ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 12 ಜುಲೈ 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮಲೆನಾಡಿಗರ ಭಾಷಾ ಶೈಲಿಯೊಂದಿಗೆ ಯುವಕರ ಗುಂಪೊಂದು ಇತ್ತೀಚೆಗೆ ಆರಂಭಿಸಿದ ಯು ಟ್ಯೂಬ್ ಚಾನೆಲ್, ಈಗ ದೇಶ, ವಿದೇಶದಲ್ಲಿ ಪಾಪುಲರ್ ಆಗಿದೆ. ಆನಿಮೇಷನ್ ವಿಡಿಯೋಗಳು ಜನ ಮೆಚ್ಚುಗೆ ಗಳಿಸಿದೆ. ಹವ್ಯಾಸಕ್ಕಾಗಿ ಶುರು ಮಾಡಿದ ಕೆಲಸ ಈಗ ದೊಡ್ಡ ಸಂಖ್ಯೆಯ ವೀಕ್ಷಕರು, ಅಭಿಮಾನಿಗಳನ್ನು ಸೃಷ್ಟಿಸಿದೆ.
ಮಲ್ನಾಡ್ ಪುಟಾಣಿಗಳು ಹೆಸರಿನ ಯು ಟ್ಯೂಬ್ ಚಾನೆಲ್ ಈಗ ಮಲೆನಾಡಿಗರ ಮನೆ ಮಾತಾಗಿದೆ. ಕೆಲವು ವಿಡಿಯೋಗಳು ಲಕ್ಷ ಲಕ್ಷ ವಿವ್ಸ್ಗಳನ್ನು ಹೊಂದಿವೆ. ವಿಡಿಯೋ ಅಪ್ಲೋಡ್ ಆಗಿ ಕೆಲವೆ ಗಂಟೆಗಳಲ್ಲಿ ಸಾವಿರಾರು ಮಂದಿ ವಿಡಿಯೋಗಳನ್ನು ನೋಡುತ್ತಿದ್ದಾರೆ. ಲೈಕ್ಸ್ ಕೊಡುತ್ತಿದ್ದಾರೆ. ಉತ್ತಮ ಕಮೆಂಟ್ಗಳನ್ನು ನೀಡುತ್ತಿದ್ದಾರೆ.
ಯಾವೆಲ್ಲ ರೀತಿಯ ವಿಡಿಯೋಗಳಿವೆ?
ಮಲೆನಾಡಿಗರ ಭಾಷಾ ಶೈಲಿಯಲ್ಲಿ ವಿಡಿಯೋಗಳನ್ನು ಮಾಡಲಾಗುತ್ತಿದೆ. ಮಲೆನಾಡಿಗರ ಜೀವನ ಶೈಲಿ, ಮಕ್ಕಳ ಆಟ, ತುಂಟಾಟಗಳು ವಿಡಿಯೋಗಳ ವಿಷಯ ವಸ್ತುಗಳಾಗಿರುತ್ತವೆ. ಗದ್ದೆ ನಾಟಿ, ಹಬ್ಬ, ಜಾತ್ರೆಗಳು, ಜ್ವಲಂತ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವ ವಿಡಿಯೋಗಳು ಸಿದ್ದವಾಗುತ್ತಿವೆ.
ಲಾಕ್ ಡೌನ್ ಟೈಮಲ್ಲಿ ಶುರುವಾಯ್ತು ಪ್ರಯತ್ನ
ಲಾಕ್ ಡೌನ್ ಅವಧಿಯಲ್ಲಿ ಒಂದೆ ಕುಟುಂಬದ ಯುವಕರು ಸೇರಿಕೊಂಡು ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ವರ್ಷದ ಮೇ ತಿಂಗಳಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡಲು ಶುರು ಮಾಡಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಈ ಯು ಟ್ಯೂಬ್ ಚಾನೆಲ್, 19 ಸಾವಿರಕ್ಕೂ ಹೆಚ್ಚು ಸಬ್ಸ್ಕ್ರೈಬರ್ಗಳು, 14 ಲಕ್ಷಕ್ಕೂ ಹೆಚ್ಚು ವಿವ್ಸ್ ಗಳಿಸಿದೆ.
