ಶಿವಮೊಗ್ಗ ಲೈವ್.ಕಾಂ | SHIMOGA | 18 ನವೆಂಬರ್ 2019
ಆ ವೃದ್ಧ ದಂಪತಿ ಬದುಕು ಬಹುತೇಕ ಬಿದ್ದಿಗೆ ಬಂದಿತ್ತು. ಇದ್ದ ಒಂದು ಮನೆಯನ್ನು ಮಳೆ ನುಂಗಿತ್ತು. ಜೀವನದ ಕೊನೆ ಘಟ್ಟ ದೇವಸ್ಥಾನದ ಮೂಲೆಯಲ್ಲೇ ನಡೆಯಬೇಕೇನೋ ಅಂತಾ ಯೋಚಿಸುವ ಹೊತ್ತಿಗೆ ಪವಾಡ ನಡೆಯಿತು.

ಇತ್ತೀಚೆಗೆ ಸುರಿದ ಭಾರಿ ಮಳೆಗೆ ಬಾಪೂಜಿನಗರದ ತಗ್ಗು ಪ್ರದೇಶಕ್ಕೆ ನೀರು ನುಗ್ಗಿತ್ತು. ಇದರಿಂದ ಈ ಬಡಾವಣೆಯಲ್ಲಿದ್ದ ಹಲವರು ತುಂಬಾನೆ ನಷ್ಟ ಅನುಭವಿಸಿದರು. ಇಲ್ಲಿನ ಗಂಗಮ್ಮ ದೇವಸ್ಥಾನ ರಸ್ತೆಯಲ್ಲಿರುವ ಮುನಿಯಪ್ಪ, ನರಸಮ್ಮ ದಂಪತಿಯಂತು ಅಕ್ಷರಶಃ ಬೀದಿಗೆ ಬಿದ್ದರು. ಮನೆ ಕುಸಿದು ಹೋಯಿತು.
ಯಾರದ್ದೋ ಮನೆಯಲ್ಲಿ ಎಷ್ಟು ದಿನದ ಬದುಕು?
ಮನೆ ಕಳೆದುಕೊಂಡಿದ್ದ ಮುನಿಯಪ್ಪ, ನರಸಮ್ಮ ದಂಪತಿಗೆ ಅಕ್ಕಪಕ್ಕದವರು ಕೆಲವು ದಿನದ ನೆರವು ನೀಡಿದರು. ಆದರೆ ಯಾರದ್ದೋ ಮನೆಯಲ್ಲಿ ಎಷ್ಟು ದಿನ ಬದುಕು ನಡೆಸಲು ಸಾದ್ಯ. ಹಾಗಾಗಿ ದಂಪತಿ ಅವರಿವರ ಮನೆಗೆ ಹೋಗುವುದನ್ನು ಬಿಟ್ಟರು. ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದರು.
ದೇವರೆ ಆಶ್ರಯ ಕೊಟ್ಟ
ಇಳಿ ಹೊತ್ತಿನಲ್ಲಿ ಎದುರಾದ ಆಘಾತ ವೃದ್ಧ ದಂಪತಿಯನ್ನು ದಿಗ್ಭ್ರಮೆಗೊಳಿಸಿತು. ಆದರೆ ಬದುಕಬೇಕೆಂಬ ಛಲವಿತ್ತು. ಹಾಗಾಗಿ ಅಳಿದುಳಿದ ವಸ್ತುಗಳನ್ನು ತೆಗೆದುಕೊಂಡು, ಸಮೀಪದ ದೇವಸ್ಥಾನಕ್ಕೆ ತೆರಳಿದರು. ಅಲ್ಲಿ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದರು. ದೇವಸ್ಥಾನದಲ್ಲೇ ಅಡುಗೆ, ಊಟ, ನಿದ್ರೆ ಎಲ್ಲವು.
ಗಾಂಧಿ ಜಯಂತಿಯಂದು ನಡೆಯಿತು ಪವಾಡ
ಮನೆ ಕಳೆದುಕೊಂಡವರಿಗೆ ಸರ್ಕಾರ ಪರಹಾರ ನೀಡಲಿದೆ. ಮನೆ ಕಟ್ಟಿಸಿಕೊಡಲಿದೆ ಎಂದು ಈ ವೃದ್ಧಿ ದಂಪತಿಗೆ ಹಲವರು ಹೇಳಿದ್ದರು. ಅದರೆ ಸರ್ಕಾರವು ಬರಲಿಲ್ಲ. ನೆರವು ಕಾಣಿಸಲಿಲ್ಲ. ಕೊನೆಗೆ ಗಾಂಧಿ ಜಯಂತಿಯಂದು ಈ ದಂಪತಿ ಬದುಕಲ್ಲಿ ಪವಾಡ ನಡೆಯಿತು. ಇವರ ವೇದನೆ ಶಿವಮೊಗ್ಗದ ಯುವ ಬ್ರಿಗೇಡ್ ಮತ್ತು ಸೋದರಿ ನಿವೇದಿತ ಪ್ರತಿಷ್ಠಾನದ ಕಾರ್ಯಕರ್ತರಿಗೆ ತಿಳಿಯಿತು.
ಎರಡು ತಿಂಗಳಲ್ಲಿ ಸುಸಜ್ಜಿತ ಮನೆ ರೆಡಿ
ಯುವ ಬ್ರಿಗೇಡ್ ಕಾರ್ಯಕರ್ತರು ವೃದ್ಧ ದಂಪತಿಗೆ ಮನೆ ನಿರ್ಮಿಸಿಕೊಡಲು ನಿರ್ಧರಿಸಿದರು. ವೃದ್ಧ ದಂಪತಿ ಹೆಸರಿನಲ್ಲಿದ್ದ ಪುಟ್ಟ ಜಾಗದಲ್ಲಿ ಪ್ಲಾನ್ ಸಿದ್ಧವಾಯಿತು. ಮನೆ ಕುಸಿದಿದ್ದರಿಂದ ಜಾಗವನ್ನು ಸ್ವಚ್ಛ ಮಾಡಬೇಕಿತ್ತು. ಅದನ್ನು ಮುಗಿಸಿ ಹೊಸ ಮನೆ ನಿರ್ಮಾಣ ಕಾರ್ಯ ಶುರುವಾಯಿತು. ಇದು ಗೊತ್ತಾಗುತ್ತಿದ್ದಂತೆ ಹಲವರು ನೆರವಿನ ಹಸ್ತ ಚಾಚಿದರು. ಮನೆ ನಿರ್ಮಾಣ ಸಾಮಾಗ್ರಿಗಳು ಬಂದವು, ಕೆಲಸ ಮಾಡುವವರು ಕೂಡ ಯುವ ಬ್ರಿಗೇಡ್’ಗೆ ಬೆಂಬಲವಾಗಿ ನಿಂತರು. ಎರಡು ತಿಂಗಳಲ್ಲಿ ಸುಸಜ್ಜಿತ ಮನೆ ನಿರ್ಮಾಣವಾಯಿತು.
ಯುವ ಬ್ರಿಗೇಡ್ ಕಾರ್ಯಕರ್ತರ ಕೆಲಸ ಮೆಚ್ಚುಗೆ ಪಡೆದಿದೆ. ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಸ್ವಯಂ ಸೇವಾ ಸಂಘಟನೆ ಮಾಡಿದೆ. ಚಕ್ರವರ್ತಿ ಸೂಲಿಬೆಲೆ ಅವರು ಮನೆಯನ್ನು ಉದ್ಘಾಟನೆ ಮಾಡಿ, ವೃದ್ಧ ದಂಪತಿಗೆ ಹಸ್ತಾಂತರಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200