ನಿಮ್ಮ ಶಿವಮೊಗ್ಗ ಲೈವ್‌ಗೆ 7ನೇ ವರ್ಷ, ಇನ್ಮುಂದೆ ಪ್ರತಿದಿನ ನಮ್ಮೂರ ಕುರಿತು ತಿಳಿಯೋಣ ವಿಶೇಷ ವಿಷಯ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 18 NOVEMBER 2023

SHIMOGA : ಜಿಲ್ಲೆಯ ಮೊಟ್ಟಮೊದಲ ಪೂರ್ಣ ಪ್ರಮಾಣದ ಡಿಜಿಟಲ್‌ ಸುದ್ದಿ ಮಾಧ್ಯಮ ಶಿವಮೊಗ್ಗ ಲೈವ್‌ಗೆ ಇವತ್ತು 7ನೇ ವಾರ್ಷಿಕೋತ್ಸವ. ಜಿಲ್ಲೆಯ ಜನರ ವಿಶ್ವಾಸ ಮತ್ತು ಬೆಂಬಲದೊಂದಿಗೆ ನಿಷ್ಪಕ್ಷಪಾತವಾಗಿ ನಿರಂತರ ಸುದ್ದಿ ನೀಡುತ್ತಿರುವ ಹೆಮ್ಮೆ ನಮ್ಮದು.

ಪ್ರತಿ ತಿಂಗಳು 5 ಲಕ್ಷ ಓದುಗರು

ಯಾವುದೆ ಮಾಧ್ಯಮಕ್ಕೆ ಓದುಗರು ಅಥವಾ ವೀಕ್ಷಕರೆ ಬೆನ್ನೆಲುಬು. ಶಿವಮೊಗ್ಗ ಲೈವ್‌ಗೆ ಓದುಗರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವರ್ಷದಿಂದ ವರ್ಷಕ್ಕೆ ಓದುಗರ ಸಂಖ್ಯೆ ಏರಿಕೆ ಆಗುತ್ತಿದೆ. ಈಗ ಪ್ರತಿ ತಿಂಗಳು ಕನಿಷ್ಠ 5 ಲಕ್ಷ‌ ಓದುಗರು ಶಿವಮೊಗ್ಗ ಲೈವ್‌ ವೆಬ್‌ಸೈಟ್‌ನಲ್ಲಿ ಸುದ್ದಿ ಓದುತ್ತಿದ್ದಾರೆ ಎಂದು GOOGLE ANALYTICS ವರದಿ ತಿಳಿಸುತ್ತಿದೆ. ಇಷ್ಟು ದೊಡ್ಡ ಸಂಖ್ಯೆಯ ಓದುಗರನ್ನು ಹೊಂದಿರುವ ಜಿಲ್ಲೆಯ ಏಕೈಕ ಮಾಧ್ಯಮ ಇದಾಗಿದೆ.

ಎಲ್ಲ ವಯೋಮಾನದ ಓದುಗರು

ಡಿಜಿಟಲ್‌ ಮಾಧ್ಯಮ ಹೊಸ ತಲೆಮಾರಿನ ಮಾಧ್ಯಮ ಎಂಬ ಕಲ್ಪನೆ ಇದೆ. ಆದರೆ ಶಿವಮೊಗ್ಗ ಲೈವ್‌ಗೆ 65 ವರ್ಷ ಮೇಲ್ಪಟ್ಟ ಓದುಗರ ಸಂಖ್ಯೆಯು ದೊಡ್ಡದಿದೆ. ಕಳೆದ 3 ತಿಂಗಳಲ್ಲಿ ಒಟ್ಟು ಓದುಗರ ಪೈಕಿ 66 ಸಾವಿರಕ್ಕೂ ಹೆಚ್ಚು ಓದುಗರು 65 ವರ್ಷ ಮೇಲ್ಪಟ್ಟವರಾಗಿದ್ದಾರೆ..! ಅದೆ ರೀತಿ 2.63 ಲಕ್ಷ ಓದುಗರು 35 ರಿಂದ 44 ವರ್ಷ ವಯೋಮಾನದವರು, 25 ರಿಂದ 34 ವರ್ಷದವರು 2.18 ಲಕ್ಷ, 55 – 64 ವರ್ಷದವರು 1.29 ಲಕ್ಷ, 45-54 ವರ್ಷದವರು 1.03 ಲಕ್ಷ, 18-24 ವರ್ಷದವರು 89 ಸಾವಿರ, ಯಾವುದೆ ವಯೋಮಾನ ಸ್ಪಷ್ಟಪಡಿಸದವರು 7.58 ಲಕ್ಷ ಓದುಗರಿದ್ದಾರೆ ಎಂದು ಗೂಗಲ್‌ ಅನಾಲಿಟಿಕ್ಸ್‌ ವರದಿ ತಿಳಿಸಿದೆ.

ಅಷ್ಟೆ ಅಲ್ಲ, ಜಗತ್ತಿನ ಹಲವು ದೇಶಗಳಲ್ಲಿರುವ ಶಿವಮೊಗ್ಗ ಜಿಲ್ಲೆಯ ನಿವಾಸಿಗಳು ಮತ್ತು ಮಲೆನಾಡಿಗರಿಗೆ ಇಲ್ಲಿಯ ಪ್ರತಿ ಅಪ್‌ಡೇಟ್‌ ಒದಗಿಸುತ್ತಿದ್ದೇವೆ. ಅಮೆರಿಕ, ಸೌದಿ ಅರೇಬಿಯಾ, ಯುಎಇ, ಇಂಗ್ಲೆಂಡ್‌, ಆಸ್ಟ್ರೇಲಿಯಾ ಸೇರಿದಂತೆ ಬಹು ರಾಷ್ಟ್ರಗಳಲ್ಲಿ ಸಾವಿರಾರು ಓದುಗರನ್ನು ಹೊಂದಿದ್ದೇವೆ.

ಹೊಸ ಸಂಗತಿ ತಿಳಿಸುವ ಪ್ರಯತ್ನ

ಶಿವಮೊಗ್ಗ ಲೈವ್‌ ಸುದ್ದಿಗಷ್ಟೆ ಸಮೀತವಾಗಬಾರದು ಎಂಬುದು ನಮ್ಮ ಕಲ್ಪನೆ. ತುರ್ತು ರಕ್ತದ ಅವಶ್ಯಕತೆ ಇದ್ದಾಗ ಶಿವಮೊಗ್ಗ ಲೈವ್‌ನ ಫೇಸ್‌ಬುಕ್‌, ವಾಟ್ಸಪ್‌ ಮೂಲಕ ಮಾಹಿತಿ ಪ್ರಕಟ ಮಾಡಲು ಆರಂಭಿಸಿದೆವು. ದಾನಿಗಳು ಮತ್ತು ತುರ್ತು ರಕ್ತದ ಅಗತ್ಯ ಇರುವವರ ಮಧ್ಯೆ ಸಂಪರ್ಕ ಸೇತುವೆಯಾದೆವು.

ಉದ್ಯೋಗ ಹುಡುಕುತ್ತಿರುವವರ ನೆರವಿಗಾಗಿ JOB NEWS ಆರಂಭಿಸಿದೆವು. ಶಿವಮೊಗ್ಗದವರಿಗೆ ಉದ್ಯೋಗ ನೀಡುವುದಾದರೆ ಉಚಿತವಾಗಿ ಉದ್ಯೋಗ ಜಾಹೀರಾತು ಪ್ರಕಟಿಸುವ ಘೋಷಣೆ ಮಾಡಿದೆವು. ಈಗ ಹಲವರಿಗೆ ಉದ್ಯೋಗ ಲಭಿಸಿದೆ.

ಈಗ ನಮ್ಮೂರು ಶಿವಮೊಗ್ಗ ಎಂಬ ಅಂಕಣ ಶುರು ಮಾಡುತ್ತಿದ್ದೇವೆ. ಶಿವಮೊಗ್ಗ ಜಿಲ್ಲೆಯ ಇತಿಹಾಸ, ವಿಶೇಷತೆ ತಿಳಿಸುವುದು ಇದರ ಉದ್ದೇಶ. ಪ್ರತಿ ದಿನ ಬೆಳಗ್ಗೆ 8 ಗಂಟೆಗೆ ಅಂಕಣ ಪ್ರಕಟವಾಗುತ್ತದೆ. ನಿತ್ಯ ಓದಿ, ಅಭಿಪ್ರಾಯ ತಿಳಿಸಬಹುದಾಗಿದೆ.

ಬ್ರೇಕಿಂಗ್‌ ನ್ಯೂಸ್‌ನ ಧಾವಂತ ಇಲ್ಲದೆ, ಆತುರ, ಪ್ರಚೋದನೆಗೆ ಒಡ್ಡದೆ ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡುವ ಪ್ರಯತ್ನ ಮುಂದುವರೆಯಲಿದೆ. ನಿಮ್ಮ ಬೆಂಬಲಿ ಹೀಗೆ ಇರಲಿ ಎಂದು ಆಶಿಸುತ್ತೇವೆ.

ಧನ್ಯವಾದಗಳು,

ನಿತಿನ್‌ ಆರ್.ಕೈದೊಟ್ಲು

ಶಿವಮೊಗ್ಗ ಲೈವ್‌.ಕಾಂ

ಮೊಬೈಲ್‌ : 9964634494

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment