SOCIAL MEDIA | ಫೇಸ್​​ಬುಕ್​ನಲ್ಲಿ ‘ಶಿವಮೊಗ್ಗ ಜಿಲ್ಲೆ ನಮ್ಮ ಹೆಮ್ಮೆ’ ಸರಣಿ, ಒಂದೇ ಕಡೆ ಸಿಗುತ್ತಿದೆ ಜಿಲ್ಲೆಯ ವಿಶೇಷತೆಯ ಮಾಹಿತಿ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಜುಲೈ 2021

ಜಿಲ್ಲೆಯ ಹಿರಿಮೆ ಗರಿಮೆಯ ವಿಷಯಗಳು ಇಂಟರ್‍ನೆಟ್‍ನಲ್ಲಿ ಒಂದೆಡೆ ಸಿಗುವಂತಾಗಬೇಕು ಅನ್ನುವ ಉದ್ದೇಶದಿಂದ ‘ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ’ ಸರಣಿ ಆರಂಭಿಸಲಾಗಿದೆ. ಫೇಸ್‍ಬುಕ್‍ನಲ್ಲಿ ಶುರುವಾಗಿರುವ ಸರಣಿಗೆ ಉತ್ತಮ ಪ್ರತಿಕ್ರಿಯೆಯು ವ್ಯಕ್ತವಾಗುತ್ತಿದೆ. ಸುದ್ದಿಯ ಮುಂದಿನ 8 ಪ್ಯಾರಾಗಳು ಕೆಳಗಿವೆ.

ಜಿಲ್ಲೆಯ ವಾರ್ತಾ ಇಲಾಖೆಯ ಫೇಸ್‍ಬುಕ್‍ ಪೇಜ್‍ DIPR Shivamoggaದಲ್ಲಿ ‘ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ’ ಸರಣಿ ಪ್ರಕಟವಾಗುತ್ತಿದೆ. ಶಿವಮೊಗ್ಗದ ಪ್ರಮುಖ ತಾಣಗಳು, ಅವುಗಳ ವಿಶೇಷತೆಗಳು, ಜಿಲ್ಲೆಯ ಜನರು ಹೆಮ್ಮೆ ಪಡುವ ಸಂಗತಿಗಳನ್ನು ಇಲ್ಲಿ ಕಾಣಬಹುದಾಗಿದೆ.

ದಿನಕ್ಕೊಂದು ವಿಶೇಷತೆ

SOCIAL MEDIA NEWS LOGO 1 1

‘ಶಿವಮೊಗ್ಗ ಜಿಲ್ಲೆ – ನಮ್ಮ ಹೆಮ್ಮೆ’ ಸರಣಿಯಲ್ಲಿ ದಿನಕ್ಕೊಂದು ವಿಶೇಷತೆಯನ್ನು ಪ್ರಕಟಿಸಲಾಗುತ್ತಿದೆ. ಪರಿಪೂರ್ಣ ಮಾಹಿತಿ ಮತ್ತು ಫೋಟೊಗಳನ್ನು ಪಬ್ಲಿಷ್ ಮಾಡಲಾಗುತ್ತಿದೆ.

ಈ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಫರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶಫಿ ಸಾದುದ್ದೀನ್, ಜಿಲ್ಲೆಯ ಹಿರಿಮೆಯನ್ನು ತಿಳಿಸುವ ಸಲುವಾಗಿ ಪ್ರತಿದಿನ ಒಂದೊಂದು ವಿಷಯವನ್ನು ಆಯ್ಕೆ ಮಾಡಿ ಪ್ರಕಟಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ಮಾಹಿತಿ ಒಂದೆಡೆ ಸಿಗುವಂತಾಗಲಿ ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.

ವಾರ್ತಾ ಇಲಾಖೆಯ ಈ ಪ್ರಯತ್ನಕ್ಕೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾಹಿತಿ ಪ್ರಕಟವಾಗುತ್ತಿದ್ದಂತೆ ಲೈಕ್ಸ್‍, ಷೇರ್​​ಗಳು ಹೆಚ್ಚಿವೆ.

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

Leave a Comment