SHIVAMOGGA LIVE | 9 JULY 2023
SHIMOGA : ಜಗತ್ತಿನ ಅತಿ ಎತ್ತರದ ಶ್ರೀ ಬಾಲಸುಬ್ರಹ್ಮಣ್ಯ ಮೂರ್ತಿಯನ್ನು (Murugan Statue) ಶಿವಮೊಗ್ಗ ನಗರದಲ್ಲಿ ನಿರ್ಮಿಸಲಾಗುತ್ತಿದೆ. ಮೂರ್ತಿ ನಿರ್ಮಾಣಕ್ಕೆ ಇವತ್ತು ಶಿಲಾನ್ಯಾಸ ನೆರವೇರಿಸಲಾಯಿತು.
ನಗರದ ಗುಡ್ಡೇಕಲ್ ದೇವಸ್ಥಾನದ ಆವರಣದಲ್ಲಿ ಬೃಹತ್ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಮೂರ್ತಿ (Murugan Statue) ನಿರ್ಮಿಸಲಾಗುತ್ತಿದೆ. ಈ ಮೂರ್ತಿ 151 ಅಡಿ ಎತ್ತರದ್ದಾಗಿರಲಿದೆ. ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಸಂಸದ ಬಿ.ವೈ.ರಾಘವೇಂದ್ರ ಶಿಲಾನ್ಯಾಸ ನೆರವೇರಿಸಿದರು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ, ಮೇಯರ್ ಶಿವಕುಮಾರ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ, ಪಾಲಿಕೆ ಸದಸ್ಯೆ ಯಮುನಾ ರಂಗೇಗೌಡ, ದೇವಸ್ಥಾನ ಟ್ರಸ್ಟ್ನ ಅಧ್ಯಕ್ಷ ಡಿ.ರಾಜಶೇಖರ್, ಪ್ರಮುಖರಾದ ಎನ್.ರಮೇಶ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಬೃಹತ್ ಪ್ರತಿಮೆ ಕುರಿತು ಟಾಪ್ 7 ವಿಷಯ
ಶಿವಮೊಗ್ಗದಲ್ಲಿ ನಿರ್ಮಾಣವಾಗುತ್ತಿರುವುದು ಜಗತ್ತಿನ ಅತ್ಯಂತ ಎತ್ತರದ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಯ ಪ್ರತಿಮೆ. ಇದರ ಎತ್ತರ 151 ಅಡಿ. ಮಲೇಷಿಯಾ ದೇಶದ ಬಟು ಗುಹೆಗಳ ಬಳಿ ಇರುವ ಮುರುಗನ್ ಪ್ರತಿಮೆ 140 ಅಡಿ ಎತ್ತರದ್ದಾಗಿದೆ. ಇದು ಜಗದ್ವಿಖ್ಯಾತಿ ಪಡೆದಿದೆ. ಈಚೆಗೆ ತಮಿಳುನಾಡಿನ ಸೇಲಂನಲ್ಲಿ 146 ಅಡಿ ಎತ್ತರದ ಮುರುಗನ್ ಪ್ರತಿಮೆ ನಿರ್ಮಾಸಲಾಗಿದೆ. ಸದ್ಯ ಜಗತ್ತಿನ ಅತಿ ಎತ್ತರದ ಮುರುಗನ್ ಪ್ರತಿಮೆ (Murugan Statue) ಇದಾಗಿದೆ.
ಬೃಹತ್ ಗಾತ್ರದ ಬಂಡೆಯ ಮೇಲೆ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಯ ಮೂರ್ತಿಯನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ತಾಂತ್ರಿಕ ಪರಿಣತರು, ಇಂಜಿನಿಯರ್ಗಳಿಂದ ಸಲಹೆ ಪಡೆಯಲಾಗಿದೆ. ಬಂಡೆಯ ಮೇಲೆ ಕಾಂಕ್ರಿಟ್ ಬೆಡ್ ನಿರ್ಮಿಸಲಾಗುತ್ತದೆ. ಅದರ ಮೇಲೆ ಪ್ರತಿಮೆಯನ್ನು ಸ್ಥಾಪಿಸಲಾಗುತ್ತದೆ. ಬಾಲಸುಬ್ರಹ್ಮಣ್ಯ ಸ್ವಾಮಿಯ ಮೂರ್ತಿ ಮತ್ತು ಒಂದು ನವಿಲಿನ ಪ್ರತಿಮೆಯನ್ನು ಸ್ಥಾಪಿಸಲಾಗುತ್ತದೆ.
ಮಲೇಷಿಯಾ ಮತ್ತು ಸೇಲಂನಲ್ಲಿ ಬೃಹತ್ ಮುರುಗನ್ ಪ್ರತಿಮೆ ನಿರ್ಮಿಸಿದ ಶಿಲ್ಪಿಯೆ ಶಿವಮೊಗದಲ್ಲಿಯು ಬೃಹತ್ ಮುರುಗನ್ ಪ್ರತಿಮೆ ನಿರ್ಮಿಸಲಿದ್ದಾರೆ. ಕಲಾವಿದ ತ್ಯಾಗರಾಜನ್ ಅವರು ಶಿವಮೊಗ್ಗದಲ್ಲಿ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಯ ಪ್ರತಿಮೆ ನಿರ್ಮಾಣ ಕಾರ್ಯ ಶುರು ಮಾಡಲಿದ್ದಾರೆ.
ರಸ್ತೆಯ ಮಟ್ಟದಿಂದ ಸುಮಾರು 100 ಅಡಿ ಎತ್ತರದವರೆಗೆ ಬೃಹತ್ ಬಂಡೆ ಇದೆ. ಅದರ ಮೇಲೆ 151 ಅಡಿ ಎತ್ತರ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಯ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ಹಾಗಾಗಿ ಶಿವಮೊಗ್ಗದ ಎಲ್ಲಾ ದಿಕ್ಕಿನಿಂದಲು ಪ್ರತಿಮೆ ಕಾಣಿಸಲಿದೆ. ಅಲ್ಲದೆ, ದೇಶ, ವಿದೇಶದ ಪ್ರವಾಸಿಗರನ್ನು ಸೆಳೆಯಲಿದೆ.
ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿಯ ಪ್ರತಿಮೆ ನಿರ್ಮಾಣಕ್ಕೆ 5 ಕೋಟಿ ರೂ. ಖರ್ಚಾಗಲಿದೆ. ಕಬ್ಬಿಣ, ಸಿಮೆಂಟ್, ಮರಳು ಬಳಸಿ ಪ್ರತಿಮೆ ನಿರ್ಮಿಸಲಾಗುತ್ತದೆ. ಹೊರ ರಾಜ್ಯದಿಂದ ವಿಶೇಷವಾಗಿ ಬಣ್ಣವನ್ನು ತರಿಸಿ ಪ್ರತಿಮೆಗೆ ಲೇಪನ ಮಾಡಲಾಗುತ್ತದೆ. ಸುತ್ತಲು ಮೂಲ ಸೌಕರ್ಯ ಒದಗಿಸಲು ಇನ್ನಷ್ಟು ಹಣ ಖರ್ಚಾಗಲಿದೆ. ಒಟ್ಟು 12 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.
ಬೃಹತ್ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಹಂತ ಹಂತವಾಗಿ ಕಾಮಗಾರಿ ನಡೆಸಲಾಗುತ್ತದೆ. ಇನ್ನು ಎರಡು ವರ್ಷದಲ್ಲಿ ಬೃಹತ್ ಪ್ರತಿಮೆ ಸ್ಥಾಪನೆ ಆಗಲಿದೆ.
ಇದನ್ನೂ ಓದಿ – ಅರ್ಧಕ್ಕರ್ಧ ಕಡಿಮೆಯಾಯ್ತು ಮಳೆ, ಮಾಸ್ತಿಕಟ್ಟೆ, ಸಾವೆಹಕ್ಲು, ಚಕ್ರ, ಹುಲಿಕಲ್ನಲ್ಲಿ ಎಷ್ಟಾಗಿದೆ? ಕಳೆದ ವರ್ಷ ಎಷ್ಟಿತ್ತು?
ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ದೇಶದ ಎಲ್ಲ ರಾಜ್ಯದ ಮಣ್ಣು ಬಳಕೆಯಾಗುತ್ತಿದೆ. ರಿಪ್ಪನ್ಪೇಟೆಯ ಯುವಕ ವಿಜು ವರ್ಗಿಸ್ ಅವರು ಈಚೆಗೆ ತಮ್ಮ ಬೈಕ್ನಲ್ಲಿ ಭಾರತದ ಎಲ್ಲಾ ರಾಜ್ಯಗಳು, ನೇಪಾಳ, ಭೂತಾನ್ ದೇಶಗಳ ಪ್ರವಾಸ ಕೈಗೊಂಡರು. ಬೈಕಿನಲ್ಲಿ 80 ದಿನ 24,500 ಕಿ.ಮೀ ಸಂಚರಿಸಿ ಪ್ರತಿ ರಾಜ್ಯದಲ್ಲಿಯು ಮಣ್ಣು ಸಂಗ್ರಹಿಸಿದ್ದರು. ಈ ಮಣ್ಣನ್ನು ಗುಡ್ಡೆಗಲ್ಲು ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿಗೆ ಹಸ್ತಾಂತರಿಸಿದ್ದಾರೆ.