ಶಿವಮೊಗ್ಗ ಲೈವ್
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ತನ್ನ ಅಧಿಕೃತ ವೆಬ್‌ಸೈಟ್ ವಿಳಾಸ ಬದಲಾಯಿಸಿದೆ. ಆಡಳಿತಾತ್ಮಕ ಕಾರಣಗಳಿಂದಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಲಾಗಿದೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಈ ಹಿಂದೆ ಬಳಕೆಯಲ್ಲಿದ್ದ ಕೆಪಿಎಸ್‌ಸಿ ವೆಬ್‌ಸೈಟ್ ವಿಳಾಸ https://kpsc.kar.nic.in ಅನ್ನು ಬದಲಾಯಿಸಲಾಗಿದೆ. ಈಗ https://kpsc.karnataka.gov.in ರೂಪಿಸಲಾಗಿದೆ. ‘ಆಯೋಗದ ಎಲ್ಲಾ ಅಧಿಕೃತ, ಅಧಿಸೂಚನೆಗಳು, ಅಭ್ಯರ್ಥಿಗಳಿಗೆ ಅಗತ್ಯವಿರುವ ಮಾಹಿತಿ ಪಡೆಯಲು ಇನ್ಮುಂದೆ ನೂತನ ವೆಬ್ ಸೈಟ್ ವೀಕ್ಷಿಸಬಹುದು’ ಎಂದು ಆಯೋಗದ ಕಾರ್ಯದರ್ಶಿ ಕೆ. ಜ್ಯೋತಿ ತಿಳಿಸಿದ್ದಾರೆ.
