ಇನ್ಮುಂದೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಟೋಕನ್ ಪಡೆದ ಮರುದಿನ ಸಿಗುತ್ತೆ ಕರೋನ ಲಸಿಕೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 JUNE 2021

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಲಸಿಕೆ ಪಡೆಯಲು ಬೆಳಗ್ಗೆ ಬಹುಬೇಗ ಎದ್ದು ಬಂದು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಟೋಕನ್ ಪಡೆಯುವ ಪದ್ಧತಿಗೆ ಕೊನೆಗೂ ಬ್ರೇಕ್ ಬಿದ್ದಂತಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಟೋಕನ್ ಪಡೆಯಲು ಪ್ರತ್ಯೇಕ ಸಮಯ ನಿಗದಿ ಮಾಡಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಟೋಕನ್ ವ್ಯವಸ್ಥೆ ಮತ್ತು ಲಸಿಕೆ ನೀಡಲು ಆಗುತ್ತಿರುವ ಗೊಂದಲದ ಕುರಿತು ಚರ್ಚೆ ನಡೆಯಿತು. ಅಲ್ಲದೆ ಬದಲಿ ವ್ಯವಸ್ಥೆ ಕುರಿತು ಸಚಿವ ಈಶ್ವರಪ್ಪ ಸೂಚಿಸಿದರು.

Nanjappa Hospital Advertisement

ಬದಲಾವಣೆಗಳು ಏನು?

ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರತಿದಿನ ಕಡ್ಡಾಯವಾಗಿ 500 ಮಂದಿಗೆ ಲಸಿಕೆ ನೀಡಬೇಕು. ಟೋಕನ್‍ಗೆ ಪ್ರತ್ಯೇಕ ಕ್ಯೂ, ಲಸಿಕೆಗೆ ಪ್ರತ್ಯೇಕ ಕ್ಯೂ ಮಾಡಬೇಕು.

ಟೋಕನ್ ಪಡೆದ ಮರುದಿನ ನಿಗದಿತ ಸಮಯದಲ್ಲಿ ಲಸಿಕೆ ಪಡೆಯಬೇಕು. ಟೋಕನ್ ಪಡೆಯಲು ಆಧಾರ್ ಕರ್ಡ್ ಕಡ್ಡಾಯಗೊಳಿಸಬೇಕು ಎಂದು ಸಚಿವ ಈಶ್ವರಪ್ಪ ಸೂಚಿಸಿದರು.

ಲಕ್ಷಣ ಕಂಡು ಬಂದ ಕೂಡಲೆ ಪರೀಕ್ಷೆ ಮಾಡಿಸಿಕೊಳ್ಳಿ. ಶಿವಮೊಗ್ಗದಲ್ಲಿ ಸುರಕ್ಷಿತವಾಗಿ ಕೋವಿಡ್ ಪರೀಕ್ಷೆಗೆ ಫೋನ್ ಮಾಡಿ, ರಿಜಿಸ್ಟರ್ ಮಾಡಿಕೊಳ್ಳಿ

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment