ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಅಸ್ವಸ್ಥನಾಗಿದ್ದ ವ್ಯಕ್ತಿ ಸಾವು, ರೈಲ್ವೆ ಪೊಲೀಸರಿಂದ ಮನವಿ

ಶಿವಮೊಗ್ಗ: ಶಿವಮೊಗ್ಗ ರೈಲ್ವೆ ನಿಲ್ದಾಣದ ಆವರಣದಲ್ಲಿ ಅಸ್ವಸ್ಥರಾಗಿದ್ದ 70 ವರ್ಷದ ವ್ಯಕ್ತಿಯನ್ನು ಆಂಬ್ಯುಲೆನ್ಸ್‌ನಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷಿಸಿದ ವೈದ್ಯರು ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಮೃತ ವ್ಯಕ್ತಿಯ ಹೆಸರು, ವಿಳಾಸ ಅಥವಾ ವಾರಸುದಾರರ ಸುಳಿವು ಪತ್ತೆಯಾಗಿಲ್ಲ ಎಂದು ರೈಲ್ವೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಈ ಸುದ್ದಿಯನ್ನು ಇನ್ನು 42 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಮೃತ ವ್ಯಕ್ತಿಯು 5.4 ಅಡಿ ಎತ್ತರ, ದೃಢಕಾಯ ಶರೀರ, ಕಪ್ಪು ಮೈ ಬಣ್ಣ, ದುಂಡು ಮುಖ, ಸುಮಾರು 3 ರಿಂದ 4 ಇಂಚು ಉದ್ದನೆಯ ಬಿಳಿ ಬಣ್ಣದ ತಲೆ ಕೂದಲು, ಗಡ್ಡದಲ್ಲಿ ಸುಮಾರು 1/2 ಇಂಚು ಬಿಳಿ ಕೂದಲು ಇದೆ. ಮೃತ ವ್ಯಕ್ತಿ ಉದ್ದ ತೋಳಿನ ಬಿಳಿ ಬಣ್ಣದ ಅದರಲ್ಲಿ ಸಣ್ಣ ನೀಲಿ ಚೌಕಾಕೃತಿ ಇರುವ ಶರ್ಟ್, ಬೂದು ಬಣ್ಣದ ಪ್ಯಾಂಟ್, ಕೆಂಪು ಬಿಳಿ ಕಪ್ಪು ಬಣ್ಣದ ಟವಲ್ ಧರಿಸಿದ್ದಾರೆ ಎಂದು ತಿಳಿಸಲಾಗಿದೆ.

Shimoga-City-Railway-Station

ಮೃತ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್‌ ಇನ್ ಸ್ಪೆಕ್ಟರ್, ದೂ.ಸಂ.: 08182-222974 / 9480802124 ಗಳನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.