ಶಿವಮೊಗ್ಗ : ಸೋಗಾನೆ ಬಳಿ ಇರುವ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ (Airport) ಚಾಲನೆ ದೊರೆತು ಎರಡು ವರ್ಷವಾಗಿದೆ. ಈ ಅವಧಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಇಲ್ಲಿಂದ ವಿಮಾನಯಾನ ಮಾಡಿದ್ದಾರೆ.
2023ರ ಫೆ.27ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಿದ್ದರು. ಈಗ ಶಿವಮೊಗ್ಗ ವಿಮಾನ ನಿಲ್ದಾಣವು ರಾಜ್ಯದ ಪ್ರಮುಖ ವಿಮಾನ ನಿಲ್ದಾಣವಾಗಿದೆ.
ಈವರೆಗೂ ಓಡಾಡಿದವರೆಷ್ಟು?
ಕಳೆದ ಎರಡು ವರ್ಷದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಒಟ್ಟು 1,30,587 ಜನ ವಿಮಾನಯಾನ ಮಾಡಿದ್ದಾರೆ. ಈ ಅವಧಿಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಬಳಿಕ ಅತಿ ಹೆಚ್ಚು ಪ್ರಯಾಣಿಕರು ಪಯಣಿಸಿದ ದೇಸಿ ವಿಮಾನ ನಿಲ್ದಾಣ ಇದಾಗಿದೆ.
ಪ್ರತಿದಿನ 12 ಬಾರಿ ವಿಮಾನ ಹಾರಾಟ
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರು, ಹೈದರಾಬಾದ್, ತಿರುಪತಿ, ಗೋವಾ, ಚೆನ್ನೈಗೆ ವಿಮಾನಗಳು ಹಾರಾಟ ನಡೆಸುತ್ತಿವೆ. ಇಂಡಿಗೋ ಏರ್‌ಲೈನ್ಸ್, ಸ್ಟಾರ್ ಏರ್, ಸ್ಪೈಸ್ ಜೆಟ್ ಸಂಸ್ಥೆಗಳು ಇಲ್ಲಿ ನಿತ್ಯ 12 ಬಾರಿ ಹಾರಾಟ ನಡೆಸುತ್ತಿವೆ. ಕಳೆದ ಎರಡು ವರ್ಷದಲ್ಲಿ ಒಟ್ಟು 3,092 ಬಾರಿ ಇಲ್ಲಿಂದ ವಿಮಾನಗಳು ಹಾರಾಟ ನಡೆಸಿವೆ.
ವಾಣಿಜ್ಯ ಹಾಗೂ ಖಾಸಗಿ ಜೆಟ್ ವಿಮಾನಗಳು 168 ಬಾರಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದು ಹೋಗಿವೆ. ಜನವರಿಯಿಂದ ಈಚೆಗೆ ವಾಣಿಜ್ಯ ವಿಮಾನಗಳ ಹಾರಾಟ ಹೆಚ್ಚಳಗೊಂಡಿದೆ.
ಶಮಂತ್, ವಿಮಾನ ನಿಲ್ದಾಣದ ನಿರ್ದೇಶಕ

ಹೈದರಾಬಾದ್‌ಗೆ ಸಖತ್ ಡಿಮಾಂಡ್
ಶಿವಮೊಗ್ಗದಿಂದ ಐದು ಪ್ರಮುಖ ನಗರಗಳಿಗೆ ವಿಮಾನಯಾನ ಸೇವೆ ಇದೆ. ಈ ಪೈಕಿ ಹೈದರಾಬಾದ್‌ಗೆ ಡಿಮಾಂಡ್ ಹೆಚ್ಚಿದೆ. ಆದ್ದರಿಂದ ಎರಡು ವಿಮಾನಗಳು ಹೈದರಾಬಾದ್‌ಗೆ ಸೇವೆ ಒದಗಿಸುತ್ತಿವೆ. ಗೋವಾ, ತಿರುಪತಿಗೆ ಸೀಸನ್ ವೇಳೆ ಹೆಚ್ಚು ಪ್ರಯಾಣಿಕರ ದಟ್ಟಣೆ ಇದೆ.
ಇದನ್ನೂ ಓದಿ » ರಾತ್ರೋರಾತ್ರಿ ಶಿವಮೊಗ್ಗದಲ್ಲಿ ಪ್ರಮೋದ್ ಮುತಾಲಿಕ್‌ಗೆ ತಡೆ, ನೊಟೀಸ್ ಕೊಟ್ಟು ಗಡಿ ದಾಟಿಸಿದ ಪೊಲೀಸ್, ಯಾಕೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200