ಶಿವಮೊಗ್ಗ ಲೈವ್.ಕಾಂ | SHIMOGA | 01 ಡಿಸೆಂಬರ್ 2019
ಶಿವಮೊಗ್ಗ ಜಿಲ್ಲೆಯಾದ್ಯಂತ ಹೆಚ್ಐವಿ ಪಾಸಿಟಿವ್ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡಿದೆ. ಹಾಗಾಗಿ ಜಿಲ್ಲಾ ಏಡ್ಸ್ ತಡೆ ಮತ್ತು ನಿಯಂತ್ರಣ ಘಟಕವನ್ನು ಸರ್ಕಾರ ಅತ್ಯುತ್ತಮ ಘಟಕ ಎಂದು ಘೋಷಿಸಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನಿರಂತರ ಜಾಗೃತಿ ಕಾರ್ಯಕ್ರಮಗಳಿಂದಾಗಿ ಜಿಲ್ಲೆಯಾದ್ಯಂತ ಏಡ್ಸ್’ಗೆ ತುತ್ತಾಗುತ್ತಿರುವವ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ. ಅಲ್ಲದೆ ಹೆಚ್ಐವಿ ಪಾಸಿಟಿವ್’ನಿಂದ ಸಾವನ್ನಪ್ಪುತ್ತಿರುವವರ ಪ್ರಮಾಣವು ತಗ್ಗಿದೆ.
ಶಿವಮೊಗ್ಗದಲ್ಲಿ ಎಷ್ಟಿತ್ತು ಏಡ್ಸ್ ಪ್ರಮಾಣ?
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ ಮಾಹಿತಿ ಪ್ರಕಾರ, ಶಿವಮೊಗ್ಗದಲ್ಲಿ 1987 ರಿಂದ 2002ರ ನಡುವೆ 1,170 ಎಚ್‌ಐಡಿ ಪೀಡಿತರು ಪತ್ತೆಯಾಗಿದ್ದರು. 2003ರಲ್ಲಿ 209, 2004ರಲ್ಲಿ 313, 2005ರಲ್ಲಿ 363ಕ್ಕೆ ಏರಿಕೆಯಾಗಿತ್ತು.
ಆರಂಭದಲ್ಲಿ ಮಾಹಿತಿ ಕೊರತೆ
ಆರಂಭದಲ್ಲಿಮಾಹಿತಿ ಕೊರತೆಯಿಂದಾಗಿ ಪರೀಕ್ಷೆಗೆ ಒಳಪಡುವವರ ಸಂಖ್ಯೆ ಬಹಳ ಕಡಿಮೆ ಇತ್ತು. ಸೂಕ್ತ ಸಮಯದಲ್ಲಿಚಿಕಿತ್ಸೆ ಪಡೆಯದೆ ಮೃತಪಡುವವರ ಸಂಖ್ಯೆ ಭಯ ಹುಟ್ಟುವಂತಿತ್ತು. 1987ರಿಂದ 2002ರ ವರೆಗೆ ಮೃತಪಟ್ಟವರ ಸಂಖ್ಯೆ 7 ಇದ್ದರೆ, 2002ರಿಂದ 2005ರ ನಡುವೆ ಸತ್ತರ ಸಂಖ್ಯೆ 484ಕ್ಕೆ ಏರಿಕೆಯಾಗಿತ್ತು.
ವಿವಾಹಿತರಲ್ಲೇ ಹೆಚ್ಐವಿ ಪಾಸಿಟಿವ್ ಹೆಚ್ಚು
2019ರಲ್ಲಿಪತ್ತೆಯಾದ ಎಚ್‌ಐವಿ ಒಟ್ಟು ಪ್ರಕರಣಗಳಲ್ಲಿ96 ವಿವಾಹಿತರಿದ್ದರೆ, ವಿಧವೆ ಮತ್ತು ಗಂಡ ಅಥವಾ ಹೆಂಡತಿಯಿಂದ ದೂರವಾದವರಲ್ಲಿಸೇರಿ 50 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ. ಕೂಲಿ ಕೆಲಸ ಮಾಡುವವರಲ್ಲಿಯೇ ಅತಿ ಹೆಚ್ಚು 130 ಸೋಂಕು ಪತ್ತೆಯಾಗಿದೆ. ರಾಜ್ಯದ ಅಂಕಿ ಅಂಶದಲ್ಲಿ ಹೆಣ್ಣು ಮಕ್ಕಳಲ್ಲಿ ಹೆಚ್ಚು ಏಡ್ಸ್ ಕಂಡುಬಂದರೆ, ಶಿವಮೊಗ್ಗದಲ್ಲಿ 96 ಗಂಡಸರಲ್ಲಿ ಪತ್ತೆಯಾಗಿದೆ. 26-49 ವಯೋಮಾನದವರಲ್ಲಿ110 ಪ್ರಕರಣಗಳು ಕಂಡುಬಂದಿವೆ.
