ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 25 APRIL 2024
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ELECTION NEWS : ಶಿವಮೊಗ್ಗ ಲೋಕಸಭೆ ಚುನಾವಣೆಗೆ ಮನೆಯಿಂದಲೇ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ನಗರದ ಮೂವರು ಮತದಾರರು ಇವತ್ತು ಪೋಸ್ಟಲ್ ಬ್ಯಾಲೆಟ್ ಮೂಲಕ ತಮ್ಮ ಹಕ್ಕು ಚಲಾಯಿಸಿದರು.
ಮನೆಗೆ ತೆರಳಿ ಮತ ಪಡೆದ ಅಧಿಕಾರಿಗಳು
ಶರಾವತಿ ನಗರದ 91 ವರ್ಷದ ಚಂದ್ರಶೇಖರಪ್ಪ, ಕೋಟೆ ರಸ್ತೆಯ 90 ವರ್ಷದ ಅನ್ನಪೂರ್ಣಮ್ಮ ಹಾಗೂ ಹೊಸಮನೆಯ ವಿಶೇಷ ಚೇತನ ಮತದಾರರ ಹನುಮಂತರಾಯಪ್ಪ ಅಂಚೆ ಮತದಾನ ಮಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಮತದಾರರಿಗೆ ಹೂಗುಚ್ಛ ನೀಡಿದರು. ಚುನವಣಾ ಅಧಿಕಾರಿಗಳು ಈ ಸಂದರ್ಭ ಇದ್ದರು.
ನೋಂದಾಯಿತರಿಗೆ ಮನೆಯಿಂದಲೇ ಮತದಾನ
ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಲು ಹಿರಿಯ ನಾಗರಿಕರು, ವಿಶೇಷ ಚೇತನರಿಗೆ ಕಷ್ಟವಾಗಲಿದೆ. ಈ ಹಿನ್ನೆಲೆ ಚುನಾವಣಾ ಆಯೋಗ ಇಂತಹ ಮತದಾರರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಿದೆ. ನೋಂದಾಯಿಸಿಕೊಂಡ ಮತದಾರರಿಗೆ ಚುನಾವಣ ಅಧಿಕಾರಿಗಳೆ ಮನೆಗೆ ತೆರಳಿ ಮತದಾನ ಮಾಡಿಸಿಕೊಳ್ಳುತ್ತಾರೆ. ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 2,515 ಹಿರಿಯ ನಾಗರಿಕರು, 1,064 ವಿಶೇಷ ಚೇತನರು ಮನೆಯಿಂದಲೇ ಮತದಾನ ಮಾಡಲಿದ್ದಾರೆ.
ಯಾವ್ಯಾವಾ ಕ್ಷೇತ್ರದಲ್ಲಿ ಎಷ್ಟಿದ್ದಾರೆ?
ಶಿವಮೊಗ್ಗ ಗ್ರಾಮಾಂತರದಲ್ಲಿ 124 ಹಿರಿಯ ನಾಗರಿಕರು, 76 ವಿಶೇಷ ಚೇತನರು, ಭದ್ರಾವತಿಯಲ್ಲಿ 172 ಹಿರಿಯ ನಾಗರಿಕರು, 70 ವಿಶೇಷ ಚೇತನರು, ಶಿವಮೊಗ್ಗ ನಗರದಲ್ಲಿ 237 ಹಿರಿಯ ನಾಗರಿಕರು, 64 ವಿಶೇಷ ಚೇತನರು, ತೀರ್ಥಹಳ್ಳಿಯಲ್ಲಿ 356 ಹಿರಿಯ ನಾಗರಿಕರು, 150 ವಿಶೇಷ ಚೇತನರು, ಶಿಕಾರಿಪುರದಲ್ಲಿ 126 ಹಿರಿಯ ನಾಗರಿಕರು, 88 ವಿಶೇಷ ಚೇತನರು, ಸೊರಬದಲ್ಲಿ 242 ಹಿರಿಯ ನಾಗರಿಕರು, 140 ವಿಶೇಷ ಚೇತನರು, ಸಾಗರದಲ್ಲಿ 363 ಹಿರಿಯ ನಾಗರಿಕರು, 179 ವಿಶೇಷ ಚೇತನರು, ಬೈಂದೂರುದಲ್ಲಿ 895 ಹಿರಿಯ ನಾಗರಿಕರು, 297 ವಿಶೇಷ ಚೇತನರು ನೋಂದಾಯಿಸಿಕೊಂಡಿದ್ದಾರೆ.
ಇದನ್ನೂ ಓದಿ – ಅಬ್ಬಲಗೆರೆ ಗ್ರಾಮ ಪಂಚಾಯಿತಿ ಗ್ರೇಡ್ 2 ಕಾರ್ಯದರ್ಶಿ ಲೋಕಾಯುಕ್ತ ಬಲೆಗೆ