ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
SHIVAMOGGA LIVE NEWS | VEERASHAIVA LINGAYATH | 16 ಏಪ್ರಿಲ್ 2022
ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ಶಿವಮೊಗ್ಗದ ವೀರಶೈವ ಲಿಂಗಾಯತ ಸಮಾಜ ನಿರ್ಧಾರಿಸಿದೆ. ನೊಂದ ಜೀವಕ್ಕೆ ಪಶ್ಚಾತ್ತಾಪ ನಿಧಿ ಸಂಗ್ರಹಿಸಲು ಯೋಜಿಸಲಾಗಿದೆ.
ಶಿವಮೊಗ್ಗದ ಹೊಟೇಲ್ ಒಂದರಲ್ಲಿ ಸಭೆ ನಡೆಸಿದ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಈ ನಿರ್ಧಾರ ಪ್ರಕಟಿಸಿದ್ದಾರೆ. ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ನಂತರ ಹಿಂದೂ ಸಮಾಜ ನೆರವು ನೀಡಿದಂತೆ ಗುತ್ತಿಗೆದಾರ ಸಂತೋಷ್ ಕುಟುಂಬಕ್ಕೆ ನೆರವಾಗಲು ತೀರ್ಮಾನ ಕೈಗೊಳ್ಳಲಾಗಿದೆ.
ನಿಧಿ ಸಂಗ್ರಹ ಹೇಗೆ?
ಸಂತೋಷ್ ಪಾಟೀಲ್ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ನಿಧಿ ಸಂಗ್ರಹ ಮಾಡಲು ತೀರ್ಮಾನಿಸಲಾಗಿದೆ. ವೀರಶೈವ ಲಿಂಗಾಯತ ಸಮಾಜದವರು ನೆರವು ನೀಡಬಹುದು. ಸಾರ್ವಜನಿಕರಿಂದಲೂ ಹಣ ಸಂಗ್ರಹ ಮಾಡಬಹುದಾಗಿದೆ. ಇದಕ್ಕಾಗಿ ಹುಂಡಿಗಳನ್ನು ಸಿದ್ಧಪಡಿಸಲು ಯೋಜಿಸಲಾಗಿದೆ.
ಪಶ್ಚತ್ತಾಪ ನಿಧಿ ಅಂತಾ ಹೆಸರಿಟ್ಟಿದ್ದೇಕೆ?
ಅಭಿಯಾನಕ್ಕೆ ಸೂಕ್ತ ಹೆಸರು ಸೂಚಿಸುವ ಸಂದರ್ಭ ಸಾಗರ ತಾಲೂಕ ಪಂಚಾಯಿತಿ ಮಾಜಿ ಅಧ್ಯಕ್ಷ ಹಕ್ರೆ ಮಲ್ಲಿಕಾರ್ಜುನ ಅವರು, ಪಶ್ಚಾತ್ತಾಪ ನಿಧಿ ಎಂದು ಹೆಸರು ಸೂಚಿಸಿದರು. ಸಂತೋಷ್ ಅವರ ಸಾವಿಗೆ ಕಾರಣರಾದ ನಾಯಕರನ್ನು ಆಯ್ಕೆ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡೆಬೇಕಿದೆ. ಅದಕ್ಕಾಗಿ ನಾವು ಪಶ್ಚಾತ್ತಾಪ ನಿಧಿ ಸಂಗ್ರಹಿಸಿ ಕೊಡಬೇಕಾಗಿದೆ ಎಂದರು. ಸಭೆಯಲ್ಲಿ ಇದಕ್ಕೆ ಸಮ್ಮತಿ ಸಿಕ್ಕಿತು. ಕೊನೆಗೆ ‘ನೊಂದ ಜೀವಕ್ಕೆ ಪಶ್ಚತ್ತಾಪ ನಿಧಿ’ ಎಂದು ಘೋಷಣೆ ಮಾಡಲಾಯಿತು.
2.50 ಲಕ್ಷ ರೂ. ವಾಗ್ದಾನ
ಸಂತೋಷ್ ಪಾಟೀಲ್ ಕುಟುಂಬಕ್ಕೆ ನೆರವಾಗಲು ಈಗಾಗಲೆ ಹಲವರು ಮುಂದಾಗಿದ್ದಾರೆ. ಆದರೆ ಸ್ಪಷ್ಟ ರೂಪುರೇಷೆ ಇರಲಿಲ್ಲ. ಈಗ ವೀರಶೈವ ಲಿಂಗಾಯತ ಸಮಾಜ ವೇದಿಕೆ ಸಿದ್ಧಪಡಿಸಿದೆ. ಸಭೆಯಲ್ಲೆ 2.50 ಲಕ್ಷ ರೂ. ಆರ್ಥಿಕ ನೆರವು ಘೋಷಣೆಯಾಯಿತು.
ನಿಧಿ ಸಂಗ್ರಹಕ್ಕೆ ಗಡುವು
ಇನ್ನು, ನೊಂದ ಜೀವಕ್ಕೆ ಪಶ್ಚತ್ತಾಪ ನಿಧಿ ಸಂಗ್ರಹಕ್ಕೆ ಗಡುವು ನಿಗದಿ ಮಾಡಲಾಗಿದೆ. ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಸಂಗ್ರಹವಾದ ಹಣವನ್ನು ಏಪ್ರಿಲ್ 23ರಂದು ಕುಟುಂಬಕ್ಕೆ ಹಸ್ತಾಂತರ ಮಾಡಲು ನಿರ್ಧರಿಸಲಾಗಿದೆ. ಬೆಳಗಾವಿಗೆ ತೆರಳಿ ಸಂತೋಷ್ ಪಾಟೀಲ್ ಅವರ ಪತ್ನಿಗೆ ಹಣವನ್ನು ನೀಡಲಾಗುತ್ತದೆ.
ರಾಜ್ಯದಲ್ಲೆ ಮೊದಲು ಈ ಪ್ರಯತ್ನ
ಸಂತೋಷ್ ಪಾಟೀಲ್ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಕಾರ್ಯ ರಾಜ್ಯದಲ್ಲೇ ಮೊದಲ ಪ್ರಯತ್ನ. ಶಿವಮೊಗ್ಗದಿಂದ ಪ್ರಾರಂಭ ಮಾಡಿದರೆ ಉಳಿದೆಡೆಯಲ್ಲೂ ನಿಧಿ ಸಂಗ್ರಹಕ್ಕೆ ಪ್ರೇರಣೆ ಸಿಕ್ಕಂತಾಗಲಿದೆ ಎಂದು ಸಮಾಜದ ಮುಖಂಡರ ಯೋಚನೆ.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಪಿ.ದಿನೇಶ್, ಪಾಲಿಕೆ ಸದಸ್ಯ ಹೆಚ್.ಸಿ.ಯೋಗೇಶ್, ಪ್ರಮುಖರಾದ ಮಹೇಶ್ವರಪ್ಪ, ಬಿ.ಕೆ.ಮೋಹನ್, ಪ್ರಕಾಶ್, ಶಿವಕುಮಾರ್, ವಿಜಯಲಕ್ಷ್ಮಿ ಸಿ.ಪಾಟೀಲ್, ಎನ್.ಎಸ್.ಕುಮಾರ್, ಟಿ.ಎಂ.ಕುಮಾರ್, ಚನ್ನೇಶ್, ಪ್ರಕಾಶ್, ಪಿ.ವೀರಮ್ಮ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.




ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
VEERASHAIVA LINGAYATH







