ಶಿವಮೊಗ್ಗ ಲೈವ್.ಕಾಂ | SHIMOGA NEWS | 20 JUNE 2021
ವಾಕಿಂಗ್, ಜಾಗಿಂಗ್, ಯೋಗ ಪ್ರಿಯರಿಗೆ ಲಾಕ್ ಡೌನ್‍ನಿಂದ ರಿಲೀಫ್ ಸಿಕ್ಕಿದೆ. ಶಿವಮೊಗ್ಗ ಜಿಲ್ಲೆಯ ಪಾರ್ಕು, ಸ್ಟೇಡಿಯಂನಲ್ಲಿ ವ್ಯಾಯಾಮ ಮಾಡಲು ಅವಕಾಶ ನೀಡಲಾಗಿದೆ.
ಜಿಲ್ಲಾಧಿಕಾರಿ ಅವರಿಗೆ ಇರುವ ವಿಶೇಷ ಅಧಿಕಾರ ಬಳಕೆ ಮಾಡಿಕೊಂಡು ಯೋಗ, ವಾಕಿಂಗ್, ಜಾಗಿಂಗ್‍ಗೆ ಅವಕಾಶ ನೀಡಲಾಗುತ್ತಿದೆ. ಆದರೆ ಹೆಚ್ಚು ಜನ ಸೇರಬಾರದು ಎಂಬ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಇದನ್ನೂ ಓದಿ | ಶಿವಮೊಗ್ಗ, ಭದ್ರವತಿಗೆ ಪ್ರತ್ಯೇಕ ಆನ್ ಲಾಕ್ ರೂಲ್ಸ್, ಕೆಲವಕ್ಕೆ ಮಧ್ಯಾಹ್ನ 12 ಗಂಟೆ, ಇನ್ನೂ ಕೆಲವಕ್ಕೆ 2ಗಂಟೆವರೆಗೆ ಅವಕಾಶ
ಲಾಕ್ ಡೌನ್ ಘೋಷಣೆ ಆದಾಗಿನಿಂದ ಪಾರ್ಕ್, ಸ್ಟೆಡಿಯಂಗಳಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿತ್ತು. ಇದೆ ಕಾರಣಕ್ಕೆ ಹಲವರು ರಸ್ತೆಯಲ್ಲಿ, ಖಾಲಿ ಬಡಾವಣೆಗಳಲ್ಲಿ ವಾಕಿಂಗ್, ಜಾಗಿಂಗ್ ಮಾಡುತ್ತಿದ್ದರು. ಇಂತಹವರನ್ನು ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ | ರಾಜ್ಯಾದ್ಯಂತ ಹೊಸ ಅನ್ ಲಾಕ್ ರೂಲ್ಸ್, ಯಾವ್ಯಾವ ಜಿಲ್ಲೆಯಲ್ಲಿ ಹೇಗಿರುತ್ತೆ ಸಡಿಲಿಕೆ? ಶಿವಮೊಗ್ಗದ ಸ್ಥಿತಿ ಏನು?
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]