಹಲವು ವಾಹನಗಳು ಇದೇ ರೀತಿ ಜಾರಿ ಬಿದ್ದು ಸವಾರರು ಗಾಯಗೊಂಡಿದ್ದರು.

ಇದನ್ನೂ ಓದಿ » ಕೆಂಚನಾಲ ಮಾರಿಕಾಂಬ ಜಾತ್ರೆ, ರಾಜ್ಯದ ಎಲ್ಲೆಡೆಗಿಂತಲು ವಿಭಿನ್ನ, ಹೇಗಿರುತ್ತೆ ಮಹೋತ್ಸವ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment