Shivamogga LiveShivamogga LiveShivamogga Live
Font ResizerAa
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION
Shivamogga LiveShivamogga Live
Font ResizerAa
  • Home
  • NEWS
  • TALUK NEWS
  • POLITICS
  • SPECIALS NEWS
  • ENGLISH NEWS
  • ADVERTISEMENTS
  • Home
  • NEWS
    • SHIVAMOGGA CITY
    • CRIME NEWS
    • SPORTS NEWS
    • LIFE STYLE
    • BUSINESS NEWS
    • EDUCATION NEWS
    • AGRICULTURE & APMC
    • FATAFAT NEWS
    • 1 MINUTE NEWS
    • STATE HIGHLIGHTS
    • NATIONAL HIGHLIGHTS
  • TALUK NEWS
    • SHIVAMOGGA
    • BHADRAVATHI
    • THIRTHAHALLI
    • SAGARA
    • HOSANAGARA
    • SORABA
    • SHIKARIPURA
  • POLITICS
  • SPECIALS NEWS
    • AUTOMOBILES
    • CINEMA
    • DEGULA DARSHANA
    • FOOT PATH BADUKU
    • INSPIRATION
    • RANGABHOOMI
    • REAL ESTATE
    • TECHNOLOGY
  • ENGLISH NEWS
  • ADVERTISEMENTS
    • JOB JUNCTION

Home » ಅರಸಾಳು ಮಾಲ್ಗುಡಿ ಮ್ಯೂಸಿಯಂ, ರೈಲ್ವೆ ಇಲಾಖೆಯಿಂದ ಶಂಕರ್ ನಾಗ್ ಆಪ್ತನಿಗೆ ಶಾಕ್, ಏನದು? | VIDEO NEWS

ಅರಸಾಳು ಮಾಲ್ಗುಡಿ ಮ್ಯೂಸಿಯಂ, ರೈಲ್ವೆ ಇಲಾಖೆಯಿಂದ ಶಂಕರ್ ನಾಗ್ ಆಪ್ತನಿಗೆ ಶಾಕ್, ಏನದು? | VIDEO NEWS

15/07/2021 9:30 AM
ನಿತಿನ್‌ ಕೈದೊಟ್ಲು

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಜುಲೈ 2021

» ಇವತ್ತಿನ ಎಲ್ಲ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗದ ಪ್ರಮುಖ ಆಕರ್ಷಣೆಗಳಲ್ಲಿ ಮಾಲ್ಗುಡಿ ಮ್ಯೂಸಿಯಂ ಸೇರಿಕೊಂಡಿದೆ. ಪ್ರವಾಸಿಗರ ಪಾಲಿಗೆ ಮತ್ತೊಂದು ಚಿತ್ತಾಕರ್ಷಣೆಯ ಸ್ಥಳ. ಈ ಅದ್ಭುತ ಲೋಕ ಸೃಷ್ಟಿಸಿದ, ಶಂಕರ್‍ ನಾಗ್‍ ಆಪ್ತ, ಕಲಾವಿದ ಜಾನ್ ದೇವರಾಜ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈಲ್ವೆ ಇಲಾಖೆಯ ಕಚೇರಿಗಳನ್ನು ಅಲೆದರೂ, ಮನವಿ ಮಾಡಿದರೂ ಬಾಕಿ ಹಣ ಕೈಸೇರಿಲ್ಲ.

ಏನಿದು ಬಾಕಿ ಹಣ?

ಶಿವಮೊಗ್ಗದ ಅರಸಾಳು ಗ್ರಾಮದಲ್ಲಿರುವ ರೈಲ್ವೆ ನಿಲ್ದಾಣದ ಆವರಣದಲ್ಲಿ ಮಾಲ್ಗುಡಿ ಮ್ಯೂಸಿಯಂ ಸ್ಥಾಪಿಸಲಾಗಿದೆ. ಮಾಲ್ಗುಡಿ ಡೇಸ್ ಧಾರಾವಾಹಿ ಪ್ರತಿರೂಪದಂತಿರುವ ಮ್ಯೂಸಿಯಂನ ಕರ್ತೃ ಅಂತಾರಾಷ್ಟ್ರೀಯ ಕಲಾವಿದ ಜಾನ್ ದೇವರಾಜ್. ಇಂತಹ ಕಲಾವಿದನಿಗೆ, ರೈಲ್ವೆ ಇಲಾಖೆ ಮಾಡಿದ ಕೆಲಸಕ್ಕೆ ಹಣ ಕೊಡದೆ ಸತಾಯಿಸುತ್ತಿದೆ.

ಇದನ್ನೂ ಓದಿ  | ಅರಸಾಳು ರೈಲ್ವೆ ನಿಲ್ದಾಣದ ಮಾಲ್ಗುಡಿ ಮ್ಯೂಸಿಯಂ ಪುನಾರಂಭಕ್ಕೆ ಡೇಟ್ ಫಿಕ್ಸ್

ನಟ, ನಿರ್ದೇಶಕ ಶಂಕರ್‌ನಾಗ್ ಅಭಿನಯ, ನಿರ್ದೇಶನದ ಮಾಲ್ಗುಡಿ ಡೇಸ್ 1986ರಲ್ಲಿ ಅತ್ಯಂತ ಜನಪ್ರಿಯ ಧಾರಾವಾಹಿ. ಆರ್.ಕೆ.ನಾರಾಯಣರ ಕಥೆಗೆ ಪೂರಕ ಸ್ಥಳ ಸಿಕ್ಕಿದ್ದೇ ಶಿವಮೊಗ್ಗ ದ ಆಗುಂಬೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ. ಅದರ ಎಪಿಸೋಡ್‌ನಲ್ಲಿ ಅರಸಾಳು ರೈಲ್ವೆ ನಿಲ್ದಾಣವನ್ನು ಬಳಸಿಕೊಳ್ಳಲಾಗಿತ್ತು. ಅದರ ಸವಿನೆನಪಿಗಾಗಿ ಹಾಗೂ ಪ್ರವಾಸೋದ್ಯಮ ಉತ್ತೇಜನ ದೃಷ್ಟಿಯಿಂದ ಸಂಸದ ಬಿ.ವೈ.ರಾಘವೇಂದ್ರ ಆಸಕ್ತಿ ಫಲವಾಗಿ ಮ್ಯೂಸಿಯಂ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು.

VIDEO REPORT

ಶಂಕರ್‍ನಾಗ್‍ ಆಪ್ತನೊಂದಿಗೆ ಒಪ್ಪಂದ

ಶಂಕರ್‌ನಾಗ್ ಒಡನಾಡಿ ಹಾಗೂ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಕಲಾವಿದರಾಗಿ ಕೆಲಸ ಮಾಡಿದ್ದ ಜಾನ್ ದೇವರಾಜ್ ಅವರ ಜತೆ ರೈಲ್ವೆ ಇಲಾಖೆ ಒಪ್ಪಂದ ಮಾಡಿಕೊಂಡು ಜವಾಬ್ದಾರಿ ವಹಿಸಿತು.

ತಕ್ಷಣ ಕೆಲಸ ಆರಂಭಿಸಿದ ಕಲಾವಿದ ಜಾನ್ ದೇವರಾಜ್ 120 ವರ್ಷ ಹಳೆಯ ಪಾಳುಬಿದ್ದ ಕಟ್ಟಡವನ್ನು ಪುನರ್ ಸ್ಥಾಪಿಸಿ, ಧಾರಾವಾಹಿಯಲ್ಲಿ ಬರುವ ನಾಲ್ಕು ಥೀಮ್‌ಗಳನ್ನು ಸೃಷ್ಟಿಸಿದ್ದಾರೆ. ಸುಮಾರು 1 ವರ್ಷ ಕಾಲ ಸ್ಥಳೀಯ ಕೂಲಿಗಾರರನ್ನೇ ಬಳಸಿಕೊಂಡು ಮ್ಯೂಸಿಯಂ ಪೂರ್ಣಗೊಳಿಸಿದರು. ಇದಾದ ಮೇಲೆ ಕಲಾವಿದನನ್ನು ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ.

ಬಾಕಿ ಕೊಡದೆ ಸತಾಯಿಸುತ್ತಿದೆ

ಮಾಲ್ಗುಡಿ ಡೇಸ್ ಮ್ಯೂಸಿಯಂ ಪುನರ್ ನಿರ್ಮಾಣಕ್ಕೆ ನೈಋತ್ಯ ರೈಲ್ವೆ ಇಲಾಖೆ (ಎಸ್‌ಡಬ್ಲೂಆರ್) ಅವರು ಕರೆದರು. ಅಲ್ಲಿ 120 ವರ್ಷದ ಕಟ್ಟಡದಲ್ಲಿ 31 ವರ್ಷಗಳ ಹಿಂದಿನ ದೃಶ್ಯವನ್ನು ಕಲೆಯಲ್ಲಿ ಅರಳಿಸಬೇಕಿತ್ತು. ಹೊಸ ಕಟ್ಟಡ ಬಂದ ಮೇಲೆ ಮೂಲ ನಿಲ್ದಾಣ ಕುಸಿದು ಬಿದ್ದ ಹಾಳಾಗಿತ್ತು. ಪುನರ್ ರಚನೆ ಮಾಡಲು ನನಗೆ ಆಹ್ವಾನ ನೀಡಿದ್ದರು. ಧಾರಾವಾಹಿಯ ಐದಾರು ದೃಶ್ಯ ಬೇಕು ಎಂದು ಹೇಳಿದ್ದರು. ಅದರಂತೆ ಸ್ವಾಮಿ ಮತ್ತು ಫ್ರೆಂಡ್ಸ್, ಭಾರತದಲ್ಲೇ ಮೊದಲ ಅಂಡರ್ ವಾಟರ್ ಶೂಟಿಂಗ್, ಮಿನಿ ರೈಲು, ಈಗಿನ ಕಾಲದ ಮಕ್ಕಳಿಗೆ ಮಲೆನಾಡಿನ ಪ್ರಾಣಿ ಪಕ್ಷಿಗಳ ಪರಿಚಯ ಮಾಡಿಸುವ ಕೆಲಸ ಮಾಡಿದ್ದೇನೆ. ಎಲ್ಲದಕ್ಕೂ ಸ್ಥಳೀಯರನ್ನೇ ಬಳಸಿಕೊಂಡಿದ್ದೇನೆ. 38 ಲಕ್ಷ ರೂ.ಗೆ ಒಪ್ಪಂದ ಆಗಿತ್ತು. ಅದರಲ್ಲಿ 22 ಲಕ್ಷ ನಾಲ್ಕು ಕಂತಿನಲ್ಲಿ ಕೊಡಲಾಗಿದೆ. ಕೊನೆಯ ಕಂತು ಈವರೆಗೆ ಕೊಟ್ಟಿಲ್ಲ. ಕಲಾವಿದನಾಗಿ ಎಲ್ಲ ಕಡೆ ಅಲೆಯೆಬೇಕಾದ ಸಂದರ್ಭ ಬಂತು ಎನ್ನುತ್ತಾರೆ ಕಲಾವಿದ ಜಾನ್ ದೇವರಾಜ್.

217389951 1153288501817725 4096501658035425233 n.jpg? nc cat=102&ccb=1 3& nc sid=730e14& nc ohc=NI8ByLd 2YQAX eTTxq&tn=XgSJ3kUX1No5RJvs& nc ht=scontent.fblr1 6

ನನಗೆ ತುಂಬಾ ಅವಮಾನವಾಗಿದೆ

ಕಲಾವಿದನನ್ನು ಕಾಂಟ್ರಾಕ್ಟರ್‍ ರೀತಿ ನಡೆಸಿಕೊಂಡಿದ್ದಾರೆ. ಈವರೆಗೂ ನನಗೆ ಯಾಕೆ ಹಣ ಕೊಡಲು ಆಗುತ್ತಿಲ್ಲ ಎಂದು ಹೇಳುತ್ತಿಲ್ಲ. 31 ವರ್ಷ ನಂತರ ಕರ್ನಾಟಕ, ಕನ್ನಡದ ಜನತೆಗೆ ಹಾಗೂ ಗೆಳೆಯ ಶಂಕರ್‌ನಾಗ್ ನೆನಪಿಗೆ ಇಷ್ಟೆಲ್ಲ ಮಾಡಿದೆ. ಕೇಳಿದ್ರೆ ಅಲ್ಲಿಗೆ ಹೋಗಿ, ಇಲ್ಲಿಗೆ ಹೋಗಿ ಎನ್ನುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ನನಗೆ ಅವಮಾನವಾಗಿದೆ. ನನ್ನ ಒಪ್ಪಂದದ ಪ್ರಕಾರ ಹಣ ಕೊಡಿ ಎಂಬುದಷ್ಟೇ ನನ್ನ ಬೇಡಿಕೆ ಅನ್ನುತ್ತಾರೆ ಜಾನ್ ದೇವರಾಜ್.

