ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIVAMOGGA LIVE NEWS | 1 SEPTEMBER 2023
ಮಾಜಿ ಮಿನಿಸ್ಟರ್ ಪುತ್ರನ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ
CHIKKAMAGALURU : ಕಾಂಗ್ರೆಸ್ ಮಾಜಿ ಸಚಿವ ಸಗೀರ್ ಅಹಮದ್ ಪುತ್ರನ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಕೇಳಿಬಂದಿದ್ದು ದೂರು ದಾಖಲಾಗಿದೆ. ಸಗೀರ್ ಅಹಮದ್ ಪುತ್ರ ಅತೀ ಉರ್ ರಹಮಾನ್ ಪತ್ನಿ ಶಿಂಷಿಯಾ ಸಹರ್ ಅವರಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿ, ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿಧ. ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ದೂರು ದಾಖಲಾಗಿದೆ.
ಹಾಲಿನಲ್ಲಿ ವಿಷ ಬೆರೆಸಿ ಹಸುಗೂಸು ಕೊಂದ ಮಲತಾಯಿ
YADAGIRI : ಆಸ್ತಿ ಆಸೆಗಾಗಿ ಮಲತಾಯಿಯೊಬ್ಬಳು ಹಾಲಿನಲ್ಲಿ ವಿಷ ಬೆರೆಸಿ ಐದು ತಿಂಗಳ ಹಸುಗೂಸನ್ನು ಕೊಂದ ಅಮಾನವೀಯ ಘಟನೆಯೊಂದು ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಬಬಲಾದ ಗ್ರಾಮದಲ್ಲಿ ನಡೆದಿದೆ. ದೇವಮ್ಮ ಚೆಟ್ಟಿಗೇರಿ ಎಂಬಾಕೆಯೇ ಮಗುವನ್ನ ಕೊಂದ ಪಾಪಿ ಮಲತಾಯಿ. ಐದು ತಿಂಗಳ ಸಂಗೀತಾ ಚೆಟ್ಟಿಗೇರಿ ಮೃತ ಹಸುಗೂಸು. ಘಟನೆ ಸಂಬಂಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ದೇವಮ್ಮಳನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ನೇಣು ಬಿಗಿದು ರೈತ ಆತ್ಮಹತ್ಯೆ
CHIKKAMAGALURU : ಬರಗಾಲದಿಂದ ಬೇಸತ್ತು ರೈತನೊಬ್ಬ ಮನೆಯಲ್ಲೇ ನೇಣಿಗೆ ಶರಣಾದ ಘಟನೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಚಿಕ್ಕನಲ್ಲೂರಿನಲ್ಲಿ ಈ ಘಟನೆ ನಡೆದಿದೆ. ಪರಮೇಶ್ವರಪ್ಪ(52) ಎಂಬಾತನೇ ನೇಣಿಗೆ ಕೊರಳೊಡ್ಡಿದ ರೈತ. ಸಕಾಲಕ್ಕೆ ಮಳೆಯಾಗದೇ ಬೆಳೆ ನಾಶವಾದ ಹಿನ್ನೆಲೆ ಮನನೊಂದು ರೈತ ಪರಮೇಶ್ವರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾವೇರಿ ಹೋರಾಟಕ್ಕೆ ಸಿದ್ದರಾಗುವಂತೆ ಹೆಚ್‌ಡಿಕೆ ಸೂಚನೆ
BENGALURU : ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಸಿಎಂ ಕುಮಾರಸ್ವಾಮಿಯವರು (HD Kumaraswamy) ಕಾವೇರಿ ನೀರಿಗಾಗಿ ಹೋರಾಟ ಆರಂಭಿಸುವಂತೆ ಆಸ್ಪತ್ರೆಯಿಂದಲೇ ಕರೆ ಕೊಟ್ಟಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಕುಮಾರಸ್ವಾಮಿಯವರು ಇದೀಗ ಚೇತರಿಸಿಕೊಳ್ಳುತ್ತಿದ್ದು, ನಾಳೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಹೆಚ್ಡಿಕೆ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದ ಮಳವಳ್ಳಿ ಮಾಜಿ ಶಾಸಕ ಅನ್ನದಾನಿಯವರಿಗೆ ಜೆಡಿಎಸ್‌ನಿಂದ ಕಾವೇರಿ ನೀರು ಉಳಿವಿಗಾಗಿ ಹೋರಾಟ ಶುರು ಮಾಡಿ ಅಂತ ಹೆಚ್ಡಿಕೆ ಕರೆ ಕೊಟ್ಟಿದ್ದಾರೆನ್ನಲಾಗಿದೆ.
ವಿದ್ಯುತ್ ಶಾಕ್, ತಂದೆ, ಮಗ ಸಾವು
BELAGAVI : ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ-ಮಗ ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ನಡೆದಿದೆ. ಪ್ರಭು ಹುಂಬಿ(69), ಮಂಜುನಾಥ ಹುಂಬಿ ( 29) ಸಾವನ್ನಪ್ಪಿದ ದುರ್ದೈವಿಗಳು. ತಂದೆ ಪ್ರಭು ಹುಂಬಿ ಮನೆ ಮುಂದೆ ಕಸ ತೆಗೆಯುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶಿಸಿದೆ. ಇವರನ್ನು ಬಿಡಿಸಲು ಹೋದ ಮಗ ಮಂಜುನಾಥ ಹುಂಬಿ ಕೂಡ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ದೊಡವಾಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.