ಮೊದಲ ದಿನ 0, ಇವತ್ತು 15 ಲಕ್ಷ ಪೇಜ್ ವಿವ್ಸ್, ಹಲವು ಸವಾಲುಗಳ ನಡುವೆ ಶಿವಮೊಗ್ಗ ಲೈವ್ ಬೆಳೆದಿದ್ದು ಹೇಗೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | 1 ಏಪ್ರಿಲ್ 2022

ಶಿವಮೊಗ್ಗ ಜಿಲ್ಲೆಯ ಮಾಧ್ಯಮ ಇತಿಹಾಸದಲ್ಲೇ ಇದು ಮೊದಲು. ಒಂದೇ ತಿಂಗಳಲ್ಲಿ 15 ಲಕ್ಷ ವಿವ್ಸ್ ಪಡೆದ ಹೆಮ್ಮೆ ನಮ್ಮದು.

ನಿಮ್ಮ ನೆಚ್ಚಿನ ಶಿವಮೊಗ್ಗ ಲೈವ್.ಕಾಂ ಮೈಲಿಗಲ್ಲು ಸ್ಥಾಪಿಸಿದೆ. ಮಾರ್ಚ್ ತಿಂಗಳಲ್ಲಿ 15 ಲಕ್ಷ ಪೇಜ್ ವಿವ್ಸ್ ಪಡೆದಿದೆ. ಪ್ರತಿಷ್ಠಿತ GOOGLE.COM ಸಂಸ್ಥೆಯ ಮಾಪನ ಇದನ್ನು ತಿಳಿಸಿದೆ. ಶಿವಮೊಗ್ಗ ಜಿಲ್ಲೆಯನ್ನು ಕೇಂದ್ರವಾಗಿ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ವೆಬ್ ಸೈಟ್ ಒಂದು ಇಷ್ಟು ದೊಡ್ಡ ವಿವ್ಸ್ ಪಡೆದಿರುವುದು ಇದೆ ಮೊದಲು.

20ಕ್ಕೂ ಹೆಚ್ಚು ವೆಬ್ ಸೈಟ್

ಶಿವಮೊಗ್ಗ ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ವೆಬ್ ಸೈಟ್’ಗಳಿವೆ. ಆದರೆ ವಿಶ್ವಾಸಾರ್ಹತೆ ವಿಚಾರಕ್ಕೆ ಬಂದಾಗ ಶಿವಮೊಗ್ಗ ಲೈವ್.ಕಾಂ ಮುಂಚೂಣಿಯಲ್ಲಿ ನಿಲ್ಲುತ್ತದೆ. ಅದಕ್ಕೆ ಸಾಕ್ಷಿಯಾಗಿರುವುದು ಮಾರ್ಚ್ ತಿಂಗಳ ವಿವ್ಸ್. ಎಲ್ಲಾ ವೆಬ್ ಸೈಟ್’ಗಳ ಒಟ್ಟು ವಿವ್ಸ್’ಗಿಂತಲೂ ನಾಲ್ಕು ಪಟ್ಟು ಹೆಚ್ಚು ವಿವ್ಸ್ ಶಿವಮೊಗ್ಗ ಲೈವ್.ಕಾಂ ವೆಬ್ ಸೈಟ್’ಗೆ ಲಭಿಸಿದೆ.

ಟಿವಿ, ಪೇಪರ್ಗಿಂತಲು ಅಧಿಕ

ನ್ಯೂಸ್ ಚಾನೆಲ್, ನ್ಯೂಸ್ ಪೇಪರ್’ಗಳಿಗಿಂತಲೂ ಹೆಚ್ಚು ಓದುಗರನ್ನು ಶಿವಮೊಗ್ಗ ಲೈವ್.ಕಾಂ ಹೊಂದಿದೆ. ಪ್ರತಿಷ್ಠಿತ GOOGLE.COM ಸಂಸ್ಥೆಯ ಮಾಪನದ ಪ್ರಕಾರ, ಮಾರ್ಚ್ ತಿಂಗಳಲ್ಲಿ ಶಿವಮೊಗ್ಗ ಲೈವ್.ಕಾಂ 15 ಲಕ್ಷ ವಿವ್ಸ್ ಪಡೆದಿದೆ.

