ಶಿವಮೊಗ್ಗದಲ್ಲಿ ವೈಭವದ ತುಂಗಾ ಆರತಿ, ಹೇಗಿತ್ತು ಪೂಜೆ? ಫೋಟೊ ನ್ಯೂಸ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಶಿವಮೊಗ್ಗ ದಸರಾ ಅಂಗವಾಗಿ ಶ್ರದ್ಧಾ ಭಕ್ತಿಯಿಂದ ತುಂಗಾ ಆರತಿ (TUNGA ARATHI) ನೆರವೇರಿಸಲಾಯಿತು. ತುಂಗಾ ನದಿ ದಂಡೆ ಮೇಲೆ ಮಂತ್ರ ಘೋಷಗಳೊಂದಿಗೆ ತುಂಗೆಗೆ ಆರತಿ ಬೆಳಗಲಾಯಿತು.

Shimoga Nanjappa Hospital

ಶಿವಮೊಗ್ಗದ ಕೋರ್ಪಲಯ್ಯ ಛತ್ರ ಮಂಟಪದ ಮೇಲೆ ತುಂಗಾ ಆರತಿ ನೆರವೇರಿಸಲಾಯಿತು. ದೊಡ್ಡ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಆರತಿ ಬೆಳಗಿ, ನಮಿಸಲಾಯಿತು.

ಮಂಟಪದ ಮೇಲೆ ಋತ್ವಿಜರಿಂದ ಪೂಜೆ (TUNGA ARATHI)

ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪರಿಸರ ದಸರಾ ಅಂಗವಾಗಿ ತುಂಗಾ ಆರತಿ ಆಯೋಜಿಸಲಾಗಿತ್ತು. ಗಂಗಾ ಪರಮೇಶ್ವರಿ ದೇಗುಲ, ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯ, ಕೋಟೆ ಶ್ರೀ ಭೀಮೇಶ್ವರ ದೇವಾಲಯ, ಕೋಟೆ ಶ್ರೀ ಮಾರಿಕಾಂಬ ದೇವಾಲಯಗಳ ಅರ್ಚಕರು, ಬೆಕ್ಕಿನಕಲ್ಮಠ, ಕೋಟೆ ಯುವಕರ ಸಂಘ, ಪ್ರತಾಪ್ ಯುವಕರ ಸಂಘ, ಕೋಟೆ ಗೆಳೆಯರ ಬಳಗದ ಸಹಕಾರದೊಂದಿಗೆ ಕಾರ್ಯಕ್ರಮ ನೆರವೇರಿಸಲಾಯಿತು.

ಕೋರ್ಪಲಯ್ಯ ಛತ್ರ ಮಂಟಪದ ಮೇಲೆ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ತುಂಗಾ ಆರತಿ (TUNGA ARATHI) ಕಾರ್ಯಕ್ರಮ ನಡೆಯಿತು. ಇದಕ್ಕೂ ಮೊದಲು ಗಂಗಾ ಪರಮೇಶ್ವರಿ ದೇವಸ್ಥಾನದಿಂದ ಉತ್ಸವ ಮೂರ್ತಿಯ ಮೆರವಣಿಗೆ ನಡೆಸಲಾಯಿತು.

ದೊಡ್ಡ ಸಂಖ್ಯೆಯಲ್ಲಿ ಜನ ಭಾಗಿ (TUNGA ARATHI)

ತುಂಗಾ ಆರತಿಯನ್ನು ಕಣ್ತುಂಬಿಕೊಳ್ಳಲು ಶಿವಮೊಗ್ಗ ನಗರದ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ತುಂಗಾ ಆರತಿಯನ್ನು ಕಣ್ತುಂಬಿಕೊಂಡು ಪುನೀತರಾದರು. ಅಲ್ಲದೆ ತುಂಗಾ ನದಿ ದಂಡೆಯ ಮೇಲೆ ದೀಪ ಬೆಳಗಿ ಪ್ರಾರ್ಥನೆ ಸಲ್ಲಿಸಿದರು. ತುಂಗಾ ಆರತಿ ನೆರವೇರಿಸುವಾಗ ಪಟಾಕಿ ಸಿಡಿಸಲಾಯಿತು.

Shimoga Nanjappa Hospital Mamography

ಮಳೆಯಿಂದ ಜನಕ್ಕೆ ಸಂಕಷ್ಟ

ತುಂಗಾ ಆರತಿ ಕಾರ್ಯಕ್ರಮ ಆರಂಭವಾಗುವ ಮೊದಲು ಜೋರು ಮಳೆ ಸುರಿಯಿತು. ಕೋರ್ಪಲಯ್ಯ ಛತ್ರ ಮಂಟಪದ ಬಳಿಯಿಂದ ಜನರು ಪಕ್ಕದ ಕಟ್ಟಡಗಳ ಕೆಳಗೆ ನಿಂತು ಮಳೆಯಿಂದ ರಕ್ಷಣೆ ಪಡೆದರು. ಮಳೆ ನಿಂತ ಬಳಿಕ ಪೂಜಾ ಸ್ಥಳಕ್ಕೆ ಬಂದು ಪೂಜೆಯನ್ನು ಕಣ್ತುಂಬಿಕೊಂಡರು.

tunga arati in Shimoga

tunga arati in Shimoga

tunga arati in Shimoga

tunga arati in Shimoga

tunga arati in Shimoga

tunga arati in Shimoga

tunga arati in Shimoga

tunga arati in Shimoga

tunga arati in Shimoga

tunga arati in Shimoga

Shimoga Nanjappa Hospital

ಕ್ಲಿಕ್ ಮಾಡಿ ಇದನ್ನೂ ಓದಿ ಅಂಬಾರಿ ಹೊರಲು ಶಿವಮೊಗ್ಗಕ್ಕೆ ಆಗಮಿಸಿದ ಗಜಪಡೆ, ಯಾವೆಲ್ಲ ಆನೆಗಳು ಬಂದಿವೆ?

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment