ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 25 JULY 2023
SHIMOGA : ಯುವಕನೊಬ್ಬ ತುಂಗಾ ನದಿ ಹೊಸ ಸೇತುವೆ ಮೇಲಿನಿಂದ ಹೊಳೆಗೆ ಹಾರಿರುವ (JUMP) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೇತುವೆ ಮೇಲಿಂದ ಜಿಗಿದು ಸ್ವಲ್ಪ ಹೊತ್ತು ಈಜಿ ಬಳಿಕ ದಡಕ್ಕೆ ತಲುಪಿದ್ದಾನೆ ಎಂದು ಹೇಳಲಾಗುತ್ತಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಯುವಕನೊಬ್ಬ ತುಂಗಾ ನದಿ ಹೊಸ ಸೇತುವೆ ತಡೆಗೋಡೆ ಮೇಲಿನಿಂದ ಜಿಗಿದಿದ್ದಾನೆ (JUMP). ರಭಸವಾಗಿ ಹರಿಯುವ ನೀರಿನಲ್ಲಿ ರೈಲ್ವೆ ಸೇತುವೆವರೆಗು ತಲುಪಿದ್ದಾನೆ. ಅಲ್ಲಿಂದ ನೀರಿನ ಹರಿವಿಗೆ ವಿರುದ್ಧ ದಿಕ್ಕಿನಲ್ಲಿ ಈಜುತ್ತಾನೆ. ಪಕ್ಕದ ದಡಕ್ಕೆ ತಲುಪಿ ಅಲ್ಲಿಂದ ಮೇಲೆ ಬರುತ್ತಾನೆ. ಈ ವೇಳೆ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಯುವಕರು ಆತ ಮದ್ಯ ಸೇವಿಸಿದ್ದಾನೆ ಎಂದು ಮಾತನಾಡಿಕೊಳ್ಳುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ಪೊಲೀಸರಿಗೆ ಕರೆ ಮಾಡಿದ್ದ ಜನ
ತುಂಗಾ ನದಿ ಸೇತುವೆ ಮೇಲಿಂದ ಯುವಕ ಜಿಗಿಯುವುದನ್ನು ಗಮನಿಸಿದ್ದ ಸಾರ್ವಜನಿಕರು ಪೊಲೀಸರಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೊಳೆಗೆ ಹಾರಿದವನನ್ನು ಗಂಗಪ್ಪ ಎಂದು ಗುರುತಿಸಲಾಗಿದೆ. ಯುವಕನ ಹುಚ್ಚಾಟ ಕೆಲವು ಕ್ಷಣ ಆತಂಕ ಮೂಡಿಸಿತ್ತು.
ಇದನ್ನೂ ಓದಿ – ಶಿವಮೊಗ್ಗ ಟ್ರಾಫಿಕ್ ಪೊಲೀಸರಿಂದ ದಿಢೀರ್ ಕಾರ್ಯಾಚರಣೆ, ರಾಶಿ ರಾಶಿ ಹಾಫ್ ಹೆಲ್ಮೆಟ್ ವಶಕ್ಕೆ, ವಿಡಿಯೋಗಳು ವೈರಲ್
ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ತುಂಗಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಪ್ರಸ್ತುತ 60 ಸಾವಿರ ಕ್ಯೂಸೆಕ್ಗೂ ಹೆಚ್ಚು ನೀರು ಹೊಳೆಗೆ ಬಿಡಲಾಗುತ್ತಿದೆ. ತುಂಬಿ ಹರಿಯುತ್ತಿರುವ ತುಂಗೆ, ಮುಳುಗಿರುವ ಮಂಟಪ ಕಣ್ತುಂಬಿಕೊಳ್ಳಲು ಜನರು ಸೇತುವೆ ಬಳಿ ಧಾವಿಸುತ್ತಿದ್ದಾರೆ. ಇಂತಹ ಸಮಯ ಯುವಕನ ಹುಚ್ಚಾಟ ಹಲವರಲ್ಲಿ ಆತಂಕ ಮೂಡಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422