ಮಹಿಳಾ ಅಧಿಕಾರಿಗೆ ಫೋನಿನಲ್ಲಿ ಅವಾಚ್ಯವಾಗಿ ನಿಂದನೆ, ಫೇಸ್‌ಬುಕ್‌ನಲ್ಲಿ ವಿಡಿಯೋ ಪ್ರಕಟ, ಏನಿದು ಪ್ರಕರಣ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS, 10 FEBRUARY 2025

ಶಿವಮೊಗ್ಗ : ಮರಳು ಅಡ್ಡೆ ಮೇಲೆ ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರಿಗೆ (Officer) ವ್ಯಕ್ತಿಯೊಬ್ಬ ಫೋನಿನಲ್ಲಿ ಅವಾಚ್ಯವಾಗಿ ನಿಂದಿಸುತ್ತಿರುವ ವಿಡಿಯೋ ಬಹಿರಂಗವಾಗಿದೆ. ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ತಮ್ಮ ಫೇಸ್‌ಬುಕ್‌ನಲ್ಲಿ ಈ ವಿಡಿಯೋ ಪ್ರಕಟಿಸಿದ್ದಾರೆ.

ಏನಿದೆ ವಿಡಿಯೋದಲ್ಲಿ?

ರವಿಕೃಷ್ಣ ರೆಡ್ಡಿ ಅವರು 47 ಸೆಕೆಂಡ್‌ನ ವಿಡಿಯೋ ಬಹಿರಂಗಪಡಿಸಿದ್ದಾರೆ. ಅದರಲ್ಲಿ ಹೊಳೆ ನೀರಿನಲ್ಲಿ ನಡೆದು ಬರುವ ವ್ಯಕ್ತಿಯೊಬ್ಬ ‘ಮೇಡಂ, ಸಾಹಬ್ರು ಲೈನ್‌ನಲ್ಲಿದ್ದಾರೆʼ ಎಂದು ಫೋನ್‌ ತೋರಿಸುತ್ತಾನೆ. ‘ನಮ್ಮ ಮೊಬೈಲ್‌ಗೆ ಫೋನ್‌ ಮಾಡಲು ತಿಳಿಸಿ’ ಎಂದು ಮಹಿಳಾ ಅಧಿಕಾರಿ ಆ ವ್ಯಕ್ತಿಗೆ ಸೂಚಿಸುತ್ತಾರೆ. ‘ಅಣ್ಣ ಅವರ ಫೋನಿಗೆ ಮಾಡಬೇಕಂತೆ’ ಅಂತಾ ವ್ಯಕ್ತಿ ತಿಳಿಸುತ್ತಿದ್ದಂತೆ ಅತ್ತ ಫೋನಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಆರಂಭವಾಗುತ್ತದೆ. ಇದರಿಂದ ಆಕ್ರೋಶಗೊಳ್ಳುವ ಅಧಿಕಾರಿ ‘ನೆಟ್ಟಗೆ ಮಾತನಾಡಿ. ಒಬ್ಬ ಅಧಿಕಾರಿಗೆ ಹೀಗೆ ಮಾತನಾಡುತ್ತಿದ್ದೀರʼ ಎಂದು ಗದರಿದ್ದಾರೆ. ‘ಅಣ್ಣ, ನೀವೆ ಒಮ್ಮೆ ಸ್ಪಾಟ್‌ಗೆ ಬನ್ನಿ. ಡಿವೈಎಸ್‌ಪಿಯಲ್ಲ ಇಲ್ಲಿಗೆ ಬರುತ್ತಿದ್ದಾರಂತೆ. ಐದು ನಿಮಷ ಬಾರಣ್ಣ’ ಅಂತಾ ಹಿಂಬದಿಯಿಂದ ಧ್ವನಿ ಕೇಳಿಸುತ್ತದೆ.

ravi-krishna-reddy-facbook-post-of-mines-and-geology-department-officer.

ಶಾಸಕರೊಬ್ಬರ ಪುತ್ರ’, ರವಿಕೃಷ್ಣರೆಡ್ಡಿ ಆರೋಪ

ಮಹಿಳಾ ಅಧಿಕಾರಿಗೆ ಬೆದರಿಕೆ ಒಡ್ಡಿದ ವ್ಯಕ್ತಿ ಶಾಸಕರೊಬ್ಬರ ಪುತ್ರ ಎನ್ನಲಾಗುತ್ತಿದೆ ಎಂದು ರವಿಕೃಷ್ಣಾರೆಡ್ಡಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಅಧಿಕಾರಿಗೆ ಕೂಡಲೆ ರಕ್ಷಣೆ ನೀಡಬೇಕು. ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಬೆದರಿಕೆ ಹಾಕಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರವಿಕೃಷ್ಣ ರೆಡ್ಡಿ ಆಗ್ರಹಿಸಿದ್ದಾರೆ.

Parishrama

ಇದನ್ನೂ ಓದಿ » ಮಹಿಳೆಯರೆ ಭೀಮರಾಜ್‌ ಬಗ್ಗೆ ಹುಷಾರ್‌, ಈತನ ಮೇಲಿದೆ ಒಂದು ಡಜನ್‌ ಕೇಸ್‌, ಏನಿದು ಪ್ರಕರಣ?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment