ಶಿವಮೊಗ್ಗದಲ್ಲಿ ತುಘಲಕ್‌, ಯಾವಾಗ? ಎಲ್ಲಿದೆ ಪ್ರದರ್ಶನ?

ಶಿವಮೊಗ್ಗ: ಸಹ್ಯಾದ್ರಿ ರಂಗತರಂಗ ಸಂಸ್ಥೆಯ 40ನೇ ವರ್ಷದ ಸಂಭ್ರಮದ ಅಂಗವಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡ್ ರಚನೆಯ ತುಘಲಕ್ ನಾಟಕ ಪ್ರದರ್ಶನ ಅ.5ರಂದು ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಗೌರವಾಧ್ಯಕ್ಷ ಕಾಂತೇಶ್‌ ಕದರಮಂಡಲಗಿ ಹೇಳಿದರು.

ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ರಂಗಕರ್ಮಿ ಆ‌ರ್.ಎಸ್.ಹಾಲಸ್ವಾಮಿ ನಾಟಕದ ವಿನ್ಯಾಸ ಮತ್ತು ನಿರ್ದೇಶಿಸಲಿದ್ದಾರೆ. ಶ್ರೀಪಾದ ತೀರ್ಥಹಳ್ಳಿ ಸಂಗೀತ, ಶಂಕರ ಬೆಳಲಕಟ್ಟೆ ಬೆಳಕಿನ ವಿನ್ಯಾಸ, ಮಂಜು ರಂಗಸಜ್ಜಿಕೆ ಹಾಗೂ ಡಿ.ಎಸ್.ರವಿಶಂಕರ್ ಮೇಕಪ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದು ತಿಳಿಸಿದರು.

Tughalak-Drama-directed-by-RS-Halaswamy

ಗಿರೀಶ್ ಕಾರ್ನಾಡರ ಮಹತ್ವದ ಕೃತಿಗಳಲ್ಲೊಂದಾದ ತುಘಲಕ್ ನಾಟಕವು ಅಧಿಕಾರದ ರಾಜಕಾರಣ, ಆದರ್ಶ ಮತ್ತು ವಾಸ್ತವದ ನಡುವಿನ ಸಂಘರ್ಷ, ರಾಜಕೀಯ ಭ್ರಮನಿರಸನ ಹಾಗೂ ಮಾನವ ಮನಸ್ಸಿನ ಸಂಕೀರ್ಣ ಆಯಾಮಗಳನ್ನು ತೆರೆದಿಡುತ್ತದೆ ಎಂದರು.

ತುಘಲಕ್‌ ಕೇವಲ 14ನೇ ಶತಮಾನದ ರಾಜಕೀಯ ಇತಿಹಾಸದ ಪುನರಾವರ್ತನೆಯಲ್ಲ. ಬದಲಿಗೆ ಅದು ಸದಾಕಾಲಕ್ಕೂ ಪ್ರಸ್ತುತವಿರುವ ಮನುಷ್ಯ ಸ್ವಭಾವದ ದರ್ಪ, ದ್ರೋಹ ಮತ್ತು ಆದರ್ಶಗಳ ಮುಖಾಮುಖಿ.

– ಆರ್.ಎಸ್.ಹಾಲಸ್ವಾಮಿ, ನಾಟಕದ ನಿರ್ದೇಶಕ

ಸಲಹಾ ಸಮಿತಿ ಸದಸ್ಯರಾದ ಎಚ್.ಸುರೇಶ್, ಎಂ.ಬಿ.ಕೆಂಚರಾಜ್ ಹಾಗೂ ಎಚ್.ವಿ.ಶ್ರೀನಿಧಿ ದೇಶಪಾಂಡೆ ಸುದ್ದಿಗೋಷ್ಠಿಯಲ್ಲಿದ್ದರು.