ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
THIRTHAHALLI, 27 JULY 2024 : ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆ ಅಬ್ಬರಕ್ಕೆ ಹಲವು ಕಡೆ ಆಸ್ತಿಪಾಸ್ತಿ ಹಾನಿಯಾಗಿದೆ (Effect). ಜನರು ತತ್ತರಿಸಿದ್ದಾರೆ. ಇವತ್ತು ಮಳೆಯ ಪ್ರಮಾಣ ತುಸು ಕಡಿಮೆಯಾಗಿದೆ. ತಾಲೂಕಿನಲ್ಲಿ ಎಲ್ಲೆಲ್ಲಿ ಏನೇನಾಗಿದೆ? ಇಲ್ಲಿದೆ ಡಿಟೇಲ್ಸ್.
ತೀರ್ಥಹಳ್ಳಿ ತಾಲೂಕಿನಲ್ಲಿ ಕಳೆದ 24 ಗಂಟೆಯಲ್ಲಿ ಸರಾಸರಿ 99.70 ಮಿ.ಮೀ ಮಳೆಯಾಗಿದೆ. ಆಗುಂಬೆಯಲ್ಲಿ – 167.4 ಮಿ.ಮೀ, ಆರಗ – 139.4 ಮಿ.ಮೀ, ದೇವಂಗಿ – 77.0 ಮಿ.ಮೀ, ಅರಳಸುರುಳಿ – 88.6 ಮಿ.ಮೀ, ಕೋಣಂದೂರು – 153.8 ಮಿ.ಮೀ, ಮಾಳೂರು – 203.2 ಮಿ.ಮೀ, ಮೇಗರವಳ್ಳಿ – 152.6 ಮಿ.ಮೀ, ತೀರ್ಥಹಳ್ಳಿ – 120.2 ಮಿ.ಮೀ, ಕನ್ನಂಗಿ – 140.8 ಮಿ.ಮೀ, ಮೃಗವಧೆ – 102.4 ಮಿ.ಮೀ, ಮಂಡಗದ್ದೆ – 137.0 ಮಿ.ಮೀ, ಹುಂಚದಕಟ್ಟೆ – 60.2 ಮಿ.ಮೀ ಮಳೆಯಾಗಿದೆ. ಶಿವಮೊಗ್ಗ ಲೈವ್.ಕಾಂ ಎಲ್ಲೆಲ್ಲಿ ಎಷ್ಟಾಗಿದೆ ಮಳೆ?
ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ರಾಮಪ್ಪ (26) ಮೃತಪಟ್ಟಿದ್ದಾರೆ. ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೀನ್ಮನೆಕೊಪ್ಪದಲ್ಲಿ ಶುಕ್ರವಾರ ರಾತ್ರಿ ಘಟನೆ ಸಂಭವಿಸಿದೆ. ಬಹು ಹೊತ್ತಾದರು ಕೋಣಂದೂರಿಗೆ ತೆರಳಿದ್ದ ರಾಮಪ್ಪ ಮನೆಗೆ ಬಾರದ ಹಿನ್ನೆಲೆ ಕುಟುಂಬದವರು ಹುಡುಕಾಟ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ್ ಕುಕ್ಕೆ, ತಾಲೂಕು ಬಿಜೆಪಿ ಕಾರ್ಯದರ್ಶಿ ಮಧುರಾಜ್ ಹೆಗ್ಡೆ ಸ್ಥಳಕ್ಕೆ ಭೇಟಿ ನೀಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ. ಶಿವಮೊಗ್ಗ ಲೈವ್.ಕಾಂ ಮರ ಬಿದ್ದು ಯುವಕ ಸಾವು
ರಾಷ್ಟ್ರೀಯ ಹೆದ್ದಾರಿ 169ಎ ನಲ್ಲಿ ಈ ಮೊದಲು ಕುಸಿದಿದ್ದ ಜಾಗದಲ್ಲೇ ಶುಕ್ರವಾರ ಮತ್ತೊಮ್ಮೆ ಧರೆ ಕುಸಿಯುತ್ತಿದೆ. ಸುರಕ್ಷತೆ ದೃಷ್ಟಿಯಿಂದ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಭಾರಿ ಮಳೆಯಾಗುತ್ತಿರುವ ಕಾರಣ ಧರೆ ಕುಸಿಯುತ್ತಿದ್ದು ಭಾರಿ ಪ್ರಮಾಣದ ಮಣ್ಣು ತಡೆಗೋಡೆಯನ್ನು ಮೀರಿ ಹೆದ್ದಾರಿಗೆ ಬಿದ್ದಿದೆ. ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಆಗದಿದ್ದರೂ ಸುರಕ್ಷತೆ ದೃಷ್ಟಿಯಿಂದ ಬ್ಯಾರಿಕೇಡ್ ಹಾಕಿ ಮಾರ್ಗ ಬಂದ್ ಮಾಡಲಾಗಿದೆ. ಶಿವಮೊಗ್ಗ ಲೈವ್.ಕಾಂ ಬೈಪಾಸ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್