ಎಲ್ಲಿ? ಹೇಗೆ ರೆಡಿಯಾಗುತ್ತೆ ವಿಡಿಯೋ?
ಮಲ್ನಾಡ್ ಪುಟಾಣಿಗಳು ಯು ಟ್ಯೂಬ್ ಚಾನೆಲ್ ರೆಡಿಯಾಗೋದು ತೀರ್ಥಹಳ್ಳಿ ತಾಲೂಕಿನ ಸಿರಿಗೆರೆ ಕರಕುಚ್ಚಿ ಗ್ರಾಮದಲ್ಲಿ. ಇಲ್ಲಿನ ಎಂ.ಎನ್.ಕೆ. ನಿತಿನ್, ಎಂ.ಎನ್.ಕ್ಷಮಿತಾ, ದೀಪ್ತಿ, ದೀಪಿಕ್, ನೂತನಾ, ಸಾತ್ವಿಕಾ, ಗ್ರೀಷ್ಮಾ, ಹರ್ಷಿತ್, ಪ್ರೀತಮ್ ಅವರು ಈ ಯು ಟ್ಯೂಬ್ ಚಾನಲ್ನ ಹಿಂದಿದ್ದಾರೆ. ಪ್ರತಿದಿನ ಕಾನ್ಸೆಪ್ಟ್ ರೆಡಿ ಮಾಡಿಕೊಂಡು, ವಾಯ್ಸ್ ಓವರ್ ಕೊಟ್ಟು, ಆನಿಮೇಷನ್ ರೆಡಿ ಮಾಡಿ ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ.
‘ಮೊದಲು ಸ್ಕ್ರಿಪ್ಟ್ ಮಾಡಿ ವಾಯ್ಸ್ ಕೊಡುತ್ತಿದ್ದೆವು. ಆದರೆ ಸ್ಕ್ರಿಪ್ಟ್ನಿಂದಾಗಿ ಭಾಷಾ ಶೈಲಿ ಸುಲಲಿತವಾಗಿ ಬರುತ್ತಿರಲಿಲ್ಲ. ಹಾಗಾಗಿ ಈಗ ಕಾನ್ಸೆಪ್ಟ್ ಸಿದ್ಧಪಡಿಸಿಕೊಂಡು, ನೇರವಾಗಿ ಮಾತನಾಡಿ ವಿಡಿಯೋ ರೆಡಿ ಮಾಡಲಾಗುತ್ತಿದೆ. ವಿದೇಶದಲ್ಲಿರುವ ಮಲೆನಾಡಿಗರು ಕೂಡ ನಮ್ಮ ವಿಡಿಯೋಗಳನ್ನು ನೋಡುತ್ತಿದ್ದಾರೆ’ ಅನ್ನುತ್ತಾರೆ ಮಲ್ನಾಡ್ ಪುಟಾಣಿ ಟೀಮ್ನ ನಿತಿನ್.
ಮಲ್ನಾಡ್ ಪುಟಾಣಿಗಳು ಯು ಟ್ಯೂಬ್ ಚಾನೆಲ್ ಮಲೆನಾಡಿಗರ ಮನೆ ಮಾತಾಗಿದೆ. ವಿಡಿಯೋದಲ್ಲಿ ಕಾಣಿಸುವ ಕ್ಯಾರೆಕ್ಟರ್ಗಳು ವೀಕ್ಷಕರಿಗೆ ಚಿರಪರಿಚಿತವಾಗಿವೆ. ವಿದೇಶಗಳಲ್ಲೂ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ. ಮಲೆನಾಡ ಭಾಷಾ ಶೈಲಿ, ಸಂಸ್ಕೃತಿಯನ್ನು ಡಿಜಿಟಲ್ ಮೀಡಿಯಾ ಮೂಲಕ ಪಸರಿಸುತ್ತಿರುವುದು ಮೆಚ್ಚುಗೆ ಗಳಿಸಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200