ಶಿವಮೊಗ್ಗ ಲೈವ್.ಕಾಂ | SHIMOGA | 01 ಡಿಸೆಂಬರ್ 2019
ಶಿವಮೊಗ್ಗದ ಶಿವಪ್ಪನಾಯಕನ ಅರಮನೆಯಲ್ಲಿ ಮತ್ತೊಂದು ವಿಭಿನ್ನ ಗ್ಯಾಲರಿ ಆರಂಭಿಸಲಾಗಿದೆ. ಅದಕ್ಕೆ ಬಿದನೂರು ಗ್ಯಾಲರಿ ಅಂತಾ ಹೆಸರಿಡಲಾಗಿದೆ. ಭಾರತದ ಇತಿಹಾಸದ ಅತಿ ದೊಡ್ಡ ಕುತೂಹಲಕಾರಿ ಸಂಗತಿಯೊಂದನ್ನು ಈ ಗ್ಯಾಲರಿಯಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಅರಮನೆಯನ್ನು ಕೇವಲ ಪ್ರವಾಸಿ ತಾಣವಾಗಿಸದೆ, ಅಧ್ಯಯನ ಕೇಂದ್ರವಾಗಿಯು ರೂಪಿಸಬೇಕು ಎಂಬ ಉದ್ದೇಶಕ್ಕೆ ಪೂರಕವಾಗಿ ಹೊಸ ಗ್ಯಾಲರಿಯನ್ನು ರೂಪಿಸಲಾಗಿದೆ. ಇದರೊಳಗೆ ಕಾಲಿಟ್ಟರೆ ಟಿಪ್ಪು ಸುಲ್ತಾನ್ ಕಾಲದ ರಾಕೆಟ್ ಟೆಕ್ನಾಲಜಿಯ ಪೂರ್ಣ ಮಾಹಿತಿ ಲಭ್ಯವಾಗಲಿದೆ.
ಏನಿದು ಬಿದನೂರು ಗ್ಯಾಲರಿ?
ಅರಮನೆಯನ್ನು ಪ್ರವೇಶಿಸುತ್ತಿದ್ದಂತೆ ಬಲ ಭಾಗದ ಕೊಠಡಿಯಲ್ಲಿ ಶಿವಪ್ಪನಾಯಕನ ಕಾಲದ ಖಡ್ಗಗಳು, ಬಂದೂಕುಗಳು, ರಾಜರು, ಸೈನಿಕರು ಬಳಸುತ್ತಿದ್ದ ವಸ್ತುಗಳ ಗ್ಯಾಲರಿ ಇತ್ತು. ಅದೇ ಮಾದರಿಯಲ್ಲಿ ಅರಮನೆಯ ಎಡ ಭಾಗದ ಕೊಠಡಿಯಲ್ಲಿ ಬಿದನೂರು ಗ್ಯಾಲರಿ ಸ್ಥಾಪಿಸಲಾಗಿದೆ. ಇತ್ತೀಚೆಗೆ ಬಿದನೂರಿನಲ್ಲಿ ಸಿಕ್ಕಿದ್ದ ಟಿಪ್ಪು ಸುಲ್ತಾನ್ ಕಾಲದ ರಾಕೆಟ್’ಗಳನ್ನು ಈ ಗ್ಯಾಲರಿಯಲ್ಲಿ ಇರಿಸಲಾಗಿದೆ.
ಏನಿದು ರಾಕೆಟ್ ಟೆಕ್ನಾಲಜಿ?
ಬ್ರಿಟೀಷರ ವಿರುದ್ಧದ ಯುದ್ಧದ ಸಂದರ್ಭ ಟಿಪ್ಪು ಸುಲ್ತಾನ್ ರಾಕೆಟ್ ಬಳಕೆ ಮಾಡುತ್ತಿದ್ದ. ಈ ಕುರಿತು ಹಲವು ಐತಿಹಾಸಿಕ ದಾಖಲೆಗಳಿವೆ. ಬಿದನೂರಿನಲ್ಲಿ ಸಿಕ್ಕಿದ್ದ ರಾಕೆಟ್’ಗಳನ್ನು ಜೋಡಿಸಿ, ಅವುಗಳನ್ನು ಷೋಕೇಸ್’ನಲ್ಲಿ ಇರಿಸಲಾಗಿದೆ. ರಾಕೆಟ್’ಗೆ ಬಳಕೆ ಮಾಡುತ್ತಿದ್ದ ಮದ್ದು, ಮದ್ದು ಸುರಿಯಲು ಉಪಯೋಗಿಸುತ್ತಿದ್ದ ಪುಟ್ಟ ಮಡಕೆಗಳನ್ನು ಗ್ಯಾಲರಿಯಲ್ಲಿ ಇರಿಸಲಾಗಿದೆ. ಇನ್ನು, ರಾಕೆಟ್’ಗಳನ್ನು ಟಿಪ್ಪುವಿನ ಸೇನೆ ಹೇಗೆ ಬಳಸುತ್ತಿತ್ತು ಅನ್ನುವ ಮಾಹಿತಿ ಫಲಕವನ್ನು ಹಾಕಲಾಗಿದೆ. ಈ ರಾಕೆಟ್’ಗಳ ಮೇಲೆ ನಡೆದ ಸಂಶೋಧನೆಯ ಟಿಪ್ಪಣಿಯು ಇದೆ.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕ ಶೇಜೇಶ್ವರ ನಾಯಕ ಅವರ ನೇತೃತ್ವದಲ್ಲಿ ಈ ಗ್ಯಾಲರಿ ಸ್ಥಾಪಿಸಲಾಗಿದೆ. ಈಗಾಗಲೇ ಜಿಲ್ಲೆಯ ವಿವಿಧ ಶಾಲೆಯ ಮಕ್ಕಳು, ಇತಿಹಾಸದ ಅಸಕ್ತರು, ಅರಮನೆಗೆ ನಿತ್ಯ ಬರುವ ಪ್ರವಾಸಿಗರು ಈ ಗ್ಯಾಲರಿಗೆ ಭೇಟಿ ನೀಡಿ, ರಾಕೆಟ್ ಟೆಕ್ನಾಲಜಿಯ ಮಾಹಿತಿ ಪಡೆಯುತ್ತಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
Bidanuru Gallery has been started in Shimoga Shivappa Nayaka Palace. Rockets which were used by Tippu Sultan’s Army is being displayed it the gallery. These rockets were found near Nagara in Hosanagara recently.