SHIVAMOGGA LIVE NEWS | 1 NOVEMBER 2023
SHIMOGA : ರಾಜ್ಯ ಯುರೋಲಜಿ (Urology) ಅಸೋಸಿಯೇಶನ್ ಮತ್ತು ಶಿವಮೊಗ್ಗ ಯುರೋಲಜಿ ತಜ್ಞರ ಸಂಘದ ಸಹಯೋಗದಲ್ಲಿ ನ.3, 4 ಮತ್ತು 5ರಂದು ರಾಜ್ಯ ಮಟ್ಟದ 28ನೇ ವಾರ್ಷಿಕ ಯುರೋಲಜಿ ಸಮ್ಮೇಳನವನ್ನು ಕಿಮ್ಮನೆ ಗಾಲ್ಫ್ ರೆಸಾರ್ಟ್ನಲ್ಲಿ ಆಯೋಜಿಸಲಾಗಿದೆ ಎಂದು ಡಾ.ಧನ್ಯಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಮಟ್ಟದ ಸಮ್ಮೇಳನವನ್ನು ಮಲೆನಾಡಿನಲ್ಲಿ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯ. 1996ರಲ್ಲಿ ಕರ್ನಾಟಕ ಯುರೋಲಜಿ (Urology) ಅಸೋಸಿಯೇಷನ್ ಪ್ರಾರಂಭವಾಗಿದ್ದು ಮತ್ತು ಮೊದಲ ಸಮ್ಮೇಳನ ನಡೆದಿದ್ದು ಶಿವಮೊಗ್ಗದಲ್ಲಿಯೆ ಎಂದರು.
ಇದನ್ನೂ ಓದಿ- ಶಿವಮೊಗ್ಗ TO ಹೈದರಾಬಾದ್, ಗೋವಾ, ತಿರುಪತಿ ವಿಮಾನದ ಹಾರಾಟದ ದಿನಾಂಕ ಬದಲು, ಯಾವುದು ಹೊಸ ಡೇಟ್?
ಹೃದ್ರೋಗ ತಜ್ಞ ಡಾ. ವಿವೇಕ್ ಜವಳಿ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ರಾಜ್ಯ, ಹೊರರಾಜ್ಯ ಸೇರಿದಂತೆ 300 ಮೂತ್ರರೋಗ ತಜ್ಞರು ಭಾಗವಹಿಸಲಿದ್ದಾರೆ. ಮೂತ್ರ ರೋಗಗಳ ಚಿಕಿತ್ಸೆಯಲ್ಲಿ ಇತ್ತೀಚೆಗೆ ಆಗಿರುವ ಬೆಳವಣಿಗೆಗಳ ಬಗ್ಗೆ ಮೂತ್ರ ಶಾಸ್ತ್ರಜ್ಞರು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ ಎಂದರು. ಸಮ್ಮೇಳನಕ್ಕೆ ಬರುವ ಅತಿಥಿಗಳಿಗೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಿಗೆ ಕರೆದೊಯ್ಯುವ ಮೂಲಕ ಮಲೆನಾಡಿನ ಸೌಂದರ್ಯದ ಪರಿಚಯ ಮಾಡಿಸಲಾಗುವುದು ಎಂದರು.
ಡಾ. ಜಗದೀಶ್, ಡಾ. ಪ್ರದೀಪ್, ಡಾ.ರಾಜೀವ್ ಪಾಂಡುರಂಗಿ, ಡಾ.ಪ್ರಭು ಕಣ್ಣೂರ್, ಡಾ. ಪ್ರಶಾಂತ್ ಭಟ್, ಡಾ. ರಾಕೇಶ್ ಬಿಸಲೆಹಳ್ಳಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.





