ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 5 AUGUST 2024 : ವಿವಿಧ ಜಿಲ್ಲೆಗಳ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲು (Reservation) ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ ವಿವಿಧ ನಗರಸಭೆಗಳು, ಪುರಸಭೆ, ಪಟ್ಟಣ ಪಂಚಾಯಿತಿಗಳಿಗು ಮೀಸಲು ಪ್ರಕಟಿಸಲಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಎಲ್ಲೆಲ್ಲಿಗೆ ಮೀಸಲಾತಿ ಪ್ರಕಟವಾಗಿದೆ?
» ಭದ್ರಾವತಿ ನಗರಸಭೆ – ಅಧ್ಯಕ್ಷ ಹುದ್ದೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಹುದ್ದೆ ಸಾಮಾನ್ಯ ವರ್ಗಕ್ಕೆ ಮೀಸಲು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಸಾಗರ ನಗರಸಭೆ – ಅಧ್ಯಕ್ಷ ಸ್ಥಾನವನ್ನು ಜನರಲ್ ಮಹಿಳೆ, ಉಪಾಧ್ಯಕ್ಷ ಸ್ಥಾನವನ್ನು ಬಿಸಿಎಗೆ ಮೀಸಲಿರಿಸಲಾಗಿದೆ.
» ಸೊರಬ ಪುರಸಭೆ – ಅಧ್ಯಕ್ಷರ ಹುದ್ದೆ ಎಸ್.ಸಿ ಮಹಿಳೆ, ಉಪಾಧ್ಯಕ್ಷರ ಹುದ್ದೆ ಜನರಲ್ ಮಹಿಳೆಗೆ ಮೀಸಲಿರಿಸಲಾಗಿದೆ.
» ಶಿರಾಳಕೊಪ್ಪ ಪುರಸಭೆ – ಅಧ್ಯಕ್ಷರ ಹುದ್ದೆ ಎಸ್.ಸಿ ಮಹಿಳೆ, ಉಪಾಧ್ಯಕ್ಷರ ಹುದ್ದೆ ಬಿಸಿಎಗೆ ಮೀಸಲಿಡಲಾಗಿದೆ.
» ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ – ಅಧ್ಯಕ್ಷರ ಹುದ್ದೆ ಎಸ್.ಟಿ ಮಹಿಳೆ, ಉಪಾಧ್ಯಕ್ಷರ ಹುದ್ದೆ ಜನರಲ್ ಮಹಿಳೆಗೆ ಮೀಸರಿಲಿಸಲಾಗಿದೆ.
» ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ – ಅಧ್ಯಕ್ಷ ಸ್ಥಾನ ಜನರಲ್, ಉಪಾಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ ಮೀಸರಿಲಿಸಲಾಗಿದೆ.