ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 6 DECEMBER 2022
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಶಿವಮೊಗ್ಗ : ಚಲಿಸುತ್ತಿದ್ದ ಕ್ಯಾಂಟರ್ ಟೈರ್ ಸ್ಪೋಟಗೊಂಡು (tyre blast) ಪಲ್ಟಿಯಾಗಿದೆ. ಅದೃಷ್ಟವಶಾತ್ ಅನಾಹುತ ತಪ್ಪಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಊರುಗಡೂರು ಕ್ರಾಸ್ ಬಳಿ ಇವತ್ತು ಬೆಳಗ್ಗೆ ಘಟನೆ ಸಂಭವಿಸಿದೆ. ಎಡಗಡೆಯ ಚಕ್ರ ಸ್ಪೋಟಗೊಂಡಿದ್ದು (tyre blast) ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ.
ALSO READ – ಶಿವಮೊಗ್ಗ ರೈಲ್ವೆ ನಿಲ್ದಾಣ ಬಳಿ ದರೋಡೆಗೆ ಪ್ಲಾನ್, ತಲ್ವಾರ್, ರಾಡ್, ಖಾರದ ಪುಡಿ ಸಹಿತ ಸಿಕ್ಕಿಬಿದ್ದ ಟೀಮ್
ಕ್ಯಾಂಟರ್ ನಲ್ಲಿ ಸಾಗಿಸಲಾಗುತ್ತಿದ್ದ ರಟ್ಟಿನ ಬಾಕ್ಸ್ ರಸ್ತೆಯಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಘಟನೆ ಸಂದರ್ಭ ಕ್ಯಾಂಟರ್ ಅಕ್ಕಪಕ್ಕದಲ್ಲಿ ಯಾವುದೆ ವಾಹನಗಳು ಇರಲಿಲ್ಲ. ಹಾಗಾಗಿ ಅನಾಹುತ ತಪ್ಪಿದಂತೆ ಆಗಿದೆ.
ALSO READ – 5 ದಿನ ಬಿಟ್ಟು ಶಿವಮೊಗ್ಗದ ಮನೆಗೆ ಬಂದ ದಂಪತಿ ರೂಮೊಳಗೆ ಹೋಗುತ್ತಿದ್ದಂತೆ ಕಾದಿತ್ತು ಶಾಕ್
ಕ್ರೇನ್ ಮೂಲಕ ಕ್ಯಾಂಟರ್ ವಾಹನವನ್ನು ತೆರವು ಮಾಡಲಾಯಿತು. ಅಪಘಾತದ ಹಿನ್ನೆಲೆ ಕೆಲವು ಹೊತ್ತು ಆ ಜಾಗದಲ್ಲಿ ವಾಹನವನ್ನು ಒಂದು ಬದಿಯಲ್ಲಿ ಮಾತ್ರ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.