ಶಿವಮೊಗ್ಗಕ್ಕೆ ಬಿಳಿ ಹುಲಿ ಆಗಮನ, ತ್ಯಾವರೆಕೊಪ್ಪದಲ್ಲಿ 6 ನೂತನ ಸದಸ್ಯರ ದರ್ಶನ, ಇನ್ನು ಯಾವೆಲ್ಲ ಪ್ರಾಣಿ ಬಂದಿವೆ?

ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ (Zoo) ನೂತನ ಸದಸ್ಯರ ಆಗಮನವಾಗಿದೆ. ಶಿವಮೊಗ್ಗಕ್ಕೆ ಆಗಮಿಸಿದಾಗಿನಿಂದ ಕ್ವಾರಂಟೈನ್‌ನಲ್ಲಿದ್ದ ಪ್ರಾಣಿಗಳು ಈಗ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೃಗಾಲಯದ ಅಧಿಕಾರಿಗಳು ಫೋಟೊ ರಿಲೀಸ್‌ ಮಾಡಿದ್ದಾರೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 9 ಪ್ಯಾರಾಗಳು ಕೆಳಗಿವೆ.

ಇದೇ ಮೊದಲ ಬಾರಿ ಶಿವಮೊಗ್ಗದ ಮೃಗಾಲಯಕ್ಕೆ ಬಿಳಿ ಹುಲಿ ಆಗಮನವಾಗಿದೆ. ಇನ್ನು, ಇದೇ ಮೊದಲ ಬಾರಿ ಹೊರ ರಾಜ್ಯದಿಂದ ಹುಲಿ, ಸಿಂಹಗಳನ್ನು ತರಿಸಲಾಗಿದೆ.

ಯಾವೆಲ್ಲ ಪ್ರಾಣಿಗಳು ಬಂದಿವೆ? ಇಲ್ಲಿದೆ ಫೋಟೊ ಮಾಹಿತಿ

» ಬಿಳಿ ಹುಲಿ

ಶಿವಮೊಗ್ಗ ಮೃಗಾಲಯಕ್ಕೆ ಇದೆ ಮೊದಲ ಬಾರಿ ಬಿಳಿ ಹುಲಿ ಆಗಮನವಾಗಿದೆ. ಔರಂಗಾಬಾದ್‌ ಮೃಗಾಲಯದಿಂದ 2 ವರ್ಷದ ವಿಕ್ರಂ ಹುಲಿ ತರಿಸಲಾಗಿದೆ. ಇಲ್ಲಿದೆ ಫೋಟೊ

White Tiger To Shimoga Zoo

» ಮೂರು ಬಂಗಾಳ ಹುಲಿಗಳು

ತ್ಯಾವರೆಕೊಪ್ಪ ಸಫಾರಿಗೆ ಮೂರು ಬಂಗಾಳ ಹುಲಿಗಳು ಆಗಮಿಸಿವೆ. ಔರಂಗಾಬಾದ್‌ ಸಫಾರಿಯಿಂದ ಎರಡು ಹೆಣ್ಣು ಹುಲಿಗಳು 2 ವರ್ಷದ ಶ್ರಾವಣಿ ಮತ್ತು 5 ವರ್ಷದ ರೋಹಿಣಿ, ಇಂದೋರ್‌ ಮೃಗಾಲಯದಿಂದ 3 ವರ್ಷ ಭದ್ರಾ ಆಗಮಿಸಿದೆ. ಇಲ್ಲಿದೆ ಫೋಟೊ

Bengal Tiger To Shimoga Zoo

» ಎರಡು ಸಿಂಹಗಳು

ಇಂದೋರ್‌ ಮೃಗಾಲಯದಿಂದ ಎರಡು ಸಿಂಹಗಳು ಆಗಮಿಸಿವೆ. 2 ವರ್ಷದ ಸಿಂಹ ಶಿವ, 2 ವರ್ಷದ ಸಿಂಹಿಣಿ ಸಾರಾ ಆಗಮಿಸಿವೆ. ಇಲ್ಲಿದೆ ಫೋಟೊ

Lions to Shimoga Zoo

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ ಹಲವು ಸಬ್‌ ಇನ್ಸ್‌ಪೆಕ್ಟರ್‌ಗಳು ವರ್ಗಾವಣೆ, ಯಾರೆಲ್ಲ ಟ್ರಾನ್ಸ್‌ಫರ್‌ ಆಗಿದ್ದಾರೆ?

031025-White-Tiger-in-Shimoga-Tyavarekoppa-Lion-and-Tiger-Safari.webp

Leave a Comment