SHIVAMOGGA LIVE NEWS | 14 DECEMBER 2022
ಶಿವಮೊಗ್ಗ : ಶ್ರೀ ದುರ್ಗ ಸಪ್ತಶತಿ ಋಷಿಪ್ರಜ್ಞಾ ಆಂದೋಲನದ ವತಿಯಿಂದ ಶಿವಮೊಗ್ಗ ನಗರದಲ್ಲಿ ಇವತ್ತು 2 ಸಾವಿರಕ್ಕೂ ಹೆಚ್ಚು ಸೆಟ್ ದೋಸೆ ವಿತರಿಸಲಾಯಿತು. ನಗರದ 6 ಕಡೆ ಸೆಟ್ ದೋಸೆ (set dosa) ವಿತರಣೆ ಮಾಡಲಾಯಿತು.
ಶ್ರೀ ಗುರುನಾಥ ವರ್ಧಂತಿ ಮಹೋತ್ಸವದ ಅಂಗವಾಗಿ ಭಕ್ತರು 2,421 ಸೆಟ್ ದೋಸೆ ವಿತರಣೆ ಮಾಡಿದರು. ನಗರದ ಎಂ.ಆರ್.ಎಸ್, ಹೊಳೆ ಬಸ್ ನಿಲ್ದಾಣ, ಬಸ್ ನಿಲ್ದಾಣ, ಮೆಗ್ಗಾನ್ ಆಸ್ಪತ್ರೆ, ತರಕಾರಿ ಮಾರುಟಕಟ್ಟೆ ಸೇರಿದಂತೆ ಆರು ಕಡೆ ಜನರಿಗೆ ನೀಡಲಾಯಿತು.
ಬೆಳಗಿನ ಜಾವದಿಂದಲೆ ತಯಾರಿ (set dosa)
ಸಖರಾಯಪಟ್ಟಣದ ಶ್ರೀ ವೆಂಕಟಾಚಲ ಗುರುನಾಥರ ವರ್ಧಂತಿ ಅಂಗವಾಗಿ ಭಕ್ತರು ದೋಸೆ ಹಂಚಿದರು. ಇದಕ್ಕಾಗಿ ಗುರು ಭಿಕ್ಷೆ ಬೇಡಿ ಅಕ್ಕಿ ಮತ್ತು ಇತರೆ ದವಸ ಸಂಗ್ರಹಿಸಿದ್ದರು. ಬೆಳಗಿನ ಜಾವ 3 ಗಂಟೆಯಿಂದಲೆ ಭಕ್ತರು ದೋಸೆ ಸಿದ್ಧಪಡಿಸಿ, ಅವುಗಳನ್ನು ಪ್ಯಾಕ್ ಮಾಡಿ ವಿತರಣೆ ವಿತರಣೆ ಮಾಡಿದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಮುಗ್ಗಲು ಹಿಡಿದ ಅಡಕೆ, ಮುಳುಗಿದ ಭತ್ತದ ಗದ್ದೆ, ತಾಲೂಕುವಾರು ನಡೆಯುತ್ತಿದೆ ಸಮೀಕ್ಷೆ
ವರ್ಧಂತಿ ಅಂಗವಾಗಿ ಶಿವಮೊಗ್ಗದ ಗಾಂಧಿ ಬಜಾರ್ ತುಳಜಾ ಭವಾನಿ ದೇವಸ್ಥಾನದಲ್ಲಿ ಇಂದು ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲದೆ ಗುರು ಭಕ್ತರ ಮನೆಗಳಲ್ಲಿ ಇಂದು ಸಂಜೆ ದೀಪ ಬೆಳಗಲಾಗುತ್ತದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200