SHIVAMOGGA LIVE NEWS | 22 FEBRURARY 2023
SHIMOGA : ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರು (Name) ಇಡುವುದನ್ನು ಒಕ್ಕಲಿಗ ಸಮುದಾಯದ ಮುಖಂಡರು ಸ್ವಾಗತಿಸಿದ್ದಾರೆ. ಕುವೆಂಪು ಅವರ ಹೆಸರನ್ನೆ ಅಂತಿಮಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕಲಿಗ ಮುಖಂಡರು, ರಾಷ್ಟ್ರಕವಿ ಕುವೆಂಪು ಅವರ ಹೆಸರು (Name) ಇಡುವ ಬೆಳವಣಿಗೆ ಸ್ವಾಗತಾರ್ಹ ಎಂದರು.
ಇದನ್ನೂ ಓದಿ – ಶಿವಮೊಗ್ಗಕ್ಕೆ ಬಂದಿದ್ದು ಸಾಮಾನ್ಯ ವಿಮಾನವಲ್ಲ, ‘ಇಂಡಿಯಾ 1’, ಇದರ ವಿಶೇಷತೆ ಏನು ಗೊತ್ತಾ?
ಯಾರೆಲ್ಲ ಏನೇನು ಹೇಳಿದರು?
ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರು ಇಡಲು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆ ಬಳಿಕವು ಹಲವು ಸಮುದಾಯದವರು ಹಲವು ಹೆಸರು ಇಡುವಂತೆ ಒತ್ತಾಯಿಸುತ್ತಿದ್ದಾರೆ. ಕುವೆಂಪು ಅವರ ಹೆಸರನ್ನೆ ಅಂತಿಮಗೊಳಿಸಬೇಕು. ಯಡಿಯೂರಪ್ಪ ಅವರ ಹೆಸರು ಇಡುವಂತೆ ಒತ್ತಾಯವಿತ್ತು. ಆದರೆ ತಮ್ಮ ಹೆಸರು ಬೇಡ ಕುವೆಂಪು ಅವರ ಹೆಸರು ಇಡುವಂತೆ ಹೇಳಿರುವುದು ಯಡಿಯೂರಪ್ಪ ಅವರ ದೊಡ್ಡತನ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಅವರು ತಿಳಿಸಿದರು.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆರಂಭವಾಗುತ್ತಿರುವುದು ಸಂತೋಷ. ಆದರೆ ಇದಕ್ಕಾಗಿ ಭೂಮಿ ತ್ಯಾಗ ಮಾಡಿದವರನ್ನು ಮರೆಯಬಾರದು. ಪರಿಹಾರ ಮತ್ತು ಪುನರ್ವಸತಿ ಕಲ್ಪಿಸಬೇಕು. ಈ ವಿಚಾರದಲ್ಲಿ ಯಾವುದೆ ಸಬೂಬು ಹೇಳುವುದು, ವಿಳಂಬ ಮಾಡುವುದು ಸರಿಯಲ್ಲ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ್ ಒತ್ತಾಯಿಸಿದರು.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಕ್ಕೆ ಹೊಸ ಹೆಸರು, ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ ಶಿಫಾರಸು
ಟಿ.ಪಿ.ನಾಗರಾಜ್, ಶ್ರೀಕಾಂತ್, ವಿಜಯ್ ಕುಮಾರ್, ಭಾರತೀ ರಾಮಕೃಷ್ಣ, ಸಮಿತ್ರಾ ಕೇಶವಮೂರ್ತಿ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.