ಶಿವಮೊಗ್ಗದಲ್ಲಿ ಯುವಕನಿಗೆ ಇರಿತ, ರಕ್ತದ ಮಡುವಿನಲ್ಲಿದ್ದ ಫೋಟೊ ವೈರಲ್‌, ಏನಿದು ಘಟನೆ? ಹಲ್ಲೆಗೇನು ಕಾರಣ?

SHIVAMOGGA LIVE NEWS | 25 DECEMBER 2023 (ಈ ಸುದ್ದಿಯನ್ನು ಇನ್ನು 45 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ನಗರದ ಫ್ರೀಡಂ ಪಾರ್ಕ್‌ನಲ್ಲಿ ಯುವಕನೊಬ್ಬನಿಗೆ ಚೂಪಾದ ವಸ್ತುವಿನಿಂದ ಹಲ್ಲೆ ಮಾಡಲಾಗಿದೆ. ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿದ್ದ ಯುವಕನ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಫ್ರೀಡಂ ಪಾರ್ಕ್‌ನಲ್ಲಿ ಆಗಿದ್ದೇನು?

ಶಶಿಕುಮಾರ್‌ (35) ಎಂಬಾತನ ಮೇಲೆ ಐವರ ಗುಂಪು ಗಂಭೀರ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಶಶಿಕುಮಾರ್‌ನ ತಲೆಗೆ ಹೊಡೆಯಲಾಗಿದೆ. ಕೈ ಮತ್ತು ಹೊಟ್ಟೆಗೆ ಇರಿಯಲಾಗಿದೆ. ಗಂಭೀರ ಗಾಯಗೊಂಡಿದ್ದ ಶಶಿಕುಮಾರ್‌ ಫ್ರೀಡಂ ಪಾರ್ಕ್‌ನ ವಾಕಿಂಗ್‌ ಪಾಥ್‌ನಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ರಕ್ಷಣೆಗಾಗಿ ಮೊರೆ ಇಟ್ಟಿದ್ದ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ

ಘಟನೆಗೆ ಕಾರಣವೇನು?

ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವೊಂದರಲ್ಲಿ ಕ್ಷುಲಕ ವಿಚಾರಕ್ಕೆ ನಡೆದ ಗಲಾಟೆ ಈ ಹಂತಕ್ಕೆ ತಲುಪಿದೆ ಎಂದು ಪೊಲೀಸ್‌ ಮೂಲ ತಿಳಿಸಿದೆ. ರೌಡಿ ಹಿನ್ನೆಲೆ ಇರುವ ಕೆಲವರು ಶಶಿಕುಮಾರ್‌ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಂಭೀರ ಗಾಯಗೊಂಡಿರುವ ಶಶಿಕುಮಾರ್‌ನನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ ಸಿಟಿ ಬಸ್ಸಿನಲ್ಲಿ ಮೊಬೈಲ್‌ ಬಳಸಿದ ಚಾಲಕ, ಫೋಟೊ ತೆಗೆದ ಪ್ರಯಾಣಿಕ, ಮುಂದೇನಾಯ್ತು?

youth-attacked-at-freedom-park-in-shimoga

Leave a Comment