SHIVAMOGGA LIVE NEWS | 10 APRIL 2024 (ಈ ಸುದ್ದಿಯನ್ನು ಇನ್ನು 38 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
SHIMOGA : ಚಂದ್ರ ದರ್ಶನದ ಬೆನ್ನಿಗೆ ಹಿಂದೂಗಳು ಪೂಜೆ ಸಲ್ಲಿಸಿ ಬೇವು ಬೆಲ್ಲ ಹಂಚಿದರು. ಇತ್ತ ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬದ ಸಿದ್ಧತೆ ಆರಂಭಿಸಿದ್ದಾರೆ.
ಯುಗಾದಿ ಹಬ್ಬದಂದು ಚಂದ್ರ ದರ್ಶನ ಮಾಡಬೇಕು. ಮಂಗಳವಾರ ಚಂದ್ರ ಕಾಣಿಸಿದ ಹಿನ್ನೆಲೆ ಬುಧವಾರ ಸಂಜೆ ವೇಳೆ ಜನರು ಆಗಸದತ್ತ ಕಣ್ಣು ನೆಟ್ಟಿದ್ದರು. ಮನೆಗಳ ಟೆರೇಸ್ ಮೇಲೆ, ರಸ್ತೆಗಳು, ಖಾಲಿ ಜಾಗದಲ್ಲಿ ನಿಂತು ಚಂದ್ರ ದರ್ಶನ ಮಾಡಿದರು. ಚಂದ್ರ ಕಾಣಿಸುತ್ತಿದ್ದಂತೆ ಪೂಜೆ ಸಲ್ಲಿಸಿ, ಹಿರಿಯರಿಗೆ ನಮಸ್ಕರಿಸಿ, ಬೇವು ಬೆಲ್ಲ ಹಂಚಲಾಯಿತು.
ಇನ್ನೊಂದೆಡೆ ಮುಸ್ಲಿಂ ಸಮುದಾಯದವರು ಕೂಡ ಚಂದ್ರ ದರ್ಶನ ಮಾಡಿದರು. ಚಂದ್ರ ಕಾಣಿಸುತ್ತಿದ್ದಂತೆ ಮಸೀದಿಗಳ ಮೈಕ್ ಮೂಲಕ ಮಾಹಿತಿ ನೀಡಲಾಯಿತು. ಇದರ ಬೆನ್ನಿಗೆ ಮುಸ್ಲಿಂ ಸಮುದಾಯ ಗುರುವಾರ ರಂಜಾನ್ ಆಚರಣೆಗೆ ಸಿದ್ಧತೆ ಆರಂಭಿಸಿದೆ.
ಇದನ್ನೂ ಓದಿ – ‘ಚೆಕ್ಪೋಸ್ಟ್ನಲ್ಲಿ ಪೊಲೀಸ್, ಸರ್ಕಾರಿ ವಾಹನಗಳು, ಆಂಬುಲೆನ್ಸ್ಗಳ ತಪಾಸಣೆಗೆ ಸೂಚನೆʼ
