ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ ಲೈವ್.ಕಾಂ | SHIMOGA NEWS | 17 MARCH 2021
ರಾಮಮಂದಿರ ನಿರ್ಮಾಣವಾದರೆ ಸಾಲದು ಅದರ ನಿರ್ವಹಣೆ ಸದಾ ಆಗಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಶ್ರೀ ಯಜುಃ ಸಂಹಿತಾಯಾಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.
ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಇಡೀ ಭಾರತೀಯರ ಹಾಗೂ ಹಿಂದುಗಳ ಕನಸಾಗಿದೆ. ಎಲ್ಲರ ಭಕ್ತಿ ಮತ್ತು ಶಕ್ತಿಯಿಂದ ಶ್ರೀ ರಾಮಮಂದಿರ ನಿರ್ಮಾಣವಾಗುತ್ತಿದೆ. ಭಕ್ತರಿಂದ ಸಾಕಷ್ಟು ಹಣ ಕೂಡ ಸಂಗ್ರಹವಾಗಿದೆ. ಈ ಮಂದಿರ ಶತಮಾನಗಳ ಕಾಲ ವರ್ತಮಾನವಾಗಿಯೇ ಇರುತ್ತದೆ. ಹಾಗಾಗಿ ರಾಮಮಂದಿರ ನಿರ್ಮಾಣವಾದರೆ ಸಾಲದು ಅದರ ನಿರ್ವಹಣೆಯು ಕೂಡ ಅತ್ಯಂತ ಎಚ್ಚರಿಕೆಯಿಂದ ನಡೆಬೇಕಾಗಿದೆ ಎಂದರು.
ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸುವುದು ಇಂದಿನ ತುರ್ತಾಗಿದೆ. ಅದು ಮನೆಯಿಂದಲೇ ನಡೆಯಬೇಕು. ಕೌಟುಂಬಿಕ, ಕುಂದುಕೊರತೆಗಳು ಕಾಡುವ ಕಾಲವಿದು. ಸಾಮಾಜಿಕವಾಗಿ ಪ್ರತೀ ಕುಟುಂಬವು ಬೆಳೆಯಬೇಕಾಗಿದೆ. ಮನೆ, ಮಕ್ಕಳು, ತಂದೆ-ತಾಯಿ, ಹಿರಿಯರು ಹೀಗೆ ಒಟ್ಟು ಕುಟುಂಬದ ಮಾತೃ ಮಂಡಳಿಯ ರಚನೆಯಾಗಬೇಕಾಗಿದೆ ಎಂದರು.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com