ಜೋರು ಗಾಳಿ, ಮಳೆಗೆ ಪಟ್ಟಣದ ವಿವಿಧೆಡೆ ಮನೆಗಳ ಗೋಡೆ, ಕಾಂಪೌಂಡ್ಗಳು ಕುಸಿದಿವೆ. ಕುಶಾವತಿಯಲ್ಲಿರುವ ಸಹ್ಯಾದ್ರಿ ಆಂಗ್ಲ ಮಾಧ್ಯಮ ಶಾಲೆಯ ಕಾಂಪೌಂಡ್ ಗೋಡೆ ಕುಸಿದಿದೆ. ರಥಬೀದಿಯಲ್ಲಿರುವ ಸ್ಪೂರ್ತಿ ಕಿರಣ್ ಎಂಬುವವರ ಮನೆ ಗೋಡೆ ಕುಸಿದಿದೆ. ಮಿಲ್ ಕೇರಿಯ ಉದಯ ಮಡಿವಾಳ ಹಾಗೂ ಬೆಟ್ಟಮಕ್ಕಿ ಬಡಾವಣೆಯ ಜನಾರ್ದನ ಆಚಾರ್ ಮನೆಗಳಿಗೆ ಹಾನಿಯಾಗಿದೆ. ಶಿವಮೊಗ್ಗ ಲೈವ್.ಕಾಂ ಪಟ್ಟಣದಲ್ಲಿ ಮನೆಗಳ ಗೋಡೆ, ಕಾಂಪೌಂಡ್ ಕುಸಿತ
ತಾಲೂಕಿನ ವಿವಿಧೆಡೆ ಧರೆ ಕುಸಿತದಿಂದ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುನ್ನೂರು ಗ್ರಾಮದಲ್ಲಿ ರಸ್ತೆ ಕುಸಿದಿದ್ದು ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಹಣಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಣಿಗದ್ದೆ – ಅಲಸೆ ದೇವಸ್ಥಾನದ ರಸ್ತೆಯಲ್ಲಿ ಧರೆ ಕುಸಿತವಾಗಿದೆ. ಜನರು ಭಯದಲ್ಲಿ ಓಡಾಡುತ್ತಿದ್ದಾರೆ. ಶಿವಮೊಗ್ಗ ಲೈವ್.ಕಾಂ ಗ್ರಾಮಗಳ ಸಂಪರ್ಕ ಕಡಿತ
ಅಗಳಬಾಗಿಲು ಗ್ರಾಮದ ಹಿಸಣ ಮಜರೆ ಹಳ್ಳಿಯಲ್ಲಿ 25ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ನೊಣಬೂರು ಗ್ರಾಪಂ ವ್ಯಾಪ್ತಿ ಕೋದೂರು ಸಮೀಪದ ಯಮರಳ್ಳಿಯ ಪುಟ್ಟಪ್ಪ ಹಾಗೂ ಹೊಸಕೆರೆ ಗ್ರಾಮದ ಮಾನಪ್ಪ ಗೌಡರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದೆ. ಹುರುಳಿ ಗ್ರಾಮದ ಗೋಪಾಲ ಭಟ್ ಮನೆ, ಬೆಜ್ಜವಳ್ಳಿ ಗ್ರಾಪಂ ಶೀಕೆ ಗ್ರಾಮದ ಲಕ್ಷ್ಮಮ್ಮ ಅವರ ಮನೆ ಮುಂಭಾಗದಲ್ಲಿರುವ ಅಂಗಡಿ ಮೇಲೆ ಮರ ಬಿದ್ದು ಮಾಡಿಗೆ ಹಾನಿಯಾಗಿದೆ. ಶಿವಮೊಗ್ಗ ಲೈವ್.ಕಾಂ ವಿವಿಧೆಡೆ ಧರೆಗುರುಳಿದ ಮರಗಳು
ತುಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ರಾಮಮಂಟಪ ಬಹುತೇಕ ಮುಳುಗಿದೆ. ಮಾಲತಿ ನದಿಯಲ್ಲಿ ಬಂದಿರುವ ಪ್ರವಾಹದಿಂದ ಕಲ್ಮನೆ ಲಕ್ಕುಂದ ಭಾಗದಲ್ಲಿ ಅಡಕೆ ತೋಟ ಮತ್ತು ಕೃಷಿ ಭೂಮಿಜಲಾವೃತವಾಗಿವೆ. ಕನ್ನಂಗಿ ಸಮೀಪದ ಕುಂಟೆಹಳ್ಳ, ಪಟ್ಟಣ ಸಮೀಪದ ಕುಶಾವತಿ ನದಿ, ಆರಗ ಬಳಿಯ ಗೋಪಿನಾಥ ಹಳ್ಳಗಳೂ ಅಪಾಯ ಮಟ್ಟದಲ್ಲಿ ಹರಿಯುತ್ತಿವೆ.ಅಪಾಯದ ಮಟ್ಟದಲ್ಲಿ ಹಳ್ಳ, ಕೊಳ್ಳಗಳು
ಇದನ್ನ ಓದಿ ⇓
ತುಂಗಾ ಡ್ಯಾಂನಿಂದ ಭಾರಿ ಪ್ರಮಾಣದ ನೀರು ಹೊರಕ್ಕೆ, ಭರ್ತಿಯ ಸನಿಹಕ್ಕೆ ಭದ್ರಾ, ಲಿಂಗನಮಕ್ಕಿ, ಎಷ್ಟಿದೆ ಒಳ ಹರಿವು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422