ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್‌ನಲ್ಲಿ ಪಾಸ್‌, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

number-1-advt-copy-new.webp

ಶಿವಮೊಗ್ಗ: ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ (Shivamogga Airport) ಬಹುನಿರೀಕ್ಷಿತ ವಿಮಾನಗಳ ನೈಟ್‌ ಲ್ಯಾಂಡಿಂಗ್‌ ಸೌಲಭ್ಯಕ್ಕೆ ಅಗತ್ಯವಿರುವ ಪ್ರಕ್ರಿಯೆಗಳು ವೇಗ ಪಡೆದುಕೊಂಡಿವೆ. ಈ ಸಂಬಂಧ ಕೈಗೊಳ್ಳಲಾಗಿದ್ದ ಮಣ್ಣು ಪರೀಕ್ಷೆಯ ವರದಿ ಈಗ ಬಂದಿದ್ದು, ಯೋಜನೆಗೆ ಪೂರಕವಾಗಿದೆ.

ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ (KSIIDC) ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು ಈ ಕುರಿತು ಪ್ರಕಟಣೆ ನೀಡಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದ ಅವರು, ‘ವಿಮಾನ ನಿಲ್ದಾಣದಲ್ಲಿ ಡಾಪ್ಲರ್ ವೆರಿ ಹೈ ಫ್ರೀಕ್ವೆನ್ಸಿ ಓಮ್ನಿ ರೇಂಜ್ (DoVR) ಉಪಕರಣ ಅಳವಡಿಸಲು ಉದ್ದೇಶಿಸಲಾಗಿದೆʼ ಎಂದು ತಿಳಿಸಿದ್ದರು.

ಮಣ್ಣು ಪರೀಕ್ಷೆಯಲ್ಲಿ ಪಾಸ್‌

ವಿಮಾನ ನಿಲ್ದಾಣಗಳಲ್ಲಿ ಅತ್ಯಾಧುನಿಕ ತಾಂತ್ರಿಕ ಉಪಕರಣ ಅಳವಡಿಸುವ ಮೊದಲು ಆ ಪ್ರದೇಶದ ಭೂಮಿಯ ಸ್ಥಿರತೆ ಪರೀಕ್ಷಿಸುವುದು ಕಡ್ಡಾಯ. ಅದರಂತೆ DoVR ಸ್ಥಾಪಿಸಲು ಉದ್ದೇಶಿಸಲಾದ ಜಾಗದ ಮಣ್ಣನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈಗ ಮಣ್ಣಿನ ಪರೀಕ್ಷಾ ವರದಿ ಲಭ್ಯವಾಗಿದ್ದು, ಉಪಕರಣ ಅಳವಡಿಕೆಗೆ ಮಣ್ಣು ಪೂರಕವಾಗಿದೆ ಎಂದು ದೃಢಪಟ್ಟಿದೆ.

Nanjaiah-Mutt-speaks-about-Shivamogga-Airport-at-Malnad-Shire-hotel

DoVR ಅಳವಡಿಕೆ ಕಾರ್ಯ ಆರಂಭ

‘ಮಣ್ಣು ಪರೀಕ್ಷೆ ಯಶಸ್ವಿಯಾದ ಬೆನ್ನಲ್ಲೇ, DoVR ಕೆಲಸ ಪ್ರಾರಂಭವಾಗಿವೆʼ ಎಂದು ನಂಜಯ್ಯನಮಠ ಅವರು ತಿಳಿಸಿದ್ದಾರೆ. ಈ ತಾಂತ್ರಿಕ ಸೌಲಭ್ಯವು ಕಾರ್ಯಗತಗೊಂಡರೆ, ವಿಮಾನಗಳು ರಾತ್ರಿ ವೇಳೆಯಲ್ಲಿ ಹಾಗೂ ಕಡಿಮೆ ದೃಶ್ಯಾವಳಿ (Visibility) ಇರುವ ಸಂದರ್ಭದಲ್ಲೂ ಸುರಕ್ಷಿತವಾಗಿ ಇಳಿಯಲು ಸಹಕಾರಿಯಾಗಲಿದೆ.

