ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಈಗ ಬಟ್ಟೆ ಒಗೆಯೋದು ಬಹಳ ಸುಲಭ, ಹೇಗದು? | ವಿಡಿಯೋಗಾಗಿ ಕ್ಲಿಕ್ ಮಾಡಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 JANUARY 2021
ಕೋವಿಡ್ ಹಿನ್ನೆಲೆ ಶಿವಮೊಗ್ಗ ಕಾರಾಗೃಹದ ಬಂಧಿಗಳನ್ನು ಅವರ ಸಂಬಂಧಿಕರು ನೇರವಾಗಿ ಭೇಟಿಯಾ ಆಗುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಸಂದರ್ಶನ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ ಎಂದು ಜೈಲು ಮುಖ್ಯ ಅಧೀಕ್ಷಕ ಡಾ.ರಂಗನಾಥ್ ತಿಳಿಸಿದ್ದಾರೆ.
ಬಂಧಿಗಳೊಂದಿಗೆ ಅವರ ಸಂಬಂಧಿಕರು ಮನೆಯಲ್ಲಿಯೇ ಕುಳಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುವ ಸೌಲಭ್ಯ ಇದು. ವಿಡಿಯೋ ಕಾಲ್ ಮಾಡಲು ಈ ಕೆಳಗಿನ ವಿಧಾನ ಅನುಸರಿಸುವಂತೆ ಅವರು ಕೋರಿದ್ದಾರೆ.
ಕಾಲ್ ಮಾಡುವುದು ಹೇಗೆ?
ಗೂಗಲ್‍ನಲ್ಲಿ ಎನ್‍ಪಿಐಪಿ ಎಂದು ಸರ್ಚ್ ಮಾಡಿ ನಂತರ ನ್ಯೂ ವಿಸಿಟ್ ರಿಜಿಸ್ಟ್ರೇಶನ್ ಮೇಲೆ ಕ್ಲಿಕ್ ಮಾಡಬೇಕು.
ಸಂದರ್ಶಕರು ಇ-ಮೇಲ್ ಮತ್ತು ಮೊಬೈಲ್ ಸಂಖ್ಯೆ ಸೇರಿದಂತೆ ಕಡ್ಡಾಯ ಮಾಹಿತಿಗಳನ್ನು ಭರ್ತಿ ಮಾಡಬೇಕು.
ಬಂಧಿಗಳ ಮಾಹಿತಿ ಭರ್ತಿ ಮಾಡಬೇಕು. ಬಳಿಕ ವಿಡಿಯೋ ಕಾನ್ಫರೆನ್ಸ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ಬಳಿಕ ಮೆಸೇಜ್ ಮತ್ತು ಇ-ಮೇಲ್‍ಗೆ ಬಂದಿರುವ ಒಟಿಪಿಯನ್ನು ಪೋರ್ಟಲ್‍ನಲ್ಲಿ ಹಾಕಿ ಓಕೆ ಮಾಡಬೇಕು.
ಕಾರಾಗೃಹದ ಕಡೆಯಿಂದ ನಿಮ್ಮ ಸಂದರ್ಶನದ ಸಮಯವನ್ನು ನಿಗದಿಪಡಿಸಿದ ನಂತರ ನೀವು ನಮೂದಿಸಿದ ಇ-ಮೇಲ್‍ಗೆ ವಿಐಎಸ್‍ಆರ್‍ಎನ್ ನಂಬರ್, ಪಿನ್ ಮತ್ತು ಲಿಂಕ್ ಬರುತ್ತದೆ.
ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ವಿಐಎಸ್‍ಆರ್‍ಎನ್ ನಂಬರ್ ನೋಂದಾಯಿಸಿ ನೆಕ್ಸ್ಟ್ ಬಟನ್ ಕ್ಲಿಕ್ ಮಾಡಬೇಕು.
ಬಳಿಕ ಸ್ಕ್ರೀನ್‍ನಲ್ಲಿ ನಿಮ್ಮ ಇ-ಮೇಲ್‍ಗೆ ಕಳುಹಿಸಿರುವ ಪಿನ್ ಮತ್ತು ನಿಮ್ಮ ಮೊಬೈಲ್‍ಗೆ ಬರುವ ಒಟಿಪಿಯನ್ನು ಹಾಕಿ ಕ್ಲಿಕ್ ಮಾಡಿದರೆ ಜಿಟ್ಸಿ ಮುಖಾಂತರ ವಿಡಿಯೋ ಸಂದರ್ಶನಕ್ಕೆ ಹಾಜರಾಗಲು ಕೇಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ್ದಲ್ಲಿ ನಿಮ್ಮ ಸ್ನೇಹಿತ ಅಥವಾ ಸಂಬಂಧಿಗಳ ಜತೆ ಮಾತನಾಡಬಹುದು ಎಂದು ಅವರು ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9480806469, 9480806467 ಸಂಪರ್ಕಿಸಬಹುದು ಎಂದು ಅವರು ಹೇಳಿದ್ದಾರೆ.

LATEST NEWS
- ಬೊಮ್ಮನಕಟ್ಟೆಯಲ್ಲಿ ನಿರ್ಮಾಣ ಹಂತದ ಮನೆಗೆ ಬೆಳಗ್ಗೆ ಬಂದ ಇಂಜಿನಿಯರ್‌ಗೆ ಕಾದಿತ್ತು ಶಾಕ್, ಆಗಿದ್ದೇನು?

- ದೀವರ ಕ್ಷೇಮಾಭಿವೃದ್ಧಿ ಸಂಘ; ಕಾರ್ಯಕಾರಿ ಸಮಿತಿ ಪುನರ್ ರಚನೆ, ಯಾರಿಗೆ ಯಾವ ಜವಾಬ್ದಾರಿ?

- ಶಿವಮೊಗ್ಗದ ಶಕ್ತಿ ಟೊಯೊಟಾ ಶೋ ರೂಂನಲ್ಲಿ ಕೆಲಸ ಖಾಲಿ ಇದೆ

- ಶಿವಮೊಗದ ಸಿಟಿ ಬಸ್ಸಿನಲ್ಲಿ ಶಿಕ್ಷಕಿಯ ₹4,00,000 ದ ಮಾಂಗಲ್ಯ ಸರ ಕಳ್ಳತನ, ಹೇಗಾಯ್ತು ಘಟನೆ?

- ಶಿವಮೊಗ್ಗದ ಜಿಲ್ಲೆಯ ಮೂವರು ಪೊಲೀಸರಿಗೆ ಮುಖ್ಯಮಂತ್ರಿ ಪದಕ

About The Editor
ನಿತಿನ್ ಆರ್.ಕೈದೊಟ್ಲು
















ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಿರುದ್ಧ ಕಾಮೆಂಟ್ ಹಾಕಿದ ವ್ಯಕ್ತಿಗೆ ಸಂಕಷ್ಟ, ಆಗಿದ್ದೇನು?