NEWS HIGHLIGHTS
ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡ ಪಾವತಿಗೆ ರಾಜ್ಯ ಸರ್ಕಾರ ಮತ್ತೊಂದು ಅವಕಾಶ ನೀಡಿದೆ. ಶೇ 50ರಷ್ಟು ರಿಯಾಯಿತಿ ದರದಲ್ಲಿ ದಂಡ ಕಟ್ಟಲು ಜೂನ್ 21ರಿಂದ ಜುಲೈ 10ರ ವರೆಗೆ ಕಾಲಾವಕಾಶ ಕಲ್ಪಿಸಿ ಹೊಸ ಆದೇಶ ಹೊರಡಿಸಿದೆ.
ವಾಹನ ಸವಾರರು ಈ 20 ದಿನಗಳ ಅವಧಿಯಲ್ಲಿ ರಿಯಾಯಿತಿ ದರದಲ್ಲಿ ಬಾಕಿ ದಂಡವನ್ನು ಪಾವತಿಸಬಹುದಾಗಿದೆ. ಸಪೊಲೀಸ್ ಇಲಾಖೆಯ ಇ-ಚಲನ್‌ಗಳಲ್ಲಿ 2026ರ ಮೇ ತಿಂಗಳಿಗಿಂತ ಮುಂಚೆ ದಾಖಲಾಗಿರುವ ಪ್ರಕರಣಗಳಿಗೆ ಇದು ಅನ್ವಯಿಸಲಿದೆ. ಇದರೊಂದಿಗೆ ಸಾರಿಗೆ ಇಲಾಖೆಯಲ್ಲಿ 1991ರಿಂದ 2022ರ ಅವಧಿಯಲ್ಲಿ ದಾಖಲಾಗಿ ಬಾಕಿ ಉಳಿದಿರುವ ಪ್ರಕರಣಗಳ ದಂಡದ ಮೊತ್ತದಲ್ಲೂ ಶೇ 50ರಷ್ಟು ರಿಯಾಯಿತಿ ಸಿಗಲಿದೆ ಎಂದು ಸರ್ಕಾರ ತಿಳಿಸಿದೆ.