ಇಲಾಖೆಯಿಂದ ನಿರಂತರ ಜಾಗೃತಿ
ನಿರಂತರ ಜಾಗೃತಿಯ ಫಲವಾಗಿ ಶಿವಮೊಗ್ಗದಲ್ಲಿಹೆಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿಇಳಿಕೆಯಾಗಿದೆ. ಇದನ್ನು ಗುರುತಿಸಿ ಸರಕಾರ ನಮ್ಮ ಡಿಎಪಿಸಿಯನ್ನು ಅತ್ಯುತ್ತಮ ಘಟಕವೆಂದು ಘೋಷಿಸಿದೆ. ಹದಿಹರೆಯ ಆರೋಗ್ಯ ಶಿಕ್ಷಣ ನೀಡುವ ಮೂಲಕವೂ ಏಡ್ಸ್‌ನಿಂದಾಗುವ ಅನಾಹುತಗಳ ಬಗ್ಗೆ ತಿಳಿಹೇಳಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ನಿಗಾ ವಹಿಸಲಾಗುತ್ತಿದೆ. ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಎಚ್‌ಐವಿ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಅನ್ನುತ್ತಾರೆ ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಮಂಜುನಾಥ್ ನಾಗಲೀಕರ್.
ಸ್ಕೂಲು, ಕಾಲೇಜುಗಳಲ್ಲಿ ಶಿಕ್ಷಣ
ಶಿವಮೊಗ್ಗದ 240 ಪ್ರೌಢ ಶಾಲೆ, ಪಿಯುಸಿ ಕಾಲೇಜುಗಳಲ್ಲಿಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ, ಐಟಿಐ, ಡಿಪ್ಲೋಮಾ, ಪದವಿ ಸೇರಿ ಇನ್ನಿತರ 58 ಕಾಲೇಜುಗಳಲ್ಲಿರೆಡ್ ರಿಬ್ಬನ್ ಕ್ಲಬ್ (ಆರ್‌ಆರ್‌ಸಿ) ಸ್ಥಾಪಿಸಿ ಅದರ ಮೂಲಕ ಯುವಪೀಳಿಗೆಯಲ್ಲಿಹದಿಹರೆಯ ಆರೋಗ್ಯ ಶಿಕ್ಷಣ ನೀಡಲಾಗುತ್ತಿದೆ.
ವೀರಗಾಸೆ ಮೂಲಕ ಜಾಗೃತಿ
ಭದ್ರಾವತಿಯ ಬಸವೇಶ್ವರ ವೀರಗಾಸೆ ಹವ್ಯಾಸಿ ಕಲಾ ತಂಡವು ಎಚ್‌ಐವಿ ಏಡ್ಸ್ ಕುರಿತು ಅರಿವು ಮೂಡಿಸುವ 20 ಕಾರ್ಯಕ್ರಮ ಕೈಗೊಳ್ಳಲಿದೆ. 2020ರ ಹೊತ್ತಿಗೆ ಶೇ.90ರಷ್ಟು ಸೋಂಕು ತಗುಲಿದವರಿಗೆ ಎಚ್‌ಐವಿ ಸ್ಥಿತಿಯ ಬಗ್ಗೆ ತಿಳಿಸುವುದು, ಶೇ.90ರಷ್ಟು ಸೋಂಕಿತರಿಗೆ ಎಆರ್‌ಟಿ ಚಿಕಿತ್ಸೆಯ ನೀಡುವುದು ಹಾಗೂ ಶೇ.90ರಷ್ಟು ವೈರಸ್‌ಗಳ ಸಂಖ್ಯೆಯನ್ನು ಎಆರ್‌ಟಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿಕಡಿಮೆಗೊಳಿಸುವುದು. ಈ ನಿಟ್ಟಿನಲ್ಲಿನಿರಂತರ ಕೆಲಸ ಮಾಡಲಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
HIV Positive cases in Shimoga District has come down due to various awareness campaigns by the government. Now the number of infected and deaths due to Aids has decreased in Shimoga.