ಶಿವಮೊಗ್ಗದಲ್ಲಿ 2 ಪೊಲೀಸ್ ಉಪ ವಿಭಾಗ ರಚನೆ, ಯಾವ್ಯಾವ ಠಾಣೆ ಯಾವ ಉಪ ವಿಭಾಗಕ್ಕೆ ಒಳಪಡಲಿದೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 26 DECEMBER 2022

ಶಿವಮೊಗ್ಗ : ವಿವಿಧ ಜಿಲ್ಲೆಗಳಲ್ಲಿನ ಪೊಲೀಸ್ ಉಪ ವಿಭಾಗಗಳನ್ನು (sub division) ಪುನರ್ ವಿಂಗಡಿಸಲಾಗಿದೆ. ಅದರಂತೆ ಶಿವಮೊಗ್ಗ ಉಪ ವಿಭಾಗದಲ್ಲಿಯು ಮಹತ್ವದ ಬದಲಾವಣೆ ಮಾಡಲಾಗಿದೆ. ಈವರೆಗೂ ಶಿವಮೊಗ್ಗ ತಾಲೂಕಿನಲ್ಲಿ ಒಂದೇ ಉಪ ವಿಭಾಗವಿತ್ತು. ಅದನ್ನು ಈಗ ಎರಡು ಉಪ ವಿಭಾಗವಾಗಿ ವಿಂಗಡಿಸಲಾಗಿದೆ.

Shimoga Nanjappa Hospital

ಈಗ ಹೀಗಿದೆ ಉಪ ವಿಭಾಗ?

ಸದ್ಯ ಶಿವಮೊಗ್ಗ ಉಪ ವಿಭಾಗದಲ್ಲಿ (sub division) 8 ಪೊಲೀಸ್ ಠಾಣೆ, 2 ಟ್ರಾಫಿಕ್ ಠಾಣೆಗಳಿವೆ. ದೊಡ್ಡಪೇಟೆ, ಕೋಟೆ, ತುಂಗಾನಗರ, ವಿನೋಬನಗರ, ಜಯನಗರ, ಶಿವಮೊಗ್ಗ ಗ್ರಾಮಾಂತರ, ಕುಂಸಿ ಮತ್ತು ಮಹಿಳಾ ಪೊಲೀಸ್ ಠಾಣೆಗಳು ಈ ಉಪ ವಿಭಾಗದ ವ್ಯಾಪ್ತಿಯಲ್ಲಿವೆ. ಇದರ ಜೊತೆಗೆ ಶಿವಮೊಗ್ಗ ನಗರದ ಪೂರ್ವ ಮತ್ತು ಪಶ್ಚಿಮ ಸಂಚಾರಿ ಠಾಣೆಗಳು ವ್ಯಾಪ್ತಿ ಒಳಪಟ್ಟಿತ್ತು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಸರ್ಕಾರಿ ನೌಕರರಿಗೆ ನವ ಸಂವತ್ಸರ ಕಾರ್ಯಕ್ರಮ, ಬರಲಿದ್ದಾರೆ ಸರಿಗಮಪ ಖ್ಯಾತಿಯ ಗಾಯಕರು

ಇನ್ಮುಂದೆ ಶಿವಮೊಗ್ಗಕ್ಕೆ 2 ಉಪ ವಿಭಾಗ

ಪೊಲೀಸ್ ಮಹಾನಿರ್ದೇಶಕರ ಪ್ರಸ್ತಾವನೆ ಹಿನ್ನೆಲೆ ವಿವಿಧ ಜಿಲ್ಲೆಗಳಲ್ಲಿ ಉಪ ವಿಭಾಗಗಳನ್ನು ಮರು ವಿಂಗಡಿಸಲಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ ಈಗ 2 ಉಪ ವಿಭಾಗಗಳನ್ನು ರಚಿಸಲಾಗಿದೆ. ಪ್ರತಿ ಉಪ ವಿಭಾಗಕ್ಕೆ ತಲಾ 4 ಠಾಣೆಗಳು ಒಳಪಡಲಿವೆ.

ಶಿವಮೊಗ್ಗ ಉಪ ವಿಭಾಗ A ­- ದೊಡ್ಡಪೇಟೆ ಠಾಣೆ, ಕೋಟೆ ಠಾಣೆ, ತುಂಗಾ ನಗರ ಠಾಣೆ, ಮಹಿಳಾ ಠಾಣೆ

ಶಿವಮೊಗ್ಗ ಉಪ ವಿಭಾಗ B ­- ಶಿವಮೊಗ್ಗ ಗ್ರಾಮಾಂತರ, ಜಯನಗರ, ವಿನೋಬನಗರ, ಕುಂಸಿ ಠಾಣೆಗಳು ಒಳಪಡಲಿವೆ.

Shimoga Nanjappa hospital

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment