ಮಹಿಳೆಯರೆ ಭೀಮರಾಜ್‌ ಬಗ್ಗೆ ಹುಷಾರ್‌, ಈತನ ಮೇಲಿದೆ ಒಂದು ಡಜನ್‌ ಕೇಸ್‌, ಏನಿದು ಪ್ರಕರಣ?

SHIVAMOGGA LIVE NEWS, 10 FEBRUARY 2025

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಶಿವಮೊಗ್ಗ : ಮ್ಯಾಟ್ರಿಮೋನಿ (Matrimony) ವೆಬ್‌ಸೈಟ್‌ಗಳಲ್ಲಿ ಮಹಿಳೆಯರನ್ನು ಪರಿಚಯ ಮಾಡಿಕೊಂಡು, ಮದುವೆ ಆಗುವುದಾಗಿ ನಂಬಿಸಿ, ಕೊನೆಗೆ ಹಣ, ಒಡವೆ ಪಡೆದು ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯಾದ್ಯಂತ ವಿವಿಧೆಡೆ ಇದೇ ರೀತಿ ಈತ ಮಹಿಳೆಯರನ್ನು ವಂಚಿಸಿದ್ದ. ಈತನ ವಿರುದ್ಧ ಭದ್ರಾವತಿ, ಹೊಸನಗರ ಸೇರಿದಂತೆ ವಿವಿಧ ಠಾಣೆಯಲ್ಲಿ 12 ಪ್ರಕರಣ ದಾಖಲಾಗಿದೆ.

ವಿಜಯಪುರ ಜಿಲ್ಲೆಯ ಹಿಟ್ಟಿನಹಳ್ಳಿ ಗ್ರಾಮದ ಭೀಮರಾಜ್‌ ಅಲಿಯಾಸ್‌ ಜೈಭೀಮ್‌ (40) ಬಂಧಿತ.

Nanjappa Hospital Advertisement

ಭದ್ರಾವತಿ ಮಹಿಳೆಗೆ ಮೋಸ

ಭೀಮರಾಜ್‌ ಅಲಿಯಾಸ್‌ ಜೈಭೀಮ್‌ ಪದಕೋಠಿ ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳಲ್ಲಿ ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಮದುವೆ ಆಗುವುದಾಗಿ ನಂಬಿಸಿ ಹಣ, ಚಿನ್ನಾಭರಣ ಪಡೆಯುತ್ತಿದ್ದ. ಭದ್ರಾವತಿಯ 40 ವರ್ಷ ಮಹಿಳೆಯೊಬ್ಬರಿಗೆ ಇದೇ ರೀತಿ ವಂಚನೆ ಮಾಡಿದ್ದ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

matrimony-website-case-one-arrested.

ಭದ್ರಾವತಿ ಮಹಿಳೆಯಿಂದ ಫೋನ್‌ ಪೇ ಮೂಲಕ 5.43 ಲಕ್ಷ ರೂ. ಹಣ ವರ್ಗಾಯಿಸಿಕೊಂಡಿದ್ದ. 2 ಲಕ್ಷ ರೂ. ನಗದು ಹಣ, ಸುಮಾರು 2.25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ್ದ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮದುವೆ ಆಗಿದ್ದನ್ನೆ ಮರೆಮಾಚುತ್ತಿದ್ದ

ಭೀಮರಾಜ್‌ಗೆ ಈಗಾಗಲೇ ಮದುವೆಯಾಗಿದೆ. ಹಾಗಿದ್ದು ತಾನು ವಿವಾಹಿತ ಅನ್ನುವುದನ್ನು ಮರೆಮಾಚಿ ಮ್ಯಾಟ್ರಿಮೋನಿ ವೆಬ್‌ಸೈಟುಗಳಲ್ಲಿ ಮಹಿಳೆಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಮದುವೆ ಆಗುವುದಾಗಿ ನಂಬಿಸಿ ವಂಚಿಸುತ್ತಿದ್ದ ಎಂದು ಆರೋಪಿಸಲಾಗಿದೆ.

Parishrama

ಒಂದು ಡಜನ್‌ ಪ್ರಕರಣಗಳು

ಇದೇ ರೀತಿ ರಾಜ್ಯಾದ್ಯಂತ ಈತ ಮಹಿಳೆಯರನ್ನು ವಂಚಿಸಿದ್ದಾನೆ. ವಿವಿಧ ಪೊಲೀಸ್‌ ಠಾಣೆಗಳಲ್ಲಿ ಭೀಮರಾಜ್‌ ವಿರುದ್ಧ 12 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಭದ್ರಾವತಿಯ ಹಳೇ ನಗರ ಠಾಣೆ ಮತ್ತು ಹೊಸನಗರ ಪೊಲೀಸ್‌ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಈಗಾಗಲೇ ಈತನ ಬಂಧಿತನಾಗಿದ್ದು ಕೊಪ್ಪಳದ ಕಾರಾಗೃಹದಲ್ಲಿದ್ದಾನೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮ್ಯಾಟ್ರಿಮೋನಿ ವೆಬ್‌ಸೈಟ್‌ಗಳು, ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚತರನ್ನು ನಂಬಿ ಮೋಸ ಹೋಗದಂತೆ ಪೊಲೀಸರು ಎಚ್ಚರಿಸಿದ್ದಾರೆ.

ಇದನ್ನೂ ಓದಿ » ಸಾಗರ ಮಾರಿ ಜಾತ್ರೆಗು ಮೊದಲು ರಸ್ತೆ ಅಗಲೀಕರಣ ಪೂರ್ಣ, ಯಾವ್ಯಾವ ರಸ್ತೆ ಕುರಿತು MLA ಹೇಳಿದ್ದೇನು?

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment