ಶಿವಮೊಗ್ಗ: ಪೆಸೆಟ್ ಕಾಲೇಜು ಸಭಾಂಗಣದಲ್ಲಿ ನಡೆದ ಮ್ಯಾಮ್‌ಕೋಸ್ ಸರ್ವ ಸದಸ್ಯರ ಸಭೆಯಲ್ಲಿ ₹7 ಕೋಟಿ ಮೊತ್ತದ ನಿವೇಶನ ಖರೀದಿ ವಿಚಾರ ಚರ್ಚೆಯಾಯ್ತು. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಸಭೆಯ ಆರಂಭದಲ್ಲಿಯೇ ಈ ವಿಷಯ ಪ್ರಸ್ತಾಪವಾಗಿ ಕೆಲ ಕ್ಷಣ ಗದ್ದಲವಾಯಿತು. ಇನ್ನೊಂದೆಡೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಈ ಸಂಬಂಧ ತನಿಖೆ ನಡೆಸುವಂತೆ ಸಹಕಾರ ಸಚಿವರಿಗೆ ಪತ್ರ ಬರೆದಿದ್ದಾರೆ.
ಸಭೆಯ ಆರಂಭದಲ್ಲೇ ಗದ್ದಲ
ಸರ್ವ ಸದಸ್ಯರ ಸಭೆಯ ಆರಂಭದಲ್ಲಿಯೇ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾರೋಗುಳಿಗೆ ಪದ್ಮನಾಭ ವಿಷಯ ಪ್ರಸ್ತಾಪಿಸಿದರು. ತೀರ್ಥಹಳ್ಳಿಯ ಚಿಟ್ಟೇಬೈಲಿನಲ್ಲಿ ಗೋದಾಮು ನಿರ್ಮಾಣಕ್ಕೆ 1.17 ಎಕರೆ ಜಮೀನನ್ನು ಮ್ಯಾಮ್‌ಕೋಸ್ ಸಂಸ್ಥೆಯ ಹೆಸರಿನಲ್ಲಿ ₹7 ಕೋಟಿಗೆ ಖರೀದಿಸಲಾಗಿದೆ. ₹1.5 ಕೋಟಿ ಸ್ಟಾಂಪ್ ಡ್ಯೂಟಿ ಪಾವತಿಸಲಾಗಿದೆ ಎಂಬ ಆರೋಪವಿದೆ. ಈ ಕುರಿತು ವಿವರಣೆ ನೀಡುವಂತೆ ಆಗ್ರಹಿಸಿದರು. ಈ ವೇಳೆ ಸಭೆಯಲ್ಲಿ ಕೆಲ ಕ್ಷಣ ಗದ್ದಲ ಉಂಟಾಯಿತು.
ತನಿಖೆಗೆ ಸಹಕಾರ ಸಚಿವರಿಗೆ ಪತ್ರ
ಇನ್ನೊಂದೆಡೆ ಮ್ಯಾಮ್‌ಕೋಸ್ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದ ಕುರಿತು ತನಿಖೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮತ್ತು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರು ಸಹಕಾರ ಸಚಿವ ಲಕ್ಷ್ಮಣ ಸವದಿ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದಾರೆ. ಸಂಘದ ಗೋದಾಮು ನಿರ್ಮಾಣಕ್ಕೆ ಖರೀದಿಸಿರುವ ನಿವೇಶನಕ್ಕೆ ಸಂಬಂಧಿಸಿದ ನಿರ್ದೇಕರು, ಉಪಾಧ್ಯಕ್ಷರಿಂದ ಹಣ ಮರುಪಾವತಿ ಮಾಡಿಸಬೇಕು. ಖರೀದಿ ಒಪ್ಪಂದವನ್ನು ಅಮಾನತುಗೊಳಿಸಬೇಕು. ಇಲಾಖಾ ತನಿಖೆ ನಡೆಸಬೇಕು ಎಂದು ಷೇರುದಾರರು ತಮಗೆ ಮನವಿ ಮಾಡಿದ್ದಾರೆ. ಅದರಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮತ್ತು ಸಚಿವ ಮಧು ಬಂಗಾರಪ್ಪ ಮನವಿ ಮಾಡಿದ್ದಾರೆ.