ಶಂಕರ್ ಆಸೆ ಈಡೇರಿತು

ಶಂಕರ್‌ನಾಗ್ ಸಾಯುವ ಹಿಂದಿನ ದಿನ ನನ್ನನ್ನು ಕರೆದು ನನ್ನ ಪ್ರತಿಮೆ ಮಾಡು ಎಂದಿದ್ದರು. ಅದಾದ ಐದಾರು ಗಂಟೆಯಲ್ಲಿ ಆಘಾತಕಾರಿ ಸುದ್ದಿ ಕೇಳಿದೆ. ಅಂದಿನಿಂದ ಪ್ರತಿಮೆ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಅರಸಾಳು ರೈಲ್ವೆ ನಿಲ್ದಾಣದಲ್ಲಿರುವ ಶಂಕರ್‌ನಾಗ್ ಪ್ರತಿಮೆ ಮಾಡಲು ಪ್ಲಾನ್‌ನಲ್ಲಿ ಇರಲಿಲ್ಲ. ನನ್ನ ಸ್ವಂತ ಆಸಕ್ತಿಯಿಂದ ಮಾಡಿದ್ದೇನೆ. ಅದಕ್ಕೆ ನಾಲ್ಕು ಲಕ್ಷ ಖರ್ಚಾಗಿದೆ. ಅದಕ್ಕೂ ಹಣ ಕೊಟ್ಟಿಲ್ಲ. ಕನಿಷ್ಠ ಪಕ್ಷ ಮೆಟಿರೀಯಲ್ ಹಣ ಕೊಡಿ ಎಂದರೂ ಕೊಟ್ಟಿಲ್ಲ ಎನ್ನುತ್ತಾರೆ ಜಾನ್ ದೇವರಾಜ್.

ಮಾಲ್ಗುಡಿ ಮ್ಯೂಸಿಯಂನಿಂದ ರೈಲ್ವೆ ಇಲಾಖೆಗೆ ಒಳ್ಳೆಯ ಹೆಸರು ಬಂದಿದೆ. ಅದಕ್ಕೆ ಕಾರಣರಾದ ಕಲಾವಿದನಿಗೆ ಬಾಕಿ ಹಣ ಕೊಡದೆ ಸತಾಯಿಸುವು ಇಲಾಖೆಗೆ ಶೋಭೆಯಲ್ಲ.

217412964 1153466125133296 488727578606883887 n.jpg? nc cat=107&ccb=1 3& nc sid=8bfeb9& nc ohc=36gkeGQZTRYAX9upBFu& nc ht=scontent.fblr1 3

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» ಶಿವಮೊಗ್ಗ ಲೈವ್‌ gmail

[email protected]

» Whatsapp Number

7411700200

 

 

Byನಿತಿನ್‌ ಕೈದೊಟ್ಲು
Editor
Follow:
ಲೋಕಲ್ ಸುದ್ದಿಗಳು ಲೋಕಕ್ಕೆ ತಿಳಿಸಬೇಕು ಅಂತಾ ನ್ಯೂಸ್ ಚಾನೆಲ್ ದುನಿಯಾದಿಂದ ಹೊರ ಬಂದು ಶಿವಮೊಗ್ಗ ಲೈವ್ ಕಟ್ಟಿದ್ದೇವೆ. ಸ್ಥಳೀಯ ಪತ್ರಿಕೆ, ಕೇಬಲ್ ಚಾನೆಲ್, ರಾಜ್ಯಮಟ್ಟದ ಪತ್ರಿಕೆ, ನ್ಯೂಸ್ ಚಾನೆಲ್’ಗಳ ಬೆಂಗಳೂರು ಕಚೇರಿಯಲ್ಲಿ ವರ್ಷಗಟ್ಟಲೆ ಕೆಲಸ ಮಾಡಿದ್ದೇನೆ. ಈ ಫೀಲ್ಡಲ್ಲಿ ಹತ್ತು ವರ್ಷಕ್ಕೂ ಹೆಚ್ಚು ಕಾಲದ ಅನುಭವವಿದೆ. ಹಾಗಾಗಿ ಪೇಪರ್, ಟಿವಿಗಳಿಗಿಂತಲೂ ವಿಭಿನ್ನವಾಗಿ ಸುದ್ದಿ ಕೊಡಬೇಕು ಅನ್ನುವ ಹಂಬಲ. ಅದರ ಪ್ರಯತ್ನ ನಿರಂತರವಾಗಿದೆ. ಕ್ವಾಲಿಟಿ ಮತ್ತು ನಿಖರತೆಗೆ ಮೊದಲ ಆದ್ಯತೆ. ಸುದ್ದಿಯ ಒಳಗೆ ನನ್ನ ಅಭಿಪ್ರಾಯ ಹೇರುವುದಕ್ಕೆ ಇಷ್ಟವಿಲ್ಲ. ಸುದ್ದಿಯನ್ನು ಸುದ್ದಿಯಾಗಷ್ಟೆ ಕೊಡಬೇಕು ಎಂಬುದು ನನ್ನ ವಾದ. ಹೀಗಿದ್ದೂ ಕೆಲವೊಮ್ಮೆ ಸುದ್ದಿ ಕೆಳಗೆ ‘ಡ್ಯಾಷ್ ಡ್ಯಾಷ್ ಡ್ಯಾಷ್’ ಅಂತೆಲ್ಲ ಕಮೆಂಟುಗಳು ಬರುತ್ತವೆ. ಆರಂಭದಲ್ಲಿದ್ದ ಟೆಂಪರ್ ಈಗಿಲ್ಲ. ಹಾಗಾಗಿ ರಿಯಾಕ್ಟ್ ಮಾಡಲ್ಲ..! ನಿಮ್ಮೂರ ಸುದ್ದಿಗಳಿದ್ದರೆ ತಿಳಿಸಿ. ಹಣ ಪಡೆದು ಸುದ್ದಿ ಮಾಡುವ ಹವ್ಯಾಸ, ಅಭ್ಯಾಸ ಎರಡೂ ಇಲ್ಲ. ಇನ್ನಷ್ಟು ವಿಭಿನ್ನ ಪ್ರಯತ್ನಗಳು, ನಮ್ಮೂರನ್ನು ಮತ್ತಷ್ಟು ಸುತ್ತಬೇಕು, ನಮ್ಮೂರ ಬಗ್ಗೆ ತಿಳಿದು ಜನರಿಗೆಲ್ಲ ತಿಳಿಸಬೇಕು ಅನ್ನುವ ತವಕವಿದೆ. ಅಂದಹಾಗೆ, ಹೊಸ ಐಡಿಯಾಗಳಿದ್ದರೆ, ಸಲಹೆಗಳಿದ್ದರೆ ತಿಳಿಸಿ.. ‘ಡ್ಯಾಷ್ ಡ್ಯಾಷ್’ ಬಯ್ಯೋದಿದ್ದರೆ ದಯವಿಟ್ಟು ವಾಟ್ಸಪ್’ನಲ್ಲಿ ಮೆಸೇಜು ಮಾಡಿ, ಸಾಕು..! ನನ್ನ ಮೊಬೈಲ್ ನಂಬರ್ 9964634494. ಸಿಕ್ಕಾಗ ತಪ್ಪದೆ ಮಾತಾಡಿಸಿ. ನಿಮ್ಮ ಸ್ನೇಹ ನಂಗೆ ಅಮೂಲ್ಯ. ಶಿವಮೊಗ್ಗದ ಸುದ್ದಿಗಾಗಿ ನಿರಂತರವಾಗಿ ಶಿವಮೊಗ್ಗ ಲೈವ್.ಕಾಂ ಓದುತ್ತಿರಿ
Previous Article SHIVAMOGGA-CITY-TALUK-NEWS- ಶಿವಮೊಗ್ಗ ಜೈಲ್ ರಸ್ತೆಯಲ್ಲಿ ಕರೆಂಟ್ ಶಾಕ್, ಮಹಿಳೆ ಸಾವು
Next Article petrol pump ಮೂರು ದಿನದ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಹೆಚ್ಚಾಯ್ತು ಪೆಟ್ರೋಲ್ ದರ, ಡಿಸೇಲ್ ಬೆಲೆಯು ಏರಿಕೆ

ಇದನ್ನೂ ಓದಿ

Wards-for-three-divisions
SHIVAMOGGA CITYSPECIAL NEWS

ಶಿವಮೊಗ್ಗ ಪಾಲಿಕೆ ವಿಂಗಡಣೆ, ಯಾವ್ಯಾವ ವಾರ್ಡ್‌ ಯಾವ ವಲಯಕ್ಕೆ ಸೇರುತ್ತೆ? ಇಲ್ಲಿದೆ ಲಿಸ್ಟ್‌

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
17/03/2025
Shimoga-Mahanagara-Palike-ambedkar-statue
SHIVAMOGGA CITYSPECIAL NEWS

ಇವತ್ತಿನಿಂದ ಶಿವಮೊಗ್ಗ ಮಹಾನಗರ ಪಾಲಿಕೆ 3 ವಲಯವಾಗಿ ವಿಂಗಡಣೆ, ಎಲ್ಲೆಲ್ಲಿ ಹೊಸ ಕಚೇರಿ ಶುರು?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
17/03/2025
Shimoga-Gandhi-Park-non-maintenence
SHIVAMOGGA CITYSPECIAL NEWS

ಧಗಧಗ ಹೊತ್ತಿ ಉರಿಯಲಿದೆ ಗಾಂಧಿ ಪಾರ್ಕ್‌, ಕೆಲವರಿಗಿದು ಓಪನ್‌ ಬಾರ್‌, ಹೇಗಿದೆ ಒಳಗಿನ ಸ್ಥಿತಿ?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
16/03/2025
Rapido-bike-taxi-in-Shimoga-city.
SHIVAMOGGA CITYSPECIAL NEWS

ಶಿವಮೊಗ್ಗಕ್ಕೆ ಲಗ್ಗೆ ಇಟ್ಟ ರ‍್ಯಾಪಿಡೋ ಬೈಕ್‌ ಟ್ಯಾಕ್ಸಿ, ಆಟೋ ಚಾಲಕರ ಆಕ್ರೋಶ, ಏನಿದು ರ‍್ಯಾಪಿಡೋ?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
15/02/2025
indira-Canteen-at-vidyanagara-in-Shimoga-city1.
SHIVAMOGGA CITYSPECIAL NEWS

ಶಿವಮೊಗ್ಗ ಸಿಟಿಯಲ್ಲಿ ಮತ್ತೆ ಎರಡು ಇಂದಿರಾ ಕ್ಯಾಂಟೀನ್‌, ಎಲ್ಲೆಲ್ಲಿ? ಯಾವಾಗ ಶುರುವಾಗುತ್ತೆ?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
29/01/2025
Multi-level-car-parking-building-usage-delay
SHIVAMOGGA CITYSPECIAL NEWS

ಶಿವಮೊಗ್ಗದಲ್ಲಿ ಧೂಳು ಹಿಡಿಯುತ್ತಿದೆ ಮಲ್ಟಿ ಲೆವೆಲ್‌ ಪಾರ್ಕಿಂಗ್‌ ಕಟ್ಟಡ, ಏನೆಲ್ಲ ಸಮಸ್ಯೆ ಆಗ್ತಿದೆ?

ನಿತಿನ್‌ ಕೈದೊಟ್ಲು
ನಿತಿನ್‌ ಕೈದೊಟ್ಲು
15/12/2024
Previous Next

ಶಿವಮೊಗ್ಗ ಲೈವ್ ಗ್ರೂಪ್ ಸೇರಲು ಕ್ಲಿಕ್ ಮಾಡಿ

🟢 shivamoggalive.com

whatsapp-logo
Shivamogga-Live-Logo-New-Logo
Welcome Back!

Sign in to your account

Username or Email Address
Password

Lost your password?