ಪಡಿತರ ಚೀಟಿ ಇ-ಕೆವೈಸಿ, ರಾಜ್ಯ ಸರ್ಕಾರದಿಂದ ದಿನಾಂಕ ವಿಸ್ತರಣೆ, ಇನ್ನೆಷ್ಟು ದಿನ ಅವಕಾಶವಿದೆ?

ಬೆಂಗಳೂರು: ಆಹಾರ ಇಲಾಖೆಯು ಇ-ಕೆವೈಸಿ ದೃಢೀಕರಣದ ಕೊನೆಯ ದಿನಾಂಕವನ್ನು ನವೆಂಬರ್ 10 ರವರೆಗೆ ವಿಸ್ತರಿಸಿದೆ. ಈ ಮೊದಲು ಅ.20 ಇ-ಕೆವೈಸಿ ಮಾಡಲು ಕೊನೆಯ ದಿನಾಂಕವಾಗಿತ್ತು. ಆದರೆ ಒಂದು ಕೋಟಿಗೂ ಅಧಿಕ ಫಲಾನುಭವಿಗಳು ಇನ್ನು ಇ-ಕೆವೈಸಿ ಮಾಡಿಸಬೇಕಿರುವ ಕಾರಣ ಸರ್ಕಾರ ದಿನಾಂಕ ವಿಸ್ತರಿಸಿ ಆದೇಶ ಹೊರಡಿಸಿದೆ. ನೀವು ಸುದ್ದಿ ಓದುತ್ತಿರುವುದು ಶಿವಮೊಗ್ಗ ಲೈವ್‌.ಕಾಂ ವೆಬ್‌ಸೈಟ್‌ನಲ್ಲಿ. ಈ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ತಂತ್ರಾಂಶದ ಮೂಲಕ ಅಥವಾ ಅನ್ನ ಸೇವೆ ಮೊಬೈಲ್ ಆ್ಯಪ್ ಬಳಸಿ ಸುಲಭವಾಗಿ ಇ-ಕೆವೈಸಿ ಮಾಡಿಸಬಹುದು. ಬೇರೆ ರಾಜ್ಯಗಳಲ್ಲಿರುವ ಕನ್ನಡಿಗರು ಕೂಡ ಆ್ಯಪ್ ಮೂಲಕ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಪ್ಲೇ ಸ್ಟೋರ್‌ನಲ್ಲಿ ಅಪ್ಡೇಟ್ ಲಭ್ಯವಿದೆ.

BPL-Card-APL-Card-Ration-Card