ಇದನ್ನೂ ಓದಿ – ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

ಕಳೆದ ತಿಂಗಳು ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಮಾನ ನಿಲ್ದಾಣದ ಅಭಿವೃದ್ಧಿ ಮತ್ತು ನೈಟ್‌ ಲ್ಯಾಂಡಿಂಗ್‌ ಸೌಲಭ್ಯದ ವಿಳಂಬದ ಬಗ್ಗೆ ಚರ್ಚೆಗಳಾಗಿದ್ದವು.

Shimoga-Airport-Terminal-Building-Sogane

ಏನಿದು DoVR? ಇದರ ಪ್ರಯೋಜನವೇನು?

DVOR ಎಂಬುದು ವಿಮಾನಗಳಿಗೆ ದಾರಿ ತೋರಿಸುವ ಒಂದು ಆಧುನಿಕ ದಾರಿದೀಪ ಇದ್ದಂತೆ. ಸಮುದ್ರದಲ್ಲಿ ಹಡಗುಗಳಿಗೆ ದೀಪಸ್ತಂಭವು ಹೇಗೆ ದಿಕ್ಕು ತೋರಿಸುತ್ತದೆಯೋ, ಹಾಗೆಯೇ ಇದು ವಿಮಾನಗಳಿಗೆ ಅವು ಯಾವ ದಿಕ್ಕಿನಲ್ಲಿವೆ ಮತ್ತು ವಿಮಾನ ನಿಲ್ದಾಣ ಎಲ್ಲಿದೆ ಎಂಬುದನ್ನು ತಿಳಿಸುತ್ತದೆ. ಇದು ರೇಡಿಯೋ ಅಲೆಗಳ ಮೂಲಕ 360 ಡಿಗ್ರಿ ಸುತ್ತಲೂ ಸಂಕೇತಗಳನ್ನು ಕಳುಹಿಸುತ್ತದೆ. ವಿಮಾನದಲ್ಲಿರುವ ಉಪಕರಣಗಳು ಈ ಸಂಕೇತಗಳನ್ನು ಸ್ವೀಕರಿಸಿ, ವಿಮಾನವು ನಿಖರವಾಗಿ ಯಾವ ಹಾದಿಯಲ್ಲಿ ಸಾಗುತ್ತಿದೆ ಎಂಬುದನ್ನು ಪೈಲಟ್‌ಗೆ ತೋರಿಸುತ್ತವೆ.

Doppler VHF Omni Directional Range DVOR 14 2048

ಇದು ಅತ್ಯಂತ ನಿಖರ ತಂತ್ರಜ್ಞಾನವಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಅಥವಾ ಕಟ್ಟಡಗಳಿರುವ ಜಾಗದಲ್ಲಿ ರೇಡಿಯೋ ಅಲೆಗಳು ಅಡೆತಡೆಗೆ ಒಳಗಾಗುವ ಸಾಧ್ಯತೆ ಇರುತ್ತದೆ, ಆದರೆ ಡಾಪ್ಲರ್ ತಂತ್ರಜ್ಞಾನ ಇಂತಹ ಅಡೆತಡೆ ಮೀರಿ ನಿಖರ ಮಾಹಿತಿ ನೀಡುತ್ತದೆ. ಇದರಿಂದ ರಾತ್ರಿ ವೇಳೆ ಅಥವಾ ಮಳೆ, ಮಂಜಿನಂತಹ ಕೆಟ್ಟ ಹವಾಮಾನದಲ್ಲಿ ಪೈಲಟ್‌ಗಳಿಗೆ ರನ್‌ವೇ ಕಾಣಿಸದಿದ್ದರೂ, ಈ ಸಂಕೇತಗಳ ಸಹಾಯದಿಂದ ವಿಮಾನವನ್ನು ಸುರಕ್ಷಿತವಾಗಿ ನಿಲ್ದಾಣದತ್ತ ತರಲು ಸಾಧ್ಯವಾಗುತ್ತದೆ.

Sunrise Facility Services, Sri sai Trust Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment