ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 22 SEPTEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ನಗರ ಸಾರಿಗೆ ವ್ಯವಸ್ಥೆ ಸುಧಾರಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಇ ಬಸ್ (E Bus) ಯೋಜನೆ ಆರಂಭಿಸಿದೆ. ಶಿವಮೊಗ್ಗ ನಗರವು ಇ ಬಸ್ ಯೋಜನೆಗೆ ಆಯ್ಕೆಯಾಗಿದೆ. ಇನ್ನು ಕೆಲವೆ ತಿಂಗಳಲ್ಲಿ ನಗರದಾದ್ಯಂತ ಇ ಬಸ್ಗಳ ಸಂಚಾರ ಶುರುವಾಗುವ ಸಾದ್ಯತೆ ಇದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಕಳೆದ ತಿಂಗಳು ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ಪ್ರಧಾನ ಮಂತ್ರಿ ಇ ಬಸ್ (E Bus) ಯೋಜನೆ ಜಾರಿ ಕುರಿತು ತೀರ್ಮಾನಿಸಲಾಗಿದೆ. ದೇಶಾದ್ಯಂತ 181 ನಗರಗಳಲ್ಲಿ ಯೋಜನೆ ಜಾರಿಯಾಗಲಿದೆ. ಶಿವಮೊಗ್ಗ ನಗರವು ಯೋಜನೆಗೆ ಆಯ್ಕೆಯಾಗಿದ್ದು 50 ಬಸ್ಸುಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಏನಿದು ಪಿಎಂ ಇ ಬಸ್ ಯೋಜನೆ?
ಮೂರು ಲಕ್ಷ ಮತ್ತು ಅದಕ್ಕಿಂತಲು ಹೆಚ್ಚಿನ ಜನ ಸಂಖ್ಯೆ ಇರುವ, ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದಿರುವ ನಗರಗಳಲ್ಲಿ ಇ ಬಸ್ ವ್ಯವಸ್ಥೆ ಜಾರಿಗೆ ಯೋಜಿಸಲಾಗಿದೆ. ಇದರ ಅನ್ವಯ 10 ಸಾವಿರ ಬಸ್ಸುಗಳನ್ನು ದೇಶಾದ್ಯಂತ ರಸ್ತೆಗಿಳಿಸುವ ಗುರಿ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆಗೆ ಹೂಡಿಕೆ ಮಾಡಲಿವೆ. ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ ಮಾದರಿ) ಯೋಜನೆ ಜಾರಿಯಾಗಲಿದೆ ಎಂದು ಕೇಂದ್ರ ಸರ್ಕಾರದ ಪಿಐಬಿ ಪ್ರಕಟಿಸಿದೆ.
ಪಿಎಂ ಇ ಬಸ್ ಯೋಜನೆಯಲ್ಲಿ ರಸ್ತೆಗಿಳಿಯುವ ಎಲ್ಲ ಬಸ್ಸುಗಳು ಬ್ಯಾಟರಿ ಚಾಲಿತವಾಗಿರಲಿವೆ. ನಿಲ್ದಾಣಗಳು ಅಥವಾ ಡಿಪೋದಲ್ಲಿ ಬಸ್ಸುಗಳಿಗೆ ವಿದ್ಯುತ್ ಮೂಲಕ ಚಾರ್ಜ್ ಮಾಡಿ, ನಂತರ ರಸ್ತೆಗಿಳಿಸಲಾಗುತ್ತದೆ. ಇದರಿಂದ ಸಾರಿಗೆ ನಿಗಮಗಳಿಗೆ ಡಿಸೇಲ್ ಖರೀದಿಸುವ ಹೊರೆ ತಗ್ಗಲಿದೆ.
ಶಿವಮೊಗ್ಗದಲ್ಲಿ ಸರ್ಕಾರಿ ಸಿಟಿ ಬಸ್
ಶಿವಮೊಗ್ಗದಲ್ಲಿ ಸದ್ಯ ಖಾಸಗಿ ಸಿಟಿ ಬಸ್ಸುಗಳು ಮಾತ್ರ ಸಂಚರಿಸುತ್ತಿವೆ. ಈ ಹಿಂದೆ ಜೆ-ನರ್ಮ್ ಯೋಜನೆ ಅಡಿ ಸರ್ಕಾರಿ ಸಿಟಿ ಬಸ್ಸುಗಳನ್ನು ಬಿಡಲಾಗಿತ್ತು. ಆದರೆ ಅದು ಯಶ ಕಾಣಲಿಲ್ಲ. ಜೆ-ನರ್ಮ್ ಬಸ್ಸುಗಳನ್ನು ಶಿವಮೊಗ್ಗದಿಂದ ಭದ್ರಾವತಿ, ತೀರ್ಥಹಳ್ಳಿ ಸೇರಿದಂತೆ ವಿವಿಧ ಮಾರ್ಗಗಳಿಗೆ ಸಂಚರಿಸುತ್ತಿವೆ. ಇ ಬಸ್ ಸೇವೆ ಆರಂಭವಾದರೆ ಶಿವಮೊಗ್ಗದಲ್ಲಿ ಸರ್ಕಾರಿ ಸಿಟಿ ಬಸ್ಸುಗಳ ಸಂಚಾರ ಆರಂಭವಾಗಲಿವೆ.
ಇದನ್ನೂ ಓದಿ – ವಿಮಾನ ನಿಲ್ದಾಣಕ್ಕೆ ಅರ್ಧ ಗಂಟೆಗೊಂದು KSRTC ಬಸ್, ರೈಲ್ವೆ ನಿಲ್ದಾಣಕ್ಕೆ ಯಾಕಿಲ್ಲ ಇಂತಹ ಸರ್ವಿಸ್?
ಶಿವಮೊಗ್ಗ ನಗರದ ಎಲ್ಲ ಬಡಾವಣೆಗಳಿಗೆ ಇ ಬಸ್ಗಳು ಸಂಪರ್ಕ ಕಲ್ಪಿಸಲಿವೆ. ಇನ್ನು ನಗರದ ಹೊರವಲಯದಲ್ಲಿರುವ ಕೆಲವು ಗ್ರಾಮಗಳಿಗು ಇ ಬಸ್ಸುಗಳು ತೆರಳಲಿವೆ. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳ ನಿತ್ಯ ಸಂಚಾರಕ್ಕೆ ಅನುಕೂಲವಾಗಲಿವೆ. ಅಲ್ಲದೆ ಸಂಚಾರ ದಟ್ಟಣೆಯು ಸ್ವಲ್ಪ ತಗ್ಗಲಿದೆ. ಕೆಎಸ್ಆರ್ಟಿಸಿ ವತಿಯಿಂದ ಬಸ್ಸುಗಳು ಸಂಚರಿಸುವುದರಿಂದ ಪಾಸ್ ವ್ಯವಸ್ಥೆಯು ಲಭ್ಯವಾಗಲಿದೆ. ಇದರಿಂದ ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲ ಹೆಚ್ಚು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಬಸ್ಸಿಗಾಗಿ ಕಾದು ಕಾದು ನಿದ್ರೆಗೆ ಜಾರಿದ ಯುವಕ, ಎಚ್ಚರವಾದಾಗ ಕಾದಿತ್ತು ಆಘಾತ
ಸದ್ಯ ಶಿವಮೊಗ್ಗಕ್ಕೆ 50 ಇ ಬಸ್ಗಳ ಅಗತ್ಯವಿದೆ ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿದರೆ ಕೆಲವೆ ತಿಂಗಳಲ್ಲಿ ಶಿವಮೊಗ್ಗದಲ್ಲಿ ಇ ಬಸ್ ಸೇವೆ ಆರಂಭವಾಗಲಿದೆ.