ಕೈದಿ ಭೇಟಿಗೆ ಜೈಲಿಗೆ ಬಂದವರೇ ಅರೆಸ್ಟ್‌, ಕಾರಣವೇನು?

SHIMOGA NEWS, 22 SEPTEMBER 2024 : ಕೈದಿ ಭೇಟಿಗೆ ಜೈಲಿಗೆ (Jail) ಬಂದಿದ್ದ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದ ವಸ್ತುವನ್ನು ಕಾರಿಡಾರ್‌ನಲ್ಲಿ ಎಸೆದಿದ್ದಾರೆ. ಇದನ್ನು ಗಮನಿಸಿದ ಜೈಲು ಸಿಬ್ಬಂದಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಸೋಗಾನೆಯಲ್ಲಿರುವ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿ ಶೋಯಬ್‌ ಅಲಿಯಾಸ್‌ ಚೂಡಿ ಎಂಬಾತನ ಭೇಟಿಗೆ ಸೈಯದ್‌ ಸಾದತ್‌ ಮತ್ತು ತಾಹೀರ್‌ ಖಾನ್‌ ಎಂಬುವವರು ಬಂದಿದ್ದರು.

ಹಳದಿ ಟೇಪ್‌ ಸುತ್ತಿದ್ದ ವಸ್ತು ಪತ್ತೆ

ಸಂದರ್ಶಕರ ಕೊಠಡಿ ಪಕ್ಕದ ಕಾರಿಡಾರ್‌ನಲ್ಲಿ ಅನುಮಾನಾಸ್ಪದ ವಸ್ತು ಸಿಕ್ಕಿತ್ತು. ಹಳದಿ ಬಣ್ಣದ ಗಮ್‌ ಟೇಪ್‌ನಲ್ಲಿ ಸುತ್ತಿದ್ದ ವಸ್ತುವನ್ನು ಸ್ಕ್ಯಾನರ್‌ನಲ್ಲಿ ಪರಿಶೀಲಿಸಿದಾಗ ಮೊಬೈಲ್‌ ಮತ್ತು ಇತರೆ ವಸ್ತುಗಳು ಇರುವುದು ಗೊತ್ತಾಗಿದೆ. ಪರಿಶೀಲಿಸಿದಾಗ ಶೋಯಬ್‌ನ ಭೇಟಿಗೆ ಬಂದಿದ್ದವರು ಕೃತ್ಯ ಎಸಗಿರುವುದು ಗೊತ್ತಾಗಿದೆ.

Nanjappa Hospital Advertisement

Shimoga-Central-Jail-Building

ಕೂಡಲೆ ಇಬ್ಬರನ್ನು ವಶಕ್ಕೆ ಪಡೆದ ಕೆಎಸ್‌ಐಎಸ್‌ಎಫ್‌ ಮತ್ತು ಜೈಲು ಸಿಬ್ಬಂದಿ ಆರೋಪಿಗಳನ್ನು ತುಂಗಾ ನಗರ ಠಾಣೆಗೆ ರವಾನಿಸಿದ್ದರು. ಜೈಲು ಅಧೀಕ್ಷಕ ಡಾ. ರಂಗನಾಥ್‌ ಅವರ ದೂರಿನ ಹಿನ್ನೆಲೆ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದಿಂದ ಮತ್ತೊಂದು ನಗರಕ್ಕೆ ವಿಮಾನಯಾನ, ದಿನಾಂಕ ಫಿಕ್ಸ್‌

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment