ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಅವೈಜ್ಞಾನಿಕ ಹಂಪ್‌ಗೆ ಯುವಕ ಬಲಿಯಾದ ನಂತರ ಆಕ್ರೋಶಗೊಂಡ ಸ್ಥಳೀಯರು ಒಂದು ಡೇಂಜರ್ ಹಂಪ್ (road hump) ಕಿತ್ತೊಗೆದಿದ್ದಾರೆ.
ಫ್ಲೈ ಓವರ್ ಇಳಿಯುತ್ತಿದ್ದಂತೆ ಎಲ್.ಬಿ.ಎಸ್ ನಗರಕ್ಕೆ ಹೋಗುವ ಮಾರ್ಗದಲ್ಲಿ ಸವಳಂಗ ರಸ್ತೆಯ ಎರಡು ಬದಿಯಲ್ಲಿ ಹಂಪ್‌ಗಳನ್ನು ಹಾಕಲಾಗಿತ್ತು.
ಯುವಕನ ಸಾವಿನ ಬಳಿಕ ಹಂಪ್ ತೆರವು
ಈ ಹಂಪ್‌ಗಳು ಹಾಕಿದಾಗಿನಿಂದ ಇಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿತ್ತು. ನಿತ್ಯ ಹತ್ತಾರು ಅಪಘಾತಗಳು ಸಂಭವಿಸುತ್ತಿದ್ದವು. ಫೆ.12ರಂದು ಇದೇ ಹಂಪ್‌ನ ಕಾರಣಕ್ಕೆ ರಾಗಿಗುಡ್ಡದ ಸಯ್ಯದ್ ಸುಹೇಲ್ ಉಲ್ಲಾ (32) ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು. ಕೋಮಾಗೆ ತಲುಪಿದ್ದ ಇವರು ಫೆ.15ರಂದು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇದರ ವಿಡಿಯೋ ಸಹಿತ ವರದಿ ಇಲ್ಲಿದೆ – ಶಿವಮೊಗ್ಗದ ಅವೈಜ್ಞಾನಿಕ ಹಂಪ್‌ಗೆ ಮೊದಲ ಬಲಿ, ಸಿಸಿಟಿವಿಯಲ್ಲಿ ಭೀಕರತೆ ಸೆರೆ, ಇಲ್ಲಿದೆ ವಿಡಿಯೋ

ರಾತ್ರೋರಾತ್ರಿ ಹಂಪ್ ತೆರವು
ಇನ್ನು, ಯುವಕ ಮೃತಪಟ್ಟ ಬೆನ್ನಿಗೆ ಸವಳಂಗ ರಸ್ತೆಯಲ್ಲಿದ್ದ ಒಂದು ಬದಿಯ ಹಂಪ್ ತೆರವು ಮಾಡಲಾಗಿದೆ. ರಾತ್ರೋರಾತ್ರಿ ಜೆಸಿಬಿ ತರಿಸಿದ ಸ್ಥಳೀಯ ಯುವಕರು ಒಂದು ಬದಿಯಲ್ಲಿದ್ದ ಹಂಪ್ ಕಿತ್ತೊಗೆದಿದ್ದಾರೆ. ಇದರ ವಿಡಿಯೋ ಇಲ್ಲಿದೆ.
ತೆರವು ವೇಳೆಯೇ ಅಪಘಾತ
ಇನ್ನ, ರಸ್ತೆಯ ಒಂದು ಬದಿಯ ಹಂಪ್ ತೆರವು ಮಾಡುತ್ತಿದ್ದಾಗಲೆ ಮತ್ತೊಂದ ಬದಿಯಲ್ಲಿದ್ದ ಹಂಪ್ ಹಾರಿ ದ್ವಿಚಕ್ರ ವಾಹನ ಸವಾರರೊಬ್ಬರು ಬಿದ್ದಿದ್ದಾರೆ. ಹಿರಿಯ ನಾಗರಿಕರೊಬ್ಬರು ವಾಹನದಲ್ಲಿ ಇರಿಸಿಕೊಂಡಿದ್ದ ಊಟವೆಲ್ಲ ರಸ್ತೆಗೆ ಬಿದ್ದು ಹಾನಿಯಾಯಿತು. ಅವೈಜ್ಞಾನಿಕ ಹಂಪ್‌ಗಳಿಂದಾಗಿ ಶಿವಮೊಗ್ಗ ನಗರದ ಹಲವೆಡೆ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಈ ಕುರಿತು ಕಳೆದ ಎರಡು ತಿಂಗಳಿಂದ ಶಿವಮೊಗ್ಗ ಲೈವ್.ಕಾಂ ವರದಿ ಪ್ರಕಟಿಸಿದೆ.
LATEST NEWS
- ಶಿವಮೊಗ್ಗದಲ್ಲಿ ಇವತ್ತು ಎಷ್ಟಿದೆ ಅಡಿಕೆ ರೇಟ್? | 16 ಫೆಬ್ರವರಿ 2026 | ಅಡಿಕೆ ಧಾರಣೆ

- ರಾತ್ರೋರಾತ್ರಿ ಒಂದು ಡೇಂಜರ್ ಹಂಪ್ ಕಿತ್ತೊಗೆದ ಸ್ಥಳೀಯರು, ಎಲ್ಲಿ?

- ಶಿವಮೊಗ್ಗದ ಅವೈಜ್ಞಾನಿಕ ಹಂಪ್‌ಗೆ ಮೊದಲ ಬಲಿ, ಸಿಸಿಟಿವಿಯಲ್ಲಿ ಭೀಕರತೆ ಸೆರೆ, ಇಲ್ಲಿದೆ ವಿಡಿಯೋ

- ಶಿವಮೊಗ್ಗ ವಿಮಾನ ನಿಲ್ದಾಣದ ಮಣ್ಣು ಪರೀಕ್ಷೆ, ಇನ್ನೊಂದು ವಾರದಲ್ಲಿ ವರದಿ, ಪರೀಕ್ಷೆ ಯಾಕೆ?

- ಶಿವಮೊಗ್ಗದಲ್ಲಿ ಬಂಜಾರ ಮುಖಂಡರು ಪೊಲೀಸ್ ವಶಕ್ಕೆ, ಸಭೀಕರಿಲ್ಲದೆ ನಡೆಯಿತು ಸೇವಾಲಾಲ್ ಜಯಂತಿ

About The Editor
ನಿತಿನ್ ಆರ್.ಕೈದೊಟ್ಲು





