ಶಿವಮೊಗ್ಗ ಜಿಲ್ಲೆಯ ಮತ ಯಂತ್ರಗಳು ಸ್ಟ್ರಾಂಗ್‌ ರೂಂನಲ್ಲಿ ಭದ್ರ, ಏನಿದು ಸ್ಟ್ರಾಂಗ್‌ ರೂಂ? ಹೇಗಿರುತ್ತೆ ವ್ಯವಸ್ಥೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 11 MAY 2023

SHIMOGA : ವಿಧಾನಸಭೆ ಚುನಾವಣೆ ಮುಗಿದಿದ್ದು ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಮತ ಯಂತ್ರಗಳು ಸ್ಟ್ರಾಂಗ್‌ ರೂಂ ಸೇರಿವೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಸ್ಟ್ರಾಂಗ್‌ ರೂಂನ (Strong Room) ಸ್ಥಾಪಿಸಲಾಗಿದೆ.

Sahyadri-College-Strong-Room

ಹೇಗಿದೆ ಸ್ಟ್ರಾಂಗ್‌ ರೂಂ?

1ಮತದಾನದ ಬಳಿಕ ಆಯಾ ಕ್ಷೇತ್ರದಲ್ಲಿನ ಡಿಮಸ್ಟರಿಂಗ್‌ ಕೇಂದ್ರಗಳಿಗೆ ಮತ ಯಂತ್ರಗಳನ್ನು ಕೊಂಡೊಯ್ದು ಅಧಿಕಾರಿಗಳು ಒಪ್ಪಿಸಿದ್ದಾರೆ. ಕ್ಷೇತ್ರವಾರು ಮತ ಯಂತ್ರಗಳನ್ನು ಒಟ್ಟುಗೂಡಿಸಿ, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್‌ ರೂಂಗೆ ತರಲಾಗಿದೆ.

strong room in Sahyadri college in Shimoga

2ಸಹ್ಯಾದ್ರಿ ಕಾಲೇಜಿನ ವಿವಿಧ ಕೊಠಡಿಗಳಲ್ಲಿ ಕ್ಷೇತ್ರವಾರು ಪ್ರತ್ಯೇಕವಾಗಿ ಮತ ಯಂತ್ರಗಳನ್ನು ಇರಿಸಲಾಗಿದೆ. ಬೆಳಗಿನ ಜಾವದ ತನಕ ಸ್ಟ್ರಾಂಗ್‌ ರೂಂನಲ್ಲಿ ಮತ ಯಂತ್ರಗಳನ್ನು ಜೋಡಿಸುವ ಕೆಲಸ ನಡೆಯಿತು. ಈ ವೇಳೆ ಚುನಾವಣಾಧಿಕಾರಿಗಳು, ಭದ್ರತಾ ಸಿಬ್ಬಂದಿ ಹಾಜರಿದ್ದರು. ಪ್ರತಿಯೊಂದರ ವಿಡಿಯೋ ಚಿತ್ರೀಕರಣವನ್ನು ಮಾಡಲಾಗಿದೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಮತ ಯಂತ್ರಗಳಿಗೆ ಸೀಲ್‌, ಮುಂದೇನಿರುತ್ತೆ ಪ್ರಕ್ರಿಯೆ? ಎಲ್ಲೆಲ್ಲಿ ಎಷ್ಟಾಗಿದೆ ವೋಟಿಂಗ್? ಕಂಪ್ಲೀಟ್‌ ರಿಪೋರ್ಟ್

3ಸ್ಟ್ರಾಂಗ್‌ ರೂಂ (Strong Room) ಕೊಠಡಿಯೊಳಗೆ ಮತಗಟ್ಟೆ ಸಂಖ್ಯೆವಾರು ಮತ ಯಂತ್ರಗಳನ್ನು ಜೋಡಿಸಿ ಬಾಗಿಲಿಗೆ ಬೀಗ ಹಾಕಿ, ಸೀಲ್‌ ಮಾಡಲಾಗಿದೆ. ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಇನ್ನು, ಪ್ರತಿ ಬಾಗಿಲು, ಕಿಟಕಿ ಸಂಪೂರ್ಣ ಬಂದ್‌ ಆಗುವಂತೆ ಪ್ಲೇ ವುಡ್‌ ಮುಚ್ಚಿ, ಅದಕ್ಕೆ ಮೊಳೆ ಹೊಡೆಯಲಾಗಿದೆ.

strong room in Sahyadri college in Shimoga

4ಸ್ಟ್ರಾಂಗ್‌ ರೂಂ ಸುತ್ತಲು ಸಿಆರ್‌ಪಿಎಫ್‌ ಯೋಧರನ್ನು ನಿಯೋಜನೆ ಮಾಡಲಾಗಿದೆ. ರಾಜ್ಯ ಪೊಲೀಸರು ಕೂಡ ಭದ್ರತೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ರಾತ್ರಿ ಹೊತ್ತಿನಲ್ಲಿ ಸ್ಟ್ರಾಂಗ್‌ ರೂಂ ಸುತ್ತಲು ಯಾರೊಬ್ಬರೂ ಸುಳಿಯದಂತೆ ನೋಡಿಕೊಳ್ಳಲು ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಸಹ್ಯಾದ್ರಿ ಕಾಲೇಜು ಕಟ್ಟಡದ ಸುತ್ತಲು ಲೈಟ್‌ಗಳನ್ನು ಅಳವಡಿಸಲಾಗಿದೆ.
WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ 5ಸ್ಟ್ರಾಂಗ್‌ ರೂಂ ಇರುವ ಕಟ್ಟಡದೊಳಗೆ ಯಾರಂದರೆ ಅವರು ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ನಿಗದಿತ ಚುನಾವಣಾಧಿಕಾರಿಗಳಗೆ ಮಾತ್ರ ಕಟ್ಟಡದೊಳಗೆ ಹೋಗಿ ಬರಲು ಅವಕಾಶವಿರುತ್ತದೆ. ಮತ ಎಣಿಕೆ ದಿನವ ಪಾಸ್‌ ಇದ್ದವರಿಗೆ ಮಾತ್ರ ಒಳ ಹೋಗಲು ಅವಕಾಶವಿರಲಿದೆ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : May 11, 2023

Leave a Comment