ಶಿವಮೊಗ್ಗ ಜಿಲ್ಲೆಯಲ್ಲಿ ರಣ ಬಿಸಿಲು, ಮುಂದಿನ 5 ದಿನ ಹೇಗಿರುತ್ತೆ ತಾಪಮಾನ? ಯಾರಿಗೆಲ್ಲ ಎಷ್ಟು ಸಮಸ್ಯೆಯಾಗಿದೆ?

Shivamogga-Live-Logo

ಒಣಗುತ್ತಿವೆ ಬೆಳೆ, ಚಿಂತೆಗೀಡಾದ ರೈತ

ರಣ ಬಿಸಿಲು ರೈತ ಸಮುದಾಯವನ್ನು ಚಿಂತೆಗೀಡು ಮಾಡಿದೆ. ಭತ್ತ, ಜೋಳದ ಬೆಳೆಗೆ ಹೆಚ್ಚು ನೀರು ಬೇಕು. ವಿಪರೀತ ಬಿಸಿಲಿನಿಂದಾಗಿ ನೀರಿಲ್ಲದೆ ರೈತರು ಬೇಸಿಗೆ ಬೆಳೆಯ ಯೋಚನೆ ಕೈಬಿಟ್ಟಿದ್ದಾರೆ. ಪಂಪ್‌ ಸೆಟ್‌, ಬಾವಿಗಳ ನಿರೀಕ್ಷೆಯಲ್ಲಿ ಬೆಳೆ ಬೆಳೆದವರು ಈಗ ನೀರಿನ ಅಭಾವದಿಂದ ಪರಿತಪಿಸುತ್ತಿದ್ದಾರೆ. ಅಡಿಕೆ ತೋಟಗಳು ಕೂಡ ಒಣಗುತ್ತಿದ್ದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. (ಈ ಸುದ್ದಿಯನ್ನು ಇನ್ನು 41 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

no water in Anjanapura Dam in Shikaripura

ಮರಗಳನ್ನೆಲ್ಲ ಕಡಿದು ಈಗ ನೆರಳಿಗೆ ಹುಡುಕಾಟ

ರಸ್ತೆ ಅಗಲೀಕರಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ನಗರದ ವಿವಿಧೆಡೆ ಮರಗಳ ಕಡಿತಲೆ ಮಾಡಲಾಗಿದೆ. ಈಗ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನರು ಬೆರಳೆಣಿಕೆ ಮರಗಳ ನೆರಳು ಅರಸುತ್ತಿದ್ದಾರೆ. ಮರದ ನೆರಳು ಇರುವೆಡೆ ವಾಹನಗಳ ಪಾರ್ಕಿಂಗ್‌ಗೆ ನೂಕುನುಗ್ಗಲು ಉಂಟಾಗುತ್ತಿದೆ. ಟ್ರಾಫಿಕ್‌ ಸಿಗ್ನಲ್‌ಗಳಲ್ಲಿ ಮರಗಳ ಕೆಳಗೆ, ಬಸ್ಸು, ಲಾರಿಗಳ ನೆರಳಿನಲ್ಲಿ ವಾಹನಗಳನ್ನು ನಿಲ್ಲಿಸಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ.

ಮುಂದಿನ ಐದು ದಿನ ಹೇಗಿರುತ್ತೆ ಹವಾಮಾನ? ಬೂತ್‌ ಕಾರ್ಯಕರ್ತರಿಗೆ ತಲೆನೋವಾದ ಬಿಸಿಲ ಝಳ, ಹೇಗದು – ಓದಲು ಕೆಳಗಿರುವ NEXT ಬಟನ್‌ ಕ್ಲಿಕ್‌ ಮಾಡಿ 

sunny-shimoga-and-Anjanapura-dam-in-Shikaripura

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment