ಶಿವಮೊಗ್ಗ MLA ಕಚೇರಿಯಲ್ಲಿ ವಾಟ್ಸಪ್‌ ಹೆಲ್ಪ್‌ಲೈನ್‌ ಶುರು, ಏನಿದು? ಹೇಗಿರುತ್ತೆ? ಜನಕ್ಕೇನು ಉಪಯೋಗ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE | 15 JULY 2023

SHIMOGA : ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಮತ್ತು ಜನರ ಸಮಸ್ಯೆ ಆಲಿಸಲು ಶಿವಮೊಗ್ಗ ಶಾಸಕ ಚನ್ನಬಸಪ್ಪ ವಿನೂತನ ಮಾರ್ಗ ಕಂಡುಕೊಂಡಿದ್ದಾರೆ. ತಮ್ಮ ಕಚೇರಿಯಲ್ಲಿ ವಾಟ್ಸಪ್‌ ಹೆಲ್ಪ್‌ ಲೈನ್‌ (Whatsapp Helpline) ಆರಂಭಿಸಿದ್ದಾರೆ. ಪ್ರತ್ಯೇಕ ವಾಟ್ಸಪ್‌ ನಂಬರ್‌ ಬಿಡುಗಡೆ ಮಾಡಿದ್ದು, ಈ ನಂಬರ್‌ಗೆ ಮೆಸೇಜ್‌ ಕಳುಹಿಸಿದರೆ ಸಮಸ್ಯೆಗಳು ಶೀಘ್ರ ಪರಿಹಾರ ಕಾಣಲಿವೆ ಎಂದು ಭರವಸೆಯನ್ನು ನೀಡಿದ್ದಾರೆ.‌

ಸ್ಮಾರ್ಟ್‌ ಶಿವಮೊಗ್ಗ

ನೆಹರು ರಸ್ತೆಯಲ್ಲಿರುವ ಶಾಸಕರ ಕಚೇರಿಯಲ್ಲಿ ಇವತ್ತು ಶಾಸಕ ಎಸ್‌.ಎನ್.ಚನ್ನಬಸಪ್ಪ ಅವರು ಹೆಲ್ಪ್‌ಲೈನ್‌ (Whatsapp Helpline) ನಂಬರ್‌ ಬಿಡುಗಡೆ ಮಾಡಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ನುಡಿ, ನಮ್ಮ ನಡೆ ಧ್ಯೇಯದೊಂದಿಗೆ ಜನರ ಅಭಿಪ್ರಾಯ ಪಡೆದು‌ ಸ್ಮಾರ್ಟ್‌ ಶಿವಮೊಗ್ಗ ನಿರ್ಮಾಣ ಮಾಡಲಾಗುತ್ತದೆ. ಹಾಗಾಗಿ ವಾಟ್ಸಪ್‌ ಹೆಲ್ಪ್‌ಲೈನ್‌ ಆರಂಭಿಸಲಾಗಿದೆ. ಈ ನಂಬರ್‌ಗೆ ಜನರು ಸಮಸ್ಯೆಗಳು ಮತ್ತು ಸಲಹೆಗಳನ್ನು ಮೆಸೇಜ್‌ ಮಾಡಬಹುದು ಎಂದು ತಿಳಿಸಿದರು.

ಇದನ್ನೂ ಓದಿ – ಶಿವಮೊಗ್ಗ – ಬೆಂಗಳೂರು ವಿಮಾನದ ಟಿಕೆಟ್‌ ಬುಕ್ಕಿಂಗ್‌ಗೆ ದಿನಾಂಕ ಫಿಕ್ಸ್‌, ಯಾವ ಮಾದರಿ ವಿಮಾನ? ಎಷ್ಟು ಸೀಟ್‌ ಇರುತ್ತೆ?

ಹೆಲ್ಪ್‌ಲೈನ್‌ಗೆ ಮೆಸೇಜ್‌ ಮಾಡುವುದು ಹೇಗೆ?

STEP 1 : ಶಾಸಕರ ಕಚೇರಿ ಹೆಲ್ಪ್‌ಲೈನ್‌ ನಂಬರ್‌ 9019901177 ಗೆ ವಾಟ್ಸಪ್‌ನಲ್ಲಿ ಹಾಯ್‌ ಎಂದು ಕಳುಹಿಸಬೇಕು.

Whatsapp-Helpline-by-Shimoga-MLA-SN-Channabasappa

SETP 2 : ಹೆಲ್ಪ್‌ಲೈನ್‌ ವಾಟ್ಸಪ್‌ನಿಂದ ಹೆಸರು, ಜನ್ಮ ದಿನಾಂಕ, ಫೋನ್‌ ನಂಬರ್‌, ವಾರ್ಡ್‌ ನಂಬರ್‌, ವಿಳಾಸ, ಸಮಸ್ಯೆ, ಸಲಹೆಗಳಿದ್ದರೆ ತಿಳಿಸಿ ಎಂಬ ಮೆಸೇಜ್‌ ಬರಲಿದೆ.

STEP 3 : ಆ ಅರ್ಜಿ ಭರ್ತಿ ಮಾಡಿ ವಾಟ್ಸಪ್‌ಗೆ ಕಳುಹಿಸಿದರೆ ಶಾಸಕರ ಕಚೇರಿಯಲ್ಲಿರುವ ಕರ್ತವ್ಯ ಪಡೆ ತಂಡ ಇದರ ಪರಿಶೀಲನೆ ನಡೆಸಲಿದೆ.

SMG-LIVE-JUNE-VIEWS

ನಗರದ ವಿವಿಧೆಡೆ ಸಲಹೆ ಪೆಟ್ಟಿಗೆ

ಇನ್ನು, ಶಿವಮೊಗ್ಗ ನಗರದ ವಿವಿಧೆಡೆ ಸಲಹೆ ಪೆಟ್ಟಿಗೆಗಳನ್ನು ಇರಿಸಲು ಶಾಸಕ ಎಸ್‌.ಎನ್.ಚನ್ನಬಸಪ್ಪ ನಿರ್ಧರಿಸಿದ್ದಾರೆ. ಸಾರ್ವಜನಿಕರು ದೂರು, ದುಮ್ಮಾನಗಳು, ಸಲಹೆಗಳನ್ನು ಬರೆದು ಪೆಟ್ಟಿಗೆಯಲ್ಲಿ ಹಾಕಬಹುದಾಗಿದೆ.

ಅಭಿಪ್ರಾಯ ಸಂಗ್ರಹಕ್ಕಾಗಿ ಅಲ್ಲಲ್ಲಿ ಪೆಟ್ಟಿಗೆಗಳನ್ನು ಇರಿಸಲಾಗುತ್ತದೆ. ಇದರಲ್ಲಿ ಬಂದ ಸಂಗತಿಗಳನ್ನು ಕೂಡ ಪರಿಶೀಲಿಸಲಾಗುತ್ತದೆ. ಪಾಲಿಕೆ ಸದಸ್ಯರು, ನಮ್ಮ ಸಂಘಟನೆ ಜೊತೆಯಲ್ಲಿ ಶಿವಮೊಗ್ಗ ನಗರದ ಅಭಿವೃದ್ಧಿ ಮಾಡಲಾಗುತ್ತದೆ.ಎಸ್.ಎನ್.ಚನ್ನಬಸಪ್ಪ, ಶಿವಮೊಗ್ಗ ಶಾಸಕ

 

ವಾಟ್ಸಪ್‌ ನಿರ್ವಹಣೆಗೆ ‘ಕರ್ತವ್ಯ ಪಡೆ’

ವಾಟ್ಸಪ್‌ ನಿರ್ವಹಣೆಗೆ ಶಾಸಕರ ಕಚೇರಿಯಲ್ಲಿ ಕರ್ತವ್ಯ ಪಡೆ ರಚಿಸಲಾಗಿದೆ. ಈ ತಂಡ ವಾಟ್ಸಪ್‌ಗೆ ಬರುವ ಪ್ರತಿ ಮೆಸೇಜ್ ಪರಿಶೀಲಿಸಿ ಅಧಿಕಾರಿಗಳು, ಕಾರ್ಪೊರೇಟರ್‌ಗಳಿಗೆ ರವಾನಿಸುತ್ತದೆ‌ ಎಂದು ಶಾಸಕ ಚನ್ನಬಸಪ್ಪ ತಿಳಿಸಿದರು.

Malnad Concrete

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment