ಶಿವಮೊಗ್ಗದ ಹೊನ್ನಾಳಿ ಫ್ಲೈ ಓವರ್‌ ಮೇಲೆ ವಾಹನ ಸಂಚಾರ ಬಂದ್‌

Published On : ನವೆಂಬರ್ 10, 2025

Published By : ನಿತಿನ್‌ ಆರ್‌.ಕೈದೊಟ್ಲು 

ಶಿವಮೊಗ್ಗ: ರಸ್ತೆ ಕಾಮಗಾರಿ ಹಿನ್ನೆಲೆ ಶಿವಮೊಗ್ಗ – ಹೊನ್ನಾಳಿ ರಸ್ತೆಯಲ್ಲಿರುವ ಹೊನ್ನಾಳಿ ಫ್ಲೈ ಓವರ್‌ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸಂಗೊಳ್ಳಿ ರಾಯಣ್ಣ ಸರ್ಕಲ್‌ ಬಳಿ ಬ್ಯಾರಿಕೇಡ್‌ ಅಳವಡಿಸಿ ಮಣ್ಣು ಹಾಕಿ ಫ್ಲೈ ಓವರ್‌ (Fly over) ಪ್ರವೇಶವನ್ನು ಬಂದ್‌ ಮಾಡಲಾಗಿದೆ. ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

ಶಿವಮೊಗ್ಗ – ಹೊಸಪೇಟೆ ರಾಜ್ಯ ಹೆದ್ದಾರಿಯಲ್ಲಿ ಫ್ಲೈ ಓವರ್‌ ಇಳಿಜಾರು ಮುಕ್ತಾಯ ಜಾಗ ಮತ್ತು ಚತುಷ್ಪಥ ಕೂಡವ ರಸ್ತೆ ಜಾಗದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ವಾಹನ ಸಂಚಾರ ಬಂದ್‌ ಮಾಡಲಾಗಿದೆ.

ವಾಹನಗಳಿಗೆ ಪರ್ಯಾಯ ಮಾರ್ಗ

ಶಿವಮೊಗ್ಗ – ಹೊನ್ನಾಳಿ – ಹೊಸಪೇಟೆ ಕಡೆಗೆ ಸಂಚರಿಸುವ ವಾಹನಗಳು ಶಿವಮೊಗ್ಗದ ಸವಳಂಗ ರಸ್ತೆ, ಉಷಾ ನರ್ಸಿಂಗ್‌ ಹೋಂ, ಜೆಎನ್‌ಎನ್‌ಸಿಇ ಕಾಲೇಜು ಬಳಿ ಬಲಕ್ಕೆ ತಿರುಗಿ ಕುವೆಂಪು ನಗರ, ಶಾಂತಿನಗರ ಮೂಲಕ ಶಿವಮೊಗ್ಗ – ಹೊನ್ನಾಳಿ ರಸ್ತೆಗೆ ತಲುಪಬಹುದು.

ಹೊನ್ನಾಳಿ ಕಡೆಯಿಂದ ಶಿವಮೊಗ್ಗ ಕಡೆಗೆ ಬರುವ ವಾಹನಗಳು ಹೊನ್ನಾಳಿ ರಸ್ತೆಯಿಂದ ಶಾಂತಿನಗರ ಕ್ರಾಸ್‌, ಶಾಂತಿನಗರ ಸರ್ಕಲ್‌ ಕಡೆಯಿಂದ ಎಡಕ್ಕೆ ತಿರುಗಿ, ರಾಗಿಗುಡ್ಡ ರಸ್ತೆಯಿಂದ ಕೆಎಸ್‌ಸಿಎ ಸ್ಟೇಡಿಯಂ ಬಳಿ ಸವಳಂಗ ರಸ್ತೆಗೆ ತಲುಪಿ ಉಷಾ ನರ್ಸಿಂಗ್‌ ಹೋಂ ಕಡೆಯಿಂದ ಶಿವಮೊಗ್ಗ ನಗರ ತಲುಪಬಹುದು.

Vehicle-Movement-stopped-on-honnali-flyover

Vehicle-Movement-stopped-on-honnali-flyover

ಇದನ್ನೂ ಓದಿ » ಮಹಿಳೆಯರಿಗೆ ಗುಡ್‌ ನ್ಯೂಸ್‌, ಶಿವಮೊಗ್ಗದಲ್ಲಿ ರೆಡಿಯಾಗ್ತಿದೆ ಅಕ್ಕ ಪಡೆ, ನೀವು ಸೇರಬಹುದು, ಹೇಗೆ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ನವೆಂಬರ್ 10, 2025

Leave a Comment