ಶಿವಮೊಗ್ಗ: ಮುಖಾಮುಖಿ ರಂಗ ತಂಡದಿಂದ ಖ್ಯಾತ ರಂಗ ಕಲಾವಿದೆ ಉಮಾಶ್ರೀ (Umashree) ಅಭಿನಯಿಸಿರುವ ಏಕವ್ಯಕ್ತಿ ನಾಟಕ ಶರ್ಮಿಷ್ಠೆ ಜನವರಿ11ರಂದು ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್ ಹೇಳಿದರು.
ಇದನ್ನೂ ಓದಿ » ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.com/news/shivamogga-city/bejjavalli-ayyappa-temple-sankranti-utsava/">ಬೆಜ್ಜವಳ್ಳಿ ಸಂಕ್ರಾಂತಿ ಉತ್ಸವಕ್ಕೆ ಮೂವರು ನಟರು, ಇಬ್ಬರು ಸಚಿವರು, ಏನೆಲ್ಲ ಕಾರ್ಯಕ್ರಮ ಇರಲಿದೆ?
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೊನ್ನಾಳಿ ಚಂದ್ರಶೇಖರ್, ಶಿವಮೊಗ್ಗದಲ್ಲಿ ಶರ್ಮಿಷ್ಠೆ ನಾಟಕ ಎರಡನೇ ಬಾರಿ ಪ್ರದರ್ಶನಗೊಳ್ಳುತ್ತಿದೆ . ಚಿದಂಬರ ರಾವ್ ಜಂಬೆ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಮಾಡಿದ್ದು, ಡಾ.ಬೇಲೂರು ರಘನಂದನ್ ರಚಿಸಿದ್ದಾರೆ ಎಂದು ತಿಳಿಸಿದರು.


ನಾಟಕವು ಯಾಯತಿ, ಪುರು ಮತ್ತು ಶರ್ಮಿಷ್ಠೆಯರ ನಡುವೆ ಏರ್ಪಡುವ ತ್ರಿಕೋನ ಸಂಘರ್ಷವಾಗಿದೆ. ಹಲವು ಆಯಾಮಗಳನ್ನು ಅನಾವರಣಗೊಳಿಸುತ್ತಾ, ಸತ್ಯಗಳನ್ನು ಅರಗಿಸಿಕೊಳ್ಳಲಾರದೇ ಅತಂತ್ರ ಮಾನಸಿಕ ಸ್ವಾಸ್ಥ್ಯದ ಸ್ಥಿತ್ಯಂತರವನ್ನು ವರ್ತಮಾನ ಸಂದರ್ಭದಲ್ಲಿ ತೆರೆದಿಡಲಿದ್ದು, ಈ ನಾಟಕ ಏಕವ್ಯಕ್ತಿಯದ್ದಾಗಿದೆ ಎಂದರು. ಮಂಜು ರಂಗಾಯಣ, ಸಿ.ಎ.ಮಹೇಂದ್ರ, ಶಶಿಕುಮಾರ್, ಸಂದೀಪ್ ಸುದ್ದಿಗೋಷ್ಠಿಯಲ್ಲಿದ್ದರು.