ಎರಡ್ಮೂರು ದಿನ ಯಾರೂ ಇಲ್ಲದ ಮನೆಗಳೆ ಟಾರ್ಗೆಟ್, ಶಿವಮೊಗ್ಗದಲ್ಲಿ 2 ಮನೆ ಬಾಗಿಲು ಮುರಿದ ಕಳ್ಳರು

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

SHIVAMOGGA LIVE NEWS | 10 FEBRUARY 2023

SHIMOGA : ನಗರದ ಎರಡು ಕಡೆ ಮನೆಗಳ ಬಾಗಿಲ ಬೀಗ ಮುರಿದು (House Theft) ಚಿನ್ನಾಭರಣ, ನಗದು, ಮೊಬೈಲ್ ಕಳ್ಳತನ  ಮಾಡಲಾಗಿದೆ. ಎರಡು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಜಾತ್ರೆಗೆ ಹೋದವರಿಗೆ ಬಂತು ಫೋನ್ ಕರೆ

ಅಶೋಕ ನಗರ : ಮಂಜಪ್ಪ ಎಂಬುವವರು ಫೆ.6ರಂದು ಕುಟುಂಬ ಸಹಿತ ಜಾತ್ರೆಗೆ ತೆರಳಿದ್ದರು. ಫೆ.9ರ ಮಧ್ಯಾಹ್ನ ಪಕ್ಕದ ಮನೆಯವರು ಕರೆ ಮಾಡಿ ನಿಮ್ಮ ಮನೆಯ ಬಾಗಿಲಿನ ಬೀಗ ಮರಿದಿದ್ದು (House Theft), ಬಾಗಿಲು ತೆಗೆದಿದೆ ಎಂದು ತಿಳಿಸಿದರು. ವಿಚಾರ ತಿಳಿದು ಮಂಜಪ್ಪ ಅವರು ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

theft case general image

ಬೀರುವಿನಲ್ಲಿದ್ದ 40 ಸಾವಿರ ರೂ. ನಗದು, 2.28 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಸ್ಯಾಮ್ ಸಂಗ್ ಎ33 ಮೊಬೈಲ್ ಫೋನ್ ಕಳ್ಳತನವಾಗಿತ್ತು. ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ –ಹೊಳೆ ಬಸ್ ನಿಲ್ದಾಣ ಬಳಿ ಅಪರಿಚಿತ ವ್ಯಕ್ತಿ ಮೃತದೇಹ | ಶಿವಮೊಗ್ಗ ಜಿಲ್ಲೆಯ 4 CRIME NEWS

ಮಗಳ ಮನೆಗೆ ಹೋದಾಗ ಕಳ್ಳತನ

ಕೃಷಿ ನಗರ : ಪದ್ಮಾವತಿ ಎಂಬುವವರು ಶಿವಮೊಗ್ಗದಲ್ಲಿಯೇ ಇರುವ ತಮ್ಮ ಮಗಳ ಮನೆಗೆ ತೆರಳಿದ್ದರು. ಈ ವೇಳೆ ಪದ್ಮಾವತಿ ಅವರ ಮನೆಯ ಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಮನೆಯ ಬೆಡ್ ರೂಮಿನಲ್ಲಿದ್ದ 30 ಸಾವಿರ ರೂ. ಮೌಲ್ಯದ 10 ಗ್ರಾಂನ ಬಂಗಾರದ ಒಡವೆ, ಸುಮಾರು 30 ಸಾವಿರ ರೂ. ನಗದ ಕಳ್ಳತನವಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಚೋರಡಿಯಲ್ಲಿ ಸರಣಿ ಅಪಘಾತ, ಶಿವಮೊಗ್ಗ – ಸಾಗರ ರಸ್ತೆಯಲ್ಲಿ ಟ್ರಾಫಿಕ್ ಜಾಮ್, ಹೇಗಾಯ್ತು ಆಕ್ಸಿಡೆಂಟ್?

Leave a Comment