ಮೊದಲ ದಿನ 0 ಓದುಗರು

ಶಿವಮೊಗ್ಗ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಸ್ಥಳೀಯ ಪತ್ರಿಕೆಗಳು, ಎರಡು ಸ್ಥಳೀಯ ಚಾನೆಲ್, ಸುಮಾರು 10 ರಾಜ್ಯಮಟ್ಟದ ಪತ್ರಿಕೆಗಳು, ರಾಜ್ಯಮಟ್ಟದ 10 ನ್ಯೂಸ್ ಚಾನೆಲ್’ಗಳು ಕಾರ್ಯನಿರ್ವಹಿಸುತ್ತಿದ್ದ ಹೊತ್ತಿನಲ್ಲಿ ಶಿವಮೊಗ್ಗ ಲೈವ್.ಕಾಂ ಆರಂಭವಾಯಿತು. 2016ರ ನವೆಂಬರ್ 18ರಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ನೀಡುವ ಪ್ರಕ್ರಿಯೆ ಶುರುವಾಯಿತು. ಸರಿಯಾಗಿ ಒಂದು ವರ್ಷಕ್ಕೆ ವೆಬ್ ಸೈಟ್ ಆರಂಭವಾಯಿತು. ಮೊದಲ ದಿನ ಶಿವಮೊಗ್ಗ ಲೈವ್.ಕಾಂಗೆ ಸಿಕ್ಕ ಪ್ರತಿಕ್ರಿಯೆ ಆಘಾತಕಾರಿ. ನವೆಂಬರ್ 18, 2017ರಂದು ಶಿವಮೊಗ್ಗ ಲೈವ್.ಕಾಂ ಓದುಗರ ಸಂಖ್ಯೆ 0.

ಮೊದಲ ತಿಂಗಳಲ್ಲೇ 23 ಸಾವಿರ ಓದುಗರು

ಮೊದಲ ದಿನ 0 ಓದುಗರನ್ನು ಹೊಂದಿದ್ದ ಶಿವಮೊಗ್ಗ ಲೈವ್.ಕಾಂ ವೆಬ್ ಸೈಟ್ ಅದೇ ತಿಂಗಳಲ್ಲಿ 23 ಸಾವಿರ ಓದುಗರನ್ನು ತಲುಪಿದ್ದು ಸಣ್ಣ ಮಾತಲ್ಲ. ವೆಬ್ ಸೈಟ್ ಪ್ರಾರಂಭವಾದ ಮರುದಿನ 465 ಓದುಗರು ಸುದ್ದಿಗಳನ್ನು ಓದಿದರು. ನವೆಂಬರ್ 18 ರಿಂದ ನವೆಂಬರ್ 30ರವರೆಗೆ 23,613 ಓದುಗರು ನಮ್ಮ ಜೊತೆಯಾಗಿದ್ದರು.

ಮಾಹಿತಿ ಇಲ್ಲ, ಮಾತಿಗೆ ನಿಲ್ಲುವವರಿಲ್ಲ

ಯಾವುದೆ ಸಂಸ್ಥೆಯ ಆರಂಭ ಸುಲಭದ್ದಾಗಿರುವುದಿಲ್ಲ. ಶಿವಮೊಗ್ಗ ಲೈವ್.ಕಾಂಗೂ ಇಂತದ್ದೇ ಅನುಭವವಾಗಿದೆ. ಆರಂಭಿಕ ಹಂತದಲ್ಲಿ ಮಾಹಿತಿ ನೀಡುವವರಿಲ್ಲ. ಸುದ್ದಿಗಳಿಗೆ ಅಧಿಕಾರಿಗಳು ಪ್ರತಿಕ್ರಿಯೆ ಕೊಡುತ್ತಿರಲಿಲ್ಲ. ಜನ ಸ್ಪಂದನೆಯು ಕಡಿಮೆ ಇತ್ತು. ಆದರೆ ಜನಪರವಾಗಿ, ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಾಗೆ ಎಲ್ಲವೂ ಬದಲಾಯಿತು. ಇವತ್ತು ಶಿವಮೊಗ್ಗ ಲೈವ್.ಕಾಂ ಜಿಲ್ಲೆಯ ಮೂಲೆ ಮೂಲೆಗೂ ತಲುಪಿದೆ. ಪ್ರತಿಷ್ಠಾತ ಬ್ರಾಂಡ್ ಆಗಿದೆ. ಜನರೆ ತಮ್ಮೂರ ಸುದ್ದಿಗಳಿಗೆ ವರದಿಗಾರರಾಗಿದ್ದಾರೆ.

ಹಂತ ಹಂತವಾಗಿ ಓದುಗರನ್ನ ತಲುಪಿದೆವು

shivamogga live 192 pixel 1ಮೊದಲ ದಿನ 0 ಓದುಗರನ್ನು ಹೊಂದಿದ್ದ ಶಿವಮೊಗ್ಗ ಲೈವ್.ಕಾಂ ಹಂತ ಹಂತವಾಗಿ ದೊಡ್ಡ ಸಂಖ್ಯೆಯ ಓದುಗರನ್ನು ತಲುಪಿದೆ. ಈ ಹಾದಿಯಲ್ಲಿ ಹಲವು ಏಳು, ಬೀಳುಗಳನ್ನು ಕಂಡಿದ್ದೇವೆ. ಅವಮಾನಗಳು, ಸಮ್ಮಾನಗಳನ್ನು ಅನುಭವಿಸಿದ್ದೇವೆ. ಐದೂವರೆ ವರ್ಷದಲ್ಲಿ ನಾವು ಲಕ್ಷ ಲಕ್ಷ ಓದುಗರನ್ನು ತಲುಪಿದ್ದೇವೆ ಎಂಬುದು ಸಮಾಧಾನಕರ ಸಂಗತಿ.

ಸುದ್ದಿ ಕೊಡುವುದಷ್ಟೆ ಕಾರ್ಯ

ಮಾತಿಗಿಂತ ಕೃತಿ ಲೇಸು ಅನ್ನುವುದು ನಮ್ಮ ನಂಬಿಕೆ. ಹಾಗಾಗಿಯೇ ದೊಡ್ಡ ಭರವಸೆ ಮಾತುಗಳನ್ನು ಪ್ರಚಾರ ಮಾಡದೆ ಸುದ್ದಿ ಕೊಡಲು ಆರಂಭಿಸಿದೆವು. ಇವತ್ತಿಗೂ ಅದೆಷ್ಟೋ ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ ನಮ್ಮ ಮುಖ ಪರಿಚಯವಿಲ್ಲ. ಅದರ ಅವಶ್ಯಕತೆಯು ನಮಗೆ ಉಂಟಾಗಿಲ್ಲ. ಸುದ್ದಿ ಕೊಡುವುದಷ್ಟೆ ನಮ್ಮ ಕಾರ್ಯ. ಅದನ್ನು ನಿಷ್ಪಕ್ಷಪಾತವಾಗಿ ಮಾಡಿಕೊಂಡು ಬಂದಿದ್ದೇವೆ. ಭವಿಷ್ಯದಲ್ಲಿಯೂ ಇದೆ ರೀತಿ ಸುದ್ದಿಗಳು ನಿಮ್ಮನ್ನು ತಲುಪಲಿದೆ.

ಹಾದಿ ತಪ್ಪಿದಾಗ ಕಿವಿ ಹಿಂಡಬಹುದು

ಮಾಧ್ಯಮಗಳು ಪ್ರಶ್ನಾತೀತವಲ್ಲ. ಪತ್ರಕರ್ತರೇನು ಮೇಲಿಂದ ಇಳಿದು ಬಂದವರಲ್ಲ. ನಾವು ಇದೆ ಸಮಾಜದ ಭಾಗ. ಶಿವಮೊಗ್ಗ ಲೈವ್.ಕಾಂ ಹಾದಿ ತಪ್ಪುತ್ತಿದೆ ಎಂದು ನಿಮಗೆ ಅನಿಸಿದಾಗ ಕಿವಿ ಹಿಂಡುವ ಅಧಿಕಾರ ನಿಮಗಿದೆ. ಎರಡು ಲಕ್ಷ ಓದುಗರನ್ನು ನಾವು ತಲುಪುತ್ತಿದ್ದೇವೆ ಎಂದಾಕ್ಷಣ ನಾವು ಹೇಳಿದ್ದೆ ಸುದ್ದಿ ಎಂದಾಗಬೇಕಿಲ್ಲ. ತಪ್ಪಾದಾಗ ತಿದ್ದುವ ಜವಾಬ್ದಾರಿಯನ್ನು ನಿಮ್ಮ ಮಡಿಲಲ್ಲಿ ಇಡುತ್ತಿದ್ದೇವೆ. ನಿಮ್ಮೊಂದಿಗೆ ನಾವು ಸದಾ ಸಂಪರ್ಕದಲ್ಲಿ ಇರುತ್ತೇವೆ. ನಿಮ್ಮೂರ ಸುದ್ದಿಗಳಿದ್ದರೆ ಅಥವಾ ನಮ್ಮ ಸುದ್ದಿಗಳ ಬಗ್ಗೆ ತಕರಾರುಗಳಿದ್ದರೆ 9964634494 ನಂಬರ್’ಗೆ ಯಾವುದೆ ಸಂದರ್ಭದಲ್ಲಿ ಕರೆ ಅಥವಾ ವಾಟ್ಸಪ್ ಮಾಡಬಹುದು.

ಇವತ್ತು ಲಕ್ಷ ಲಕ್ಷ ಓದುಗರು, ಲಕ್ಷಾಂತರ ವಿವ್ಸ್ ಪಡೆದಿರುವುದಕ್ಕೆಲ್ಲ ಕಾರಣ ನೀವು. ನಿಮ್ಮ ಬೆಂಬಲಕ್ಕೆ ಸದಾ ಚಿರಋಣಿ ನಾವು. ಧನ್ಯಾವಾದಗಳು ನಿಮಗೆ.

ABOUT ME NEW FINAL FINAL

ಇಂತಿ ನಿಮ್ಮ

ಶಿವಮೊಗ್ಗ ಲೈವ್.ಕಾಂ

Shimoga Nanjappa Hospital